ಮೃತ ಟೆಕ್ಕಿ ಸುಷ್ಮಾ ಮತ್ತು ಪತಿ ಪುನೀತ್​ 
ರಾಜ್ಯ

ಅಡುಗೆ ಮನೆ ಜಗಳಕ್ಕೆ ಟೆಕ್ಕಿ ಆತ್ಮಹತ್ಯೆ: ಅಡುಗೆ ಮಾಡಬೇಡ ಎಂದ ಅತ್ತೆ; ನೇಣಿಗೆ ಶರಣಾದ ಸೊಸೆ | Bangalore Techie Suicide

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ
  • ಅತ್ತೆ ಅಡುಗೆ ಮಾಡಬೇಡ ಎಂದಿದಕ್ಕೆ ಸೊಸೆ ನೇಣಿಗೆ ಶರಣು
  • ಗಂಡ ಮತ್ತು ಅತ್ತೆ ಮೇಲೆ ವರದಕ್ಷಿಣೆ ಆರೋಪ
  • ಡೆಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ
ಬೆಂಗಳೂರು: ಅತ್ತೆ ಅಡುಗೆ ಮಾಡಲು ಬಿಡುವುದಿಲ್ಲ ಎಂದು ಮನನೊಂದ ಸೊಸೆಯೊಬ್ಬಳು ಅತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ (ಮಾ.3) ಬೆಂಗಳೂರಿ(Bangalore Techie Suicide)ನಲ್ಲಿ ವರದಿಯಾಗಿದೆ.
ಅತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಷ್ಮಾ(35) ಎಂದು ಗುರುತಿಸಲಾಗಿದ್ದು, ಈಕೆ ಡೆಲ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳೆಂದು ತಿಳಿದು ಬಂದಿದೆ. ಸುಷ್ಮಾ ಐದು ವರ್ಷದ ಹಿಂದೆ ಪುನೀತ್​ ಕುಮಾರ್​ ಎಂಬುವವರನ್ನು ಮದುವೆಯಾಗಿದ್ದು, ಈ ದಂಪತಿಗೆ ನಾಲ್ಕು ವರ್ಷದ ಮಗನಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಆದರೆ ಮದುವೆಯಾಗಿ ಬಂದಾಗಿನಿಂದ ಸಷ್ಮಾ ಮತ್ತು ಅವಳ ಅತ್ತೆ (ಗಂಡನ ತಾಯಿ) ಕಲ್ಪನಾ ನಡುವೆ ಹೊಂದಾಣಿಕೆ ಕೊರತೆಯಿದ್ದು, ಮನೆಯಲ್ಲಿ ನಿರಂತರ ಜಗಳವಾಗುತ್ತಿದ್ದ ಬಗ್ಗೆ ತಿಳಿದುಬಂದಿದೆ.
ಕೇಲವ ಕ್ಷುಲಕ ಕಾರಣಗಳಿಗೆ ಅತ್ತೆ-ಸೊಸೆ ಜಗಳವಾಡುತ್ತಿದ್ದು, ಅತ್ತೆ ಕಲ್ಪನಾ ಸೊಸೆ ಸುಷ್ಮಾಳಿಗೆ ಅಡುಗೆ ಮಾಡಬೇಡ ಎನ್ನುವುದು ಮತ್ತು ನಿರಂತರವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದರು ಎನ್ನುವುದು ಸುಷ್ಮಾಳ ಮನೆಯವರ ವಾದವಾಗಿದೆ. ಈ ಹಿಂಸೆಯ ಜೊತೆಗೆ ನನ್ನ ಮಗಳಿಗೆ ವರದಕ್ಷಿಗೆ ಕುರಿತಾಗಿ ಸಹ ಕಿರುಕುಳವನ್ನು ಪುನೀತ್​ ಮತ್ತು ಅವನ ತಾಯಿ ಕಲ್ಪನಾ ನೀಡಿದ್ದಾರೆ ಎಂದು ಸುಷ್ಮಾಳ ಮನೆಯವರು ತಿಳಿಸಿದ್ದಾರೆ.
ಈ ರೀತಿಯ ನಾನಾ ಹಿಂಸೆಗಳಿಂದ ಮನನೊಂದ ನನ್ನ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದಿರುವ ಸುಷ್ಮಾಳ ಪಾಲಕರು, ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದು, ಸುಷ್ಮಾಳ ಪತಿ ಪುನೀತ್​ನನ್ನು ಪೊಲೀಸರು ಬಂಧಿಸಿದ್ದು, ಅತ್ತೆ ಕಲ್ಪನಾಳನ್ನು ಹುಡುಕಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
ಪುನೀತ್​ ಹಾಗೂ ಆತನ ತಾಯಿ ಕಲ್ಪನಾ ಮೇಲೆ ವರದಕ್ಷಿಗೆ ಕಿರುಕುಳದ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ,(ಏಜನ್ಸೀಸ್​).