ಗುಬ್ಬಿ: ತಾಲೂಕಿನ ಜಿ.ಹೊಸಳ್ಳಿಯಲ್ಲಿ ಅಭಯ ಆಂಜನೇಯ ಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಹೋಮ ಹವನ ನೆರವೇರಿಸಲಾಯಿತು. ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ,ತೋರೇಮಠದ ಅಟವಿ ಚನ್ನಬಸವ ಸ್ವಾಮೀಜಿ ಇದ್ದರು. 
ರಾಜ್ಯ

ಜಿ.ಹೊಸಹಳ್ಳಿಯಲ್ಲಿ ದೇಗುಲ ಲೋಕಾರ್ಪಣೆ

ತಾಲೂಕಿನ ಕಸಬಾ ಹೋಬಳಿ ಜಿ.ಹೊಸಳ್ಳಿಯ ಅಭಯ ಆಂಜನೇಯ ಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬುಧವಾರ ನೆರವೇರಿತು.

ಕಾರ್ಯಕ್ರಮದ ಅಂಗವಾಗಿ ಮಂಗಳವಾರ ರಾತ್ರಿ ಗಂಗಾ ಪೂಜೆಯ ನಂತರ ಸ್ವಾಮಿಯ ಮೂರ್ತಿಯನ್ನು ದೇವಾಲಯಕ್ಕೆ ತಂದು ವಿವಿಧ ಹೋಮ ನಡೆಸಲಾಯಿತು.
ಬುಧವಾರ ಬೆಳಗ್ಗೆ ನಿಗದಿಪಡಿಸಿದ ಮಹೂರ್ತದಲ್ಲಿ ಸುಪ್ರಭಾತ ಸೇವೆ, ಕಳಸಾರಾಧನೆ, ನವಗ್ರಹ ಹೋಮ, ಸುದರ್ಶನ ಹೊಮ, ನಾರಸಿಂಹ ಹೋಮ, ಆಂಜನೇಯ ಅಷ್ಟೋತ್ತರ ಹೋಮ, ಶ್ರೀ ರಾಮತಾರಕ ಹೋಮ, ಪರ್ಯಾಯ ದೇವತೆಗಳ ಹೋಮ, ಪ್ರಾಣಪ್ರತಿಷ್ಠಾಪನಾ ಹೋಮ, ಪೂಣಾಹುತಿ, ಪಂಚಾಮೃತಭಿಷೇಕ, ಕುಂಭಾಭಿಷೇಕ ನೆರವೇರಿಸಲಾಯಿತು.
ತೇವಡಿಹಳ್ಳಿ ಮಠದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ತೋರೇಮಠದ ಅಟವಿ ಚನ್ನಬಸವ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಹೋಮಕ್ಕೆ ಪೂರ್ಣಾಹುತಿ ನೀಡಿದ ನಂತರ ಆಲಯ ಪ್ರವೇಶ ವಾಡಲಾಯಿತು. ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿ ಮಂಗಳಾರತಿ ನೆರವೇರಿಸಲಾಯಿತು. ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಗಳ ಅಪಾರ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಾತನಾಡಿದ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವುದರಿಂದ ಒಗ್ಗಟ್ಟು, ಸಾಮರಸ್ಯವನ್ನು ಉಂಟು ಮಾಡುತ್ತವೆ. ದೇವಾಲಯದ ಲೋಕಾರ್ಪಣೆ ಅಂಗವಾಗಿ ವಾಡುತ್ತಿರುವ ಹೋಮ, ಹವನಗಳು ಕೇವಲ ಗ್ರಾಮಕ್ಕೆ ಸೀಮಿತವಾಗದೆ ಇಡೀ ಸವಾಜಕ್ಕೆ ಒಳಿತನ್ನು ಉಂಟು ವಾಡುತ್ತವೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮನಃಶಾಂತಿ ಹಾಗೂ ಸಂಸ್ಕಾರ ರೂಢಿಸಿಕೊಳ್ಳಬೇಕು ಎಂದರು.