ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಯುವ ಸಂಗಮ ಪೋಸ್ಟರ್​ ಬಿಡುಗಡೆ ಮಾಡಿದರು. ಡಾ.ಜಗದೀಶ ಬಿರಾದಾರ್​, ಡಾ.ಕೋಟ ಸಾಯಿಕೃಷ್ಣ ಇದ್ದರು. 
ರಾಜ್ಯ

ದೇಶದ ಮೌಲ್ಯ ಬಲಪಡಿಸುವ ಉದ್ದೇಶ

ಪ್ರಮುಖ ಮುಖ್ಯಾಂಶಗಳು

  • ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿಕೆ
  • ಸಿಯುಕೆನಲ್ಲಿ ಯುವ ಸಂಗಮ ಪೋಸ್ಟರ್​ ಬಿಡುಗಡೆ
ಕಲಬುರಗಿ: ದೇಶದ ಯುವಜನತೆ ಮಧ್ಯೆ ಭಾವನಾತ್ಮಕ ಬಾಂಧವ್ಯ ಗಟ್ಟಿ ಹಾಗೂ ಪರಸ್ಪರ ತಿಳಿವಳಿಕೆ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಕೇಂದ್ರದ ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯ ಏಕ್​ ಭಾರತ್​ ಶ್ರೇಷ್ಠ ಭಾರತ್​ ಯೋಜನೆಯಡಿ ಆಯೋಜಿಸಲಾಗುವ ಯುವ ಸಂಗಮ ಶೈಕ್ಷಣಿಕ ಹಾಗೂ ಸಾಂಸತಿಕ ವಿನಿಮಯ ಕಾರ್ಯಕ್ರಮದ 7ನೇ ಹಂತದ ಪೋಸ್ಟರ್​ ಬುಧವಾರ ಬಿಡುಗಡೆ ಮಾಡಿ ಮಾತನಾಡಿ, ಜೋಡಿ ರಾಜ್ಯಗಳು ಮತ್ತು ಜೋಡಿ ಶಿಕ್ಷಣ ಸಂಸ್ಥೆಗಳ ಮಧ್ಯೆ ಆಯೋಜಿಸಲಾಗುವ ಪರಸ್ಪರ ಅಧ್ಯಯನ ಹಾಗೂ ಪರಿಚಯ ಭೇಟಿಗಳ ಮೂಲಕ ವೈವಿಧ್ಯತೆಯಲ್ಲಿ ಏಕತೆ ಎಂಬ ಭಾರತದ ಮೂಲಭೂತ ಮೌಲ್ಯವನ್ನು ಬಲಪಡಿಸಲಾಗುತ್ತಿದೆ ಎಂದರು.
ದೇಶದ ಐಐಟಿ, ಐಐಎಂ, ಕೇಂದ್ರೀಯ ವಿವಿಗಳು ಹಾಗೂ ಎನ್​ಐಟಿ ಸೇರಿ ಒಟ್ಟು 20 ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಈ ಕಾರ್ಯಕ್ರಮದ ನೋಡಲ್​ ಸಂಸ್ಥೆಗಳಾಗಿ ಗುರುತಿಸಲಾಗಿದೆ. ಆಯ್ಕೆಯಾದ ಯುವಕರು ಸುಮಾರು 5 ರಿಂದ 7 ದಿನ ಶೈಕ್ಷಣಿಕ ಪ್ರವಾಸ ಮಾಡಲಿದ್ದಾರೆ. ಸ್ಥಳಿಯ ಸಂಸತಿ, ಸಂಪ್ರದಾಯ, ಶಿಕ್ಷಣ ಸಂಸ್ಥೆಗಳು, ಆಡಳಿತ ವ್ಯವಸ್ಥೆ, ನವೋದ್ಯಮ, ಕೈಗಾರಿಕೆ, ಪರಿಸರ ವ್ಯವಸ್ಥೆ, ಐತಿಹಾಸಿಕ ಹಾಗೂ ಪರಂಪರೆಯ ತಾಣ ಮತ್ತು ಸಮುದಾಯ ಜೀವನ ಅಧ್ಯಯನ ಮಾಡಲಿದ್ದಾರೆ ಎಂದು ವಿವರಿಸಿದರು.
ಯುವ ಸಂಗಮ ಆನ್​ಲೈನ್​ ನೋಂದಣಿಗೆ ಆ.31 ಕೊನೇ ದಿನವಾಗಿದೆ. 18&30 ವರ್ಷದೊಳಗಿನ ಉನ್ನತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಎನ್​ಎಸ್​ಎಸ್​/ಎನ್​ವೈಕೆಎಸ್​ ಸ್ವಯಂಸೇವಕರು ಹಾಗೂ ಯುವ ವೃತ್ತಿಪರರು ಅಧಿಕೃತ ಯುವ ಸಂಗಮ ಪೋರ್ಟಲ್​ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಪರ್ಯಟನ (ಪ್ರವಾಸೋದ್ಯಮ), ಪರಂಪರಾ (ಸಂಪ್ರದಾಯ ಮತ್ತು ಸಂಸತಿ), ಪ್ರಗತಿ (ಅಭಿವೃದ್ಧಿ ಮತ್ತು ಆಡಳಿತ), ಪರಸ್ಪರ ಸಂಪರ್ಕ (ಜನರಿಂದ ಜನರಿಗೆ ಸಂಪರ್ಕ) ಹಾಗೂ ಪ್ರದ್ಯೋಗಿಕಿ (ತಂತ್ರಜ್ಞಾನ ಮತ್ತು ನವೋದ್ಯಮ) ಎಂಬ ಅಂಶಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ&2020 ಆಶಯಗಳಿಗೆ ಅನುಗುಣವಾಗಿ ಭಾರತದ ಸಾಂಸತಿಕ, ಭಾಷಿಕ, ಶೈಕ್ಷಣಿಕ ಮತ್ತು ಅಭಿವೃದ್ಧಿಯ ವೈವಿಧ್ಯತೆ ಆಳವಾಗಿ ಅರಿತುಕೊಳ್ಳಲಿದ್ದು, ಪರಸ್ಪರ ತಿಳಿವಳಿಕೆ, ರಾಷ್ಟ್ರೀಯ ಏಕತೆ ಮತ್ತು ಏಕ್​ ಭಾರತ್​ ಶ್ರೇಷ್ಠ ಭಾರತ್​ ಮನೋಭಾವ ಮತ್ತಷ್ಟು ಬಲಪಡಿಸಲಿದೆ ಎಂದರು.
ಯುವ ಸಂಗಮ ಕಾರ್ಯಕ್ರಮ ಸಂಯೋಜಕ ಡಾ.ಜಗದೀಶ ಬಿರಾದಾರ್​, ಭಾಷಾಶಾಸ ವಿಭಾಗದ ಮುಖ್ಯಸ್ಥ ಡಾ.ಕೋಟ ಸಾಯಿ ಕೃಷ್ಣ, ಯುವಸಂಗಮದ ನೋಡಲ್​ ಅಧಿಕಾರಿ ಡಾ.ಶಿವ ಇತರರಿದ್ದರು.
"

ಸಿಯುಕೆಯ ಜೋಡಿ ಸಂಸ್ಥೆಯಾಗಿ ಮಧ್ಯಪ್ರದೇಶದ ಭೋಪಾಲ್​ನ ಸ್ಕೂಲ್​ ಆಫ್​ ಪ್ಲಾನಿಂಗ್​ ಅಂಡ್​ ಆರ್ಕಿಟೆಕ್ಚರ್​ ಆಯ್ಕೆಯಾಗಿದೆ. ಶ್ರೀದಲ್ಲೇ ಎಸ್​ಪಿಎ, ಭೋಪಾಲ್​ನ ವಿದ್ಯಾರ್ಥಿಗಳ ತಂಡ ಕರ್ನಾಟಕ ಹಾಗೂ ಸಿಯುಕೆಗೆ ಭೇಟಿ ನೀಡಲಿದ್ದು, ಸಿಯುಕೆ ವಿದ್ಯಾರ್ಥಿಗಳ ತಂಡ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿನ ಶೈಕ್ಷಣಿಕ ಮತ್ತು ಸಾಂಸತಿಕ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ.

— > ಪ್ರೊ.ಬಟ್ಟು ಸತ್ಯನಾರಾಯಣ, ಕುಲಪತಿ, ಸಿಯುಕೆ