ಚಂದ್ರಗ್ರಹಣ ಹಿನ್ನಲೆ ದೇವಾಲಯಕ್ಕೆ ಬೀಗ Temple 
ರಾಜ್ಯ

ಚಂದ್ರಗ್ರಹಣ ಹಿನ್ನಲೆ ದೇವಾಲಯಕ್ಕೆ ಬೀಗ Temple

ಕೋಲಾರ ಡೆಸ್ಕ್
ಕೋಲಾರ: ವರ್ಷದ ಮೊದಲ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ನಗರದಲ್ಲಿನ ದೇವಾಲಯಗಳು ಮಂಗಳವಾರ ಮಧ್ಯಾಹ್ನ 12.-30ಕ್ಕೆ ಬಾಗಿಲು ಮುಚ್ಚಿದ್ದು, ಬುಧವಾರ ಬೆಳಗ್ಗೆ 9 ಗಂಟೆಗೆ ತೆರೆಯಲಿವೆ ಎಂದು ಧಾರ್ಮಿಕ ದತ್ತಿ ಇಲಾಖೆ ತಿಳಿಸಿದೆ. Temple
ಕೋಟೆ ಬಡಾವಣೆಯಲ್ಲಿನ ನಗರದೇವತೆ ಕೋಲಾರಮ್ಮ ಹಾಗೂ ಸೋಮೇಶ್ವರಸ್ವಾಮಿ ದೇವಾಯಗಳು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದು, ಮಧ್ಯಾಹ್ನ 12.-30ಕ್ಕೆ ಭಕ್ತರಿಗೆ ಪ್ರವೇಶ ನಿಷೇಧಿಸಿ ಬಾಗಿಲು ಬಂದ್​ ಮಾಡಲಾಗಿತ್ತು.
ಅದೇ ರೀತಿ ನಗರದ ವೆಂಕಟರಮಣಸ್ವಾಮಿ ದೇವಾಲಯ, ಕಾಳಿಕಾಂಭ ಕಮ್ಮಟೇಶ್ವರ ದೇವಾಲಯ, ಅಂತರಗಂಗೆಯ ಪ್ರಸಿದ್ಧ ಕಾಶಿವಿಶ್ವೇಶ್ವರ ದೇವಾಲಯ ಮತ್ತಿತರ ಕಡೆಗಳಲ್ಲೂ ಗ್ರಹಣ ಮೋಕ್ಷದ ನಂತರ ಶುಚೀಕರಣ, ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು.
ಗ್ರಹಣದ ಹಿನ್ನಲೆಯಲ್ಲಿ ಬೆಳಗ್ಗಿನಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಹಲವು ದೇವಾಲಯಗಳಲ್ಲಿ ನಕ್ಷತ್ರ, ರಾಶಿ ಶಾಂತಿ ಪೂಜೆಗಳನ್ನು ನಡೆಸಲಾಯಿತು. ನಗರದ ಕೆಇಬಿ ಗಣೇಶ ದೇವಾಲಯದಲ್ಲಿ ರಾತ್ರಿ 7 ಗಂಟೆ ನಂತರ ಗ್ರಹಣ ಮೋಕ್ಷಕಾಲದ ನಂತರ ದೇವಾಲಯ ಶುಭ್ರಗೊಳಿಸಿ, ಪೂಜೆಯ ನಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಕೆಇಬಿ ಕಾಲನಿಯ ಗಣಪತಿ ದೇವಾಲಯದಲ್ಲಿ ಸಂಜೆ 6 ಗಂಟೆಯ ನಂತರ ಸಾಮೂಹಿಕವಾಗಿ ತರ್ಪಣ ಬಿಡುವ ವ್ಯವಸ್ಥೆ ಮಾಡಲಾಗಿದ್ದು, ಜಪತಪಗಳು ನಡೆದವು. ನಂತರ 7 ಗಂಟೆಗೆ ಗ್ರಹಣ ಶಾಂತಿ ನಡೆಸಿ ದೇವಾಲಯ ಶುಭ್ರಗೊಳಿಸಿ ಪೂಜೆಗೆ ಅಣಿಗೊಳಿಸಿ ರಾತ್ರಿ 8 ಗಂಟೆಯ ನಂತರ ನೂರಾರು ಮಂದಿ ದೇವಾಲಯಗಳಿಗೆ ಆಗಮಿಸುವ ನಿರೀಕ್ಷೆಯಲ್ಲಿ ಸಿದ್ಧತೆಯನ್ನು ದೇವಾಲಯದ ಅರ್ಚಕರಾದ ಅಪ್ಪಣ್ಣ ಶಾಸ್ತ್ರಿ, ವೆಂಕಟೇಶಶಾಸ್ತ್ರಿ ನಡೆಸಿದರು.