ಎಲೆಕೊಡಿಗೆನಹಳ್ಳಿಯಲ್ಲಿ ನೂತನ ದೇವಾಲಯ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮ ಸಮಾರಂಭವನ್ನು ಸಂಸದ ಯದುವೀರ ಒಡೆಯರ್ ಉದ್ಘಾಟಿಸಿದರು. ಶ್ರೀ ರಂಭಾಪುರಿ, ಶ್ರೀಉಜ್ಜಯಿನಿ ಜಗದ್ಗುರುಗಳು, ಮತ್ತಿತರ ಮುಖಂಡರು ಉಪಸ್ಥಿತರಿದ್ದರು.  
ರಾಜ್ಯ

ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳು; ಶ್ರೀ ರಂಭಾಪುರಿ ಜಗದ್ಗುರುಗಳ ಅಭಿಮತ

ಪ್ರಮುಖ ಮುಖ್ಯಾಂಶಗಳು

  • ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳು
  • ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ ಜಗದ್ಗುರುಗಳ ಅಭಿಮತ
  • ಎಲೆಕೊಡಿಗೆನಹಳ್ಳಿಯಲ್ಲಿ ನೂತನ ದೇವಾಲಯ ಲೋಕಾರ್ಪಣೆ

ಬೆಂಗಳೂರು:ಭೌತಿಕ ಬದುಕಿನಲ್ಲಿಬಳಲಿ ಬಂದ ಜೀವಾತ್ಮರಿಗೆ ದೇವಾಲಯಗಳುಶಾಂತಿ ನೆಮ್ಮದಿ ನೀಡುವ ಕೇಂದ್ರಗಳಾಗಿವೆಎಂದು ಬಾಳೆಹೊನ್ನೂರು ಶ್ರೀರಂಭಾಪುರಿಡಾ. ವೀರಸೋಮೇಶ್ವರಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ.

ಭಾನುವಾರಮಾಗಡಿ ರಸ್ತೆಯ ಎಲೆಕೊಡಿಗೆನಹಳ್ಳಿಯಲ್ಲಿನೂತನವಾಗಿ ನಿರ್ಮಾಣಗೊಂಡ ಮಹಾಗಣಪತಿ,ನಂದಿ ಬಸವೇಶ್ವರಮತ್ತು ಪಂಚಮುಖಿ ಶಿವಲಿಂಗದ ಶಿಲಾದೇಗುಲ ಉದ್ಘಾಟನೆ,ಮೂರ್ತಿ ಪ್ರತಿಷ್ಠಾಪನೆಕಳಸಾರೋಹಣ ಅಂಗವಾಗಿ ಜರುಗಿದಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ಮನುಷ್ಯಯಾವಾಗಲೂ ಸುಖವನ್ನೇ ಬಯಸುತ್ತಾನೆ.ಸುಖದ ಮೂಲಧರ್ಮಾಚರಣೆಯಲ್ಲಿದೆ.ದೇವರು ಕೊಟ್ಟಕೊಡುಗೆ ಬೇರೆ ಯಾರೂ ಕೊಡಲುಸಾಧ್ಯವಿಲ್ಲ.ನಿಂತ ನೆಲ,ಕುಡಿಯುವ ನೀರು,ತಿನ್ನುವ ಅನ್ನಬೀಸುವ ಗಾಳಿ ಇವೆಲ್ಲವೂ ಭಗವಂತಕೊಟ್ಟ ಕೊಡುಗೆಗಳಾಗಿವೆ.ಶಿಥಿಲಗೊಂಡದೇವಸ್ಥಾನವನ್ನು ತೆಗೆದು ಶಿಲಾಮಯಭವ್ಯ ದೇವಾಲಯ ನಿರ್ಮಾಣ ಮಾಡಿರುವುದುಕೊಡಿಗೆನಹಳ್ಳಿ ಭಕ್ತರ ಭಕ್ತಿಶ್ರದ್ಧೆಗೆ ಸಾಕ್ಷಿಯಾಗಿದೆ.ಎಸ್.ನಂಜುಂಡೇಶಮುಂದಾಳತ್ವದಲ್ಲಿ ಶ್ರಮಿಸಿದಸಮಿತಿಯ ಎಲ್ಲ ಸದಸ್ಯರಿಗೆಜಗದ್ಗುರುಗಳು ಶುಭ ಹಾರೈಸಿದರು.

ಮೈಸೂರುರಾಜವಂಶಸ್ಥ,ಸಂಸದ ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್ಸಮಾರಂಭವನ್ನು ಉದ್ಘಾಟಿಸಿದರು.ಶಾಸಕ ಎಸ್.ಟಿ.ಸೋಮಶೇಖರ್,ಮಾಜಿ ಶಾಸಕ ಅಶೋಕಖೇಣಿ, ಅಖಿಲಭಾರತ ಶರಣ ಸಾಹಿತ್ಯ ಪರಿಷತ್ಅಧ್ಯಕ್ಷ ಡಾ.ಸಿ.ಸೋಮಶೇಖರ್,ಬಿಜೆಪಿ ಮುಖಂಡರಾದಎಂ.ರುದ್ರೇಶ್, ಜಿ.ಮರಿಸ್ವಾಮಿ,ಸಿದ್ದೇಶ ನಾಗೇಂದ್ರ,ಹರೀಶ ಆರಾಧ್ಯ,ಡಾ.ಎಸ್.ನಂಜುಂಡೇಶ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭಕ್ಕೂಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿಉಭಯ ಜಗದ್ಗುರುಗಳ ಭವ್ಯ ಸಾರೋಟಮೆರವಣಿಗೆ ಸಂಭ್ರಮದಿಂದ ಜರುಗಿತು.ಸಾವಿರಾರುಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಆಗಮಿಸಿದ ಎಲ್ಲಾಭಕ್ತರಿಗೆ ಅನ್ನ ದಾಸೋಹ ಜರುಗಿತು.

ಭಾರತ ಪುಣ್ಯ ಭೂಮಿಯಲ್ಲಿ ಇರುವಷ್ಟು ದೇವಸ್ಥಾನ, ಮಠ ಮಂದಿರಗಳು ಬೇರೆಲ್ಲಿಯೂ ಇಲ್ಲ. ಆಧ್ಯಾತ್ಮದ ಅರಿವು ಶಾಂತಿ ನೆಮ್ಮದಿಯ ಬದುಕಿಗೆ ಕಾರಣ. ದೇವಾಲಯಗಳು ಮನಸ್ಸಿಗೆ ಸಮಾಧಾನ ಶಾಂತಿ ಉಂಟು ಮಾಡುತ್ತವೆ.