ಹೊಸಕೋಟೆ ತಾಲೂಕು ಕರಪನಹಳ್ಳಿಯಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಶರತ್​ ಬಚ್ಚೇಗೌಡ, ಹಿರಿಯ ಮುಖಂಡ ಬಿ.ಎನ್​.ಗೋಪಾಲಗೌಡ, ಬಮುಲ್​ ಒಕ್ಕೂಟದ ನಿರ್ದೇಶಕ ಬಿ.ವಿ.ಸತೀಶ್​ಗೌಡ, ಕೆ.ಎಂ.ಎಂ.ಮಂಜುನಾಥಗೌಡ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಇದ್ದರು.  
ರಾಜ್ಯ

ದೇಗುಲಗಳು ಶಾಂತಿ, ನೆಮ್ಮದಿಯ ತಾಣ / NANDAGUDI

ನಂದಗುಡಿ : ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ದೇವಾಲಯಗಳಿಗೆ ವಿಶೇಷ ಸ್ಥಾನವಿದೆ. ದೇವಾಲಯಗಳಿಗೆ ಹೋಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಶಾಸಕ ಶರತ್​ ಬಚ್ಚೇಗೌಡ ಹೇಳಿದರು.
ಹೊಸಕೋಟೆ ತಾಲೂಕು ಶಿವನಾಪುರ ಗ್ರಾಪಂ ವ್ಯಾಪ್ತಿಯ ಕರಪನಹಳ್ಳಿಯಲ್ಲಿ ಆಯೋಜಿಸಿದ್ದ ಶ್ರೀವಿನಾಯಕ, ಶ್ರೀಚೌಡೇಶ್ವರಿದೇವಿ ನೂತನ ದೇವಾಲಯ ಸಂಪ್ರೋಕ್ಷಣೆ, ಶ್ರೀಸುಗ್ಗಲಮ್ಮದೇವಿ ನೂತನ ಶಿಲಾ ವಿಗ್ರಹ, ವಿಮಾನಗೋಪುರ ಪುನರ್​ ಪ್ರತಿಷ್ಠಾಪನೆ, ಮಹಾ ಕುಂಬಾಭಿಷೇಕ, ಶ್ರೀರೇಣುಕಾ ಯಲ್ಲಮ್ಮದೇವಿ 26ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ದೇವಾಲಯಗಳು ಮನುಷ್ಯನಲ್ಲಿ ಮಾನವೀಯ ಸದ್ಗುಣಗಳನ್ನು ಬೆಳೆಸುವ ಪುಣ್ಯ ಕ್ಷೇತ್ರವಾಗಿದ್ದು, ನೆಮ್ಮದಿ, ಸುಖ&ಶಾಂತಿಗೆ ಎಲ್ಲರೂ ದೇವರ ಮೊರೆ ಹೋಗುತ್ತಾರೆ. ಗ್ರಾಮಗಳಲ್ಲಿ ಪರಸ್ಪರ ಸಾಮರಸ್ಯ ಬೆಳೆಸುವಲ್ಲಿ ದೇವಾಲಯಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.
ಶ್ರೀಕೃಷ್ಣನಂದಯಾದವ ಸ್ವಾಮೀಜಿ ಮಾತನಾಡಿ, ಸಮಸ್ಯೆ ಎದುರಾದಾಗ ಮನುಷ್ಯ ಶಾಂತಿಗಾಗಿ ಹುಡುಕುವುದು ದೇವರನ್ನು. ಆದ್ದರಿಂದ ದೇವಾಲಯಗಳು ಶಾಂತಿಗೆ ಪೂರಕ ವಾತಾವರಣ ನಿರ್ಮಿಸಬೇಕು. ದೇವಾಲಯಗಳಲ್ಲಿ ಆಡಂಬರ ಬೇಕಿಲ್ಲ ಎಂದರು.
ಶಿವನಾಪುರ ಶ್ರೀಆದಿಶಕ್ತಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀಪ್ರಣವಾನಂದಪುರಿ ಸ್ವಾಮೀಜಿ ಮಾತನಾಡಿ, ದೇವರ ಸನ್ನಿಧಿಯಲ್ಲಿ ಮೇಲು, ಕೀಳು, ಜಾತಿ, ಧರ್ಮದ ಬೇಧ-ಭಾವವಿಲ್ಲ. ನಿರ್ಮಲ ಭಕ್ತಿಯಿಂದ ನಿವೇದಿಸಿಕೊಂಡಲ್ಲಿ ಸಂಕಷ್ಟಗಳು ದೂರಾಗಿ, ಇಷ್ಟಾರ್ಥಗಳೂ ಸಿದ್ಧಿಸುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದ ಜನರನ್ನು ಒಗ್ಗೂಡಸಲಿವೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ಸಂಸತಿಯಲ್ಲಿ ಬೆಳೆದು ಬಂದಿದೆ ಎಂದು ಹೇಳಿದರು.
ಶುಭ ಮುಹೂರ್ತದಲ್ಲಿ ರಾಜ್ಯ ಪ್ರಶಸ್ತಿ ಪುರಸತ ವೇ.ಮೂ. ಸಿದ್ದಬಸವರಾಜಯ್ಯ ಸ್ವಾಮಿ ಹಾಗೂ ವೇದ ವಿದ್ವಾನ್​ ಆದರ್ಶಾರಾಧ್ಯ ಶಾಸ್ತ್ರಿಗಳ ಸಾನಿದ್ಯದಲ್ಲಿ ವಿವಿಧ ಬಗೆಯ ಪೂಜೆ, ಹೋಮ, ಪ್ರಾಣಪ್ರತಿಷ್ಠೆ, ವಿಮಾನಗೋಪುರ ಕಳಸ ಸ್ಥಾಪನೆ, ಕುಂಭಾಭಿಷೇಕ, ಅಷ್ಟೋತ್ತರ ನೇತ್ರೋಲನ ಮಹಾಮಂಗಳಾರತಿ, ಅನ್ನಸಂತರ್ಪಣೆ ಸೇವೆ ನಡೆಯಿತು.
ಉದ್ಯಮಿ ಕಲ್ಕೆರೆ ಕೆ.ಎಸ್​.ಮಹದೇವಯ್ಯ, ತಾಪಂ ಮಾಜಿ ಸದಸ್ಯ ಯರ್ರೇಗೌಡ, ಟಿಎಪಿಸಿಎಂಎಸ್​ ನಿರ್ದೇಶಕ ಪಿ.ನಾರಾಯಣಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಎಸ್​.ಎಂ.ರವಿ, ಮಾಜಿ ಉಪಾಧ್ಯಕ್ಷ ಕೆ.ಎನ್​.ಮಂಜುನಾಥ್​, ಎಂಪಿಸಿಎಸ್​ ಅಧ್ಯಕ್ಷ ಟಿ.ಮುನೇಗೌಡ, ಮುಖಂಡರಾದ ಕೆ.ಸಿ.ವೆಂಕಟೇಶಪ್ಪ, ಜಿ.ಶಾಂತಪ್ಪ, ಹೊಸಹಳ್ಳಿ ನಾಗರಾಜಪ್ಪ ಇತರರು ಇದ್ದರು.