ಚಿಕ್ಕನಾಯಕನಹಳ್ಳಿ ತಾಲೂಕಿನ protest ಹೇಮಾವತಿ ನಾಲೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ಸತತ 7 ದಿನ ನಡೆದ ರೈತರ ಅಹೋರಾತ್ರಿಯನ್ನು ತಾತ್ಕಾಲಿಕವಾಗಿ ವಾಪಸ್​ ಪಡೆಯಲಾಯಿತು.  
ರಾಜ್ಯ

ನೀರಿಗಾಗಿ ನಡೆದ ಧರಣಿಗೆ ತಾತ್ಕಾಲಿಕ ವಿರಾಮ protest

ತುಮಕೂರು ಡೆಸ್ಕ್

ಪ್ರಮುಖ ಮುಖ್ಯಾಂಶಗಳು

  • ಪಾತೀತ ರೈತರ ಹೋರಾಟಕ್ಕೆ ಮಣಿದ ಅಧಿಕಾರಿಗಳು
  • ಶ್ರೀ ಕಾಮಗಾರಿ ಮುಗಿಸುವ ಭರವಸೆ
  • ಮೈಮರೆತ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ

ಚಿಕ್ಕನಾಯಕನಹಳ್ಳಿ-

ತಾಲೂಕಿನ 26 ಕೆರೆಗಳಿಗೆ ಕುಡಿಯುವ ನೀರು ಹರಿಸಲು

protest

18 ವರ್ಷಗಳ ಹಿಂದೆ ಘೋಷಣೆಯಾಗಿರುವ ಯೋಜನೆ ನನೆಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಬದುಕಿನ ಉಳುವಿಗಾಗಿ ರೈತರ ಮಕ್ಕಳು ತಾಲೂಕು ಕಚೇರಿ ಮುಂದೆ ಸತತ 7 ದಿನ ನಡೆಸಿದ ಅಹೋರಾತ್ರಿ ಧರಣಿಗೆ ತಾತ್ಕಾಲಿಕ ವಿರಾಮ ಸಿಕ್ಕಿದೆ.

ಹೇಮಾವತಿ ಇಲಾಖೆ ಇಂಜಿನಿಯರ್​ಗಳು ಕಾಮಗಾರಿಯನ್ನು ಪೂರ್ಣಗೊಳಿಸಲು ಕೆಲವು ದಿನಗಳ ಸಮಯಾವಾಶ ಕೋರಿದ್ದು, ಕಾಮಗಾರಿಗೆ ವೇಗ ನೀಡಿರುವ ಹಿನ್ನೆಲೆಯಲ್ಲಿ ಹೋರಾಟಗಾರರು ಸಭೆ ಸೇರಿ ಅಧಿಕಾರಿಗಳಿಗೆ ಮತ್ತೊಂದು ಅವಕಾಶ ನೀಡಲು ನಿರ್ಧರಿಸಿದರು. ಉದ್ದೇಶಿತ 26 ಕೆರೆಗಳಿಗೂ ನಾಲೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿ ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದರು.
ಬುಧವಾರ ಧರಣಿನಿತರ ಸ್ಥಳದಲ್ಲಿ ಪ್ರತಿಭಟನಾನಿರತ ರೈತರನ್ನು ಉದ್ದೇಶಿಸಿ ನೀರಾವರಿ ಹೊರಾಟ ಸಮಿತಿ ಅಧ್ಯಕ್ಷ ಶ್ಯಾವಿಗೆಹಳ್ಳಿ ಮಧು ಮಾತನಾಡಿ, ಕಳೆದ ಒಂದು ವಾರದಿಂದ ನಡೆದ ಹೋರಾಟ ತಾತ್ಕಾಲಿಕವಾಗಿ ಮುಂದೂಡಲು ಗುರು, ಹಿರಿಯಲು ನೀಡಿದ ಸಲಹೆಯನ್ನು ಒಪ್ಪಿದ್ದೇವೆ ಎಂದು ಘೋಷಿಸಿದರು.
ತಾಲೂಕಿನ ರೈತ ಮಕ್ಕಳ ಬಹುದಿನದ ಬೇಡಿಕೆಯಂತೆ ದ ಚಿಕ್ಕನಾಯಕನಹಳ್ಳಿ ಭಾಗದ ಚಾನಲ್​ನಲ್ಲಿ ನೀರು ಸರಾಗವಾಗಿ ಹರಿಯಬೇಕು. ದಬ್ಬೇಘಟ್ಟದ ಮೂಲಕ ನವಿಲೆಕೆರೆಗೆ ಕೂಡಲೇ ಹರಿಯಬೇಕು. ಚಿಕ್ಕನಾಯಕನಕಹಳ್ಳಿ ಹಾಗೂ ಪಟ್ಟದೇವರಕೆರೆ ಭಾಗದ ಚಾನಲ್​ ಕಲಸ ಸಂಪೂರ್ಣವಾಗಬೇಕು, ಇಲ್ಲವಾದರೆ ಯಾವುದೇ ಕ್ಷಣದಲ್ಲಿ ಧರಣಿಯನ್ನು ಪುನರಾರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹೇಮಾವತಿ ಹೋರಾಟ ಸಮಿತಿ ಹಿರಿಯ ಮುಖಂಡ ಡಾ.ಎಸ್​.ಜಿ.ಪರಮೇಶ್ವರಪ್ಪ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರು ಐತಿಹಾಸಿಕ ಹೋರಾಟಕ್ಕೆ ಮತ್ತೊಂದು ಮುನ್ನುಡಿ ಬರೆದಿದ್ದಾರೆ. ಸಾಕಷ್ಟು ಜನರ ಹೋರಾಟದ ಲವಾಗಿ ಜಾರಿಯಾದ ನೀರಾವರಿ ಯೋಜನೆ 18 ವರ್ಷದಿಂದ ನೆನೆಗುದಿಗೆ ಬೀಳಲು ಅಧಿಕಾರದಲ್ಲಿರುವವರ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಬೇಸರಿಸಿದರು.
ತಮ್ಮಡಿಹಳ್ಳಿ ಮಠದ ಡಾ.ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಸಂಕಲ್ಪ ಶಕ್ತಿ ಇದ್ದರೆ ಯಾವುದೇ ಹೋರಾಟಗಳು ಫಲಕೊಡುತ್ತವೆ ಇಂತಹ ಸಂಕಲ್ಪ ಇಟ್ಟುಕೊಂಡು ಕಳೆದ ಏಳು ದಿನಗಳಿಂದ ರೈತರೇ ನಡೆದ ಹೋರಾಟಕ್ಕೆ ಸರ್ಕಾರ, ತಾಲೂಕು ಆಡಳಿತ ಮಣಿದಿದ್ದು ಕೂಡಲೇ ನಾಲೆ ಕಾಮಗಾರಿ ಪೂರ್ಣವಾಗಲಿದೆ ಎಂದರು.
ಭೂಮಿ ನಂಬಿದವರೆಗೆ ಈ ಭೂಮಿ ಎಂದು ಮೋಸ ಮಾಡಿಲ್ಲ. ಅದರಂತೆ ರೈತರು ಈ ಭೂಮಿ ನಂಬಿದ್ದು ಅವರಿಗೆ ಬೇಕಾಗಿರುವಂತಹ ನೀರಾವರಿಯನ್ನು ನೀಡಬೇಕಾಗಿರುವುದು ಆಡಳಿತದ ಜವಾಬ್ದಾರಿ. ಅಧಿಕಾರಿಗಳನ್ನು ಎಚ್ಚರಿಸಲು ನಡೆಯುವ ರೈತ ಪರವಾದ ಹೋರಾಟದಲ್ಲಿ ಮಠಗಳು ಜತೆಗಿರಲಿವೆ ಎಂದು ಭರವಸೆ ನೀಡಿದರು.
ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ನಮ್ಮ ಭಾಗದ ಏತನೀರಾವರಿ ಯೋಜನೆಯಡಿ ಬರುತ್ತಿರುವಂತಹ ನಾಲ್ಕು ಕೆರೆಗಳಲ್ಲಿ ನಡುವನಹಳ್ಳಿಕೆರೆಗೆ ನೀರು ಹರಿಸಿದರೆ ಅದರ ಮೂಲಕ ಚಿಕ್ಕನಾಯಕನಹಳ್ಳಿ ಕೆರೆಗೆ ಹರಿಯುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇದರಿಂದ ಅಂತರ್ಜಲ ಹೆಚ್ಚಾಗುತ್ತದೆ. ಅದ್ದರಿಂದ ಇನ್ನಾದರು ಈ ನೀರಾವರಿಯನ್ನು ಸಂಪೂರ್ಣಗೊಳಿಸಬೇಕು ಎಂದರು.
ತಹಸೀಲ್ದಾರ್​ ಎಂ.ಮಮತಾ ಮಾತನಾಡಿ, ಹೇಮಾವತಿ ಇಂಜಿನಿಯರ್​ಗಳು, ಗುತ್ತಿಗೆದಾರರು ಜವಾಬ್ದಾರಿ ತೆಗೆದುಕೊಂಡು ಕೂಡಲೇ ಬಾಕಿ ಉಳಿದಿರುವ ಹೇಮಾವತಿ ನಾಲಾ ಕಾಮಗಾರಿ ಪೂರ್ಣಗೊಳಿಸುತ್ತೇವೆ. ರೈತರು ಪ್ರತಿಭಟನೆಯನ್ನು ಕೈಬಿಟ್ಟು ನಮ್ಮೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕೆಆರ್​ಎಸ್​ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್​, ಅಣೇಕಟ್ಟೆ ರಾಕೇಶ್​, ಮುದ್ದೇನಹಳ್ಳಿ ಕರಿಯಪ್ಪ, ಮಂಚಸಂದ್ರ ಡಾ.ಎಂ.ಟಿ.ಮಲ್ಲಿಕಾರ್ಜುನ್​, ಆಟೋಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್​, ಮರುಳಪ್ಪ, ಯದುಕುಮಾರ್​, ಯೋಗಿಶ್​, ರಾಮಲಿಂಗಯ್ಯ, ಸ್ವಾಮಿ, ಹೊಯ್ಸಳಕಟ್ಟೆ ಗಿರೀಶ್​, ಶಾಂತಕುಮಾರ್​, ಜಿ.ನಾಗರಾಜು ಮತ್ತಿತರರು ಇದ್ದರು.
ಮುಖ್ಯ ಕೆನಾಲ್​ನಿಂದ ಗ್ಯಾರೇಹಳ್ಳಿ ಭಾಗದವರೆಗೆ ಹರಿಯುವ ಮಾರ್ಗದಲ್ಲಿ 12 ಸೇತುವೆಗಳಿದ್ದು, ಇವುಗಳಲ್ಲಿ ಈಗಾಗಲೆ 9 ಸೇತುವೆಗಳಲ್ಲಿದ್ದ ಹೂಳನ್ನು ತೆಗೆಯಲಾಗಿದೆ. ಉಳಿದ 3 ಸೇತುವೆಗಳ ಕೆಳಗಡೆ ಹಾಗೂ ದಬ್ಬೇಘಟ್ಟದ ನಾಲಾ ಕಾಮಗಾರಿ ನೀರು ಹರಿಸುವ ವೇಳೆಗೆ ಸರಿಪಡಿಸಿ ಚಿಕ್ಕನಾಯಕನಹಳ್ಳಿ ಭಾಗದ ಭಾಗದ ನೀರು ಹರಿಸಲು ಹಗಲಿರುಳು ಶ್ರಮಿಸುತ್ತೇವೆ.
> ಚಂದ್ರಶೇಖರ್​, ಇಇ, ಹೇಮಾವತಿ ನಾಲಾ ವಿಭಾಗ