ಕೊಟ್ಟೂರಿನಲ್ಲಿ ಆಹಾರ ಸುರಕ್ಷತಾಧಿಕಾರಿ ಉದಯ ಮುದ್ದೇಬಿಹಾಳ ಅವರು ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಟೆಸ್ಟಿಂಗ್ ಪೌಡರ್, ಕಲರ್ ಪೌಡರ್ ವಶಕ್ಕೆ ಪಡೆದರು. 
ರಾಜ್ಯ

ಪಾನಿಪುರಿಯಲ್ಲಿ ಟೆಸ್ಟಿಂಗ್ ಪೌಡರ್, ಜ್ಯೂಸ್‌ನಲ್ಲಿ ಕಲರ್ ಮಿಕ್ಸ್!

ಪ್ರಮುಖ ಮುಖ್ಯಾಂಶಗಳು

  • ಆಹಾರ ಸುರಕ್ಷತಾಧಿಕಾರಿಯಿಂದ ಪರಿಶೀಲನೆ
  • ನಿಯಮ ಉಲ್ಲಂಘಿಸಿದ ವ್ಯಾಪಾರಿಗಳಿಗೆ ನೋಟಿಸ್
ಎಗ್ ರೈಸ್ ಅಂಗಡಿಗಳಲ್ಲಿನ ಆರೋಗ್ಯಕ್ಕೆ ಹಾನಿಕಾರಕ ಟೆಸ್ಟಿಂಗ್ ಪೌಡರ್ ಹಾಗೂ ಜ್ಯೂಸ್ ಅಂಗಡಿಗಳಲ್ಲಿನ ಕಲರ್ ಪೌಡರ್‌ಗಳನ್ನು ವಶಕ್ಕೆ ಪಡೆದು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದರು. 
ಪಾನಿಪುರಿ ಅಂಗಡಿಗಳಲ್ಲಿ, ಹೋಟೆಲ್‌ಗಳಲ್ಲಿ ಶುದ್ಧ ನೀರು ಬಳಕೆ ಮತ್ತು ಆಹಾರ ಉತ್ಪಾದನೆಯಲ್ಲಿ ಗುಣಮಟ್ಟ, ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ, ವ್ಯಾಪಾರ ಸ್ಥಳದಲ್ಲಿ ನೈರ್ಮಲ್ಯ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.
ಗೋಬಿ ಸೆಂಟರ್‌ಗಳಲ್ಲಿ ಪರಿಶೀಲನೆ ಕೈಗೊಂಡು ಕಳಪೆ ಸಾಸ್ ಹಾಗೂ ಟೆಸ್ಟಿಂಗ್ ಪೌಡರ್ ಬಳಸದಂತೆ ಎಚ್ಚರಿಕೆ ನೀಡಿದರು. ಪಟ್ಟಣದ 20ಕ್ಕೂ ಹೆಚ್ಚು ಅಂಗಡಿಗಳ ಮೇಲೆ ದಾಳಿ ನಡೆಸುವ ಮೂಲಕ ಆಹಾರ ಸುರಕ್ಷತಾ ಬಗ್ಗೆ ಸಲಹೆ ನೀಡಿದರು. 
ವ್ಯಾಪಾರದ ದೃಷ್ಟಿಯಿಂದ ಕೆಲವರು ತಿನ್ನುವ ಪದಾರ್ಥಗಳಲ್ಲಿ ಹೆಚ್ಚಿನ ಟೆಸ್ಟಿಂಗ್ ಪೌಡರ್, ಬಣ್ಣಗಳನ್ನು ಉಪಯೋಗಿಸುತ್ತಿದ್ದು, ಈ ಬಗ್ಗೆ ಪೋಷಕರು ಗಮನಹರಿಸಿ, ಮಕ್ಕಳಿಗೆ ಇಂತಹ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸಬೇಕು. ವ್ಯಾಪಾರಿಗಳು ಆಹಾರ ಸುರಕ್ಷತೆಯಲ್ಲಿ ಬದಲಾಗದೇ ಹೋದರೆ, ಪರವಾನಗಿ ರದ್ದು ಮಾಡಿ, ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ತಿಳಿಸಿದರು.