ಗೌರಿಬಿದನೂರು ತಾಲೂಕು ಕಚೇರಿಯಲ್ಲಿ ನಾರಾಯಣ ಗುರು ಜಯಂತಿಯಲ್ಲಿ ಆರ್ಯ ಈಡಿಗ ಸಮುದಾಯ ಮುಖಂಡ ಜಿ.ಎನ್.ಸೂರಜ್, ರಾಜಸ್ವ ನಿರೀಕ್ಷಕ ಖಾದರ್, ನಾರಾಯಣಪ್ಪ, ನಾಗೇಂದ್ರ, ನಾಗರಾಜು ಅಂಜಿನಪ್ಪ, ವೆಂಕಟರಮಣಪ್ಪ, ಸಮುದಾಯದ ಮುಖಂಡರು ಇದ್ದರು.
: ತಾಲೂಕು ಕಚೇರಿಯಲ್ಲಿ ನಾರಾಯಣ ಗುರು ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು.
ಕಾರ್ಯಕ್ರಮವನ್ನು ಆರ್ಯ ಈಡಿಗ ಸಮುದಾಯದ ಮುಖಂಡ ಜಿ.ಎನ್.ಸೂರಜ್ ಉದ್ಘಾಟಿಸಿ ಮಾತನಾಡಿ, ನಾರಾಯಣ ಗುರು ಮಹಾನ್ ಸಂತ ಹಾಗೂ ಸಮಾಜ ಸುಧಾರಕರಾಗಿದ್ದರು,
ಹಿಂದೂ ಧರ್ಮದಲ್ಲಿದ್ದ ಜಾತಿ ತಾರತಮ್ಯ ಮತ್ತು ಅಸ್ಪ-----ೃಶ್ಯತೆಯ ವಿರುದ್ಧ ಹೋರಾಡಿ, ಎಲ್ಲರಿಗೂ ಸಮಾನತೆ ಹಾಗೂ ಶಿಕ್ಷಣದ ಪ್ರಾಮುಖ್ಯತೆಯನ್ನು ಬೋಧಿಸಿದ್ದರು ಎಂದರು.