ಬೆಳಗಾವಿ ನಗರದ ಕಾಹೆರ ವತಿಯಿಂದ ಈಚೆಗೆ ಆಯೋಜಿಸಿದ್ದ ಅತಿಥಿ ಉಪನ್ಯಾಸ ಮಾಲೆಯಲ್ಲಿ ಸಂಶೋಧಕರನ್ನು ಸನ್ಮಾನಿಸಲಾಯಿತು. ಡಾ.ವಿಶ್ವನಾಥ ಪಟ್ಟಣಶೆಟ್ಟಿ, ಡಾ.ಜ್ಯೋತಿ ಆನಂದ ಕೋಡೆ, ಡಾ.ರಮೇಶ ಪರಾಂಜಪೆ, ಡಾ.ದೀಪಾ ಮಾನೆ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ನಗರದ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಕಾಹೆರ) ವತಿಯಿಂದ ಈಚೆಗೆ ಆಯೋಜಿಸಿದ್ದ 100ನೇ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸ ಮಾಲೆ ಯಶಸ್ವಿಯಾಗಿ ನಡೆಯಿತು. ಆರೋಗ್ಯ ಸೇವಾ ಕ್ಷೇತ್ರದಲ್ಲಿ ಮಹತ್ವದ ಸಂಶೋಧನಾ ಕೊಡುಗೆ ನೀಡಿರುವ ದೇಶದ ಪ್ರಮುಖ ಸಂಶೋಧಕರು ಭಾಗವಹಿಸಿದ್ದರು.
ಕುಲಸಚಿವ ಪ್ರೊ.ಡಾ.ವಿಶ್ವನಾಥ ಪಟ್ಟಣಶೆಟ್ಟಿ ಮಾತನಾಡಿ, ವಿವಿಧ ಕ್ಷೇತ್ರಗಳ ಪರಿಣಿತರನ್ನು ಉಪನ್ಯಾಸ ಮಾಲೆಗೆ ಆಹ್ವಾನಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಜ್ಞಾನ ವಿಸ್ತರಣೆ ಮಾಡುವ ಉದ್ದೇಶವಿದೆ. ಅತಿಥಿ ಉಪನ್ಯಾಸ ಮಾಲೆ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಡಾ.ಜ್ಯೋತಿ ಆನಂದ ಕೋಡೆ ಮಾತನಾಡಿ, ಸುಧಾರಿತ ಆರೋಗ್ಯ ಸೇವೆಗಾಗಿ ಉನ್ನತ, ಕೈಗೆಟುಕುವ ದರದ ಕ್ಯಾನ್ಸರ್ ವಿರೋಧಿ ಮತ್ತು ರೋಗನಿರೋಧಕ ನಿಯಂತ್ರಕ ಸಂಯೋಜನೆಗಳ ಪರಿಶೀಲನೆ ಅವಶ್ಯಕವಾಗಿದೆ. ನವೀನ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳು, ರೋಗನಿರೋಧಕ ಶಕ್ತಿ ವೃದ್ಧಿಸುವ ವಿಧಾನಗಳು ಹಾಗೂ ಸುಲಭವಾಗಿ ಲಭ್ಯವಾಗುವ ಆರೋಗ್ಯ ಪರಿಹಾರಗಳ ಕುರಿತು ತಮ್ಮ ಸಂಶೋಧನಾ ನಿರಂತರವಾಗಿ ನಡೆಯಬೇಕು. ಸಸ್ಯಾಧಾರಿತ ಉತ್ಪನ್ನಗಳ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಹಾಗೂ ಕ್ಯಾನ್ಸರ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುವ ಮೂಲ ರೋಗನಿರೋಧಕ ಪ್ರಕ್ರಿಯೆಗಳ ಕುರಿತು ತಿಳಿಸಿದರು.
ಡಾ.ಪ್ರಭಾಕರ ಕೋರೆ ಮೂಲ ವಿಜ್ಞಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ರಮೇಶ ಪರಾಂಜಪೆ, ಡಾ.ದೀಪಾ ಮಾನೆ, ಕುಲಪತಿ ಪ್ರೊ.ಸಂದೀಪ ಶ್ರೀವಾಸ್ತವ, ಡಾ.ದೀಪಾ ಮಾನೆ ಇತರರಿದ್ದರು.