ಹಿರೇಬಾಗೇವಾಡಿ: ತಾಲೂಕಿನ ಶಗಣಮಟ್ಟಿ ಗ್ರಾಮ ಬಳಿ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ವೇಳೆ ದಾಳಿ ಮಾಡಿರುವ ಹಿರೇಬಾಗೇವಾಡಿ ಠಾಣೆ ಪೊಲೀಸರು ಹತ್ತು ಜನರನ್ನು ಹಿಡಿದು, 1.22 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಸಾಂಬ್ರಾದ ಚೇತನ ಚಂದಗಡಕರ, ಸಂತೋಷ ಕೋಲಕಾರ, ಉಜ್ವಲ ನಗರದ ರಂಜಾನ್ ಮುಲ್ಲಾ, ಖತಾಲಹ್ಮದ್ ಭಕ್ಸಿ, ಆಸೀಫ್ ಬಾಗವಾನ್, ಖತಾಲಗಲ್ಲಿಯ ಮುದಸ್ಸರ್ ಮುಜಾವರ್, ಟಿಪ್ಪು ಸುಲ್ತಾನ ನಗರದ ಬಾಲಕೃಷ್ಣ ನಾಯಿಕ, ಜಾಲಗಾರ ಗಲ್ಲಿಯ ರಿಜ್ವಾನ್ ಬಾಗವಾನ್, ನ್ಯೂ ಗಾಂಧಿ ನಗರದ ಮೆಹಬೂಬಸಾಬ್ ಕಿಲ್ಲೇದಾರ್‌ಹಾಗೂ ಮಾಳಿಗಲ್ಲಿಯ ಸಯ್ಯದಯೂಸ್ು ಇನಾಮದಾರ್ ಸಿಕ್ಕಿಬಿದ್ದವರು.
ಹಲಗಾದ ಸಚಿನ ಶಿಂಧೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.