ಅಥಣಿ ವಿದ್ಯಾವರ್ಧಕ ಶಾಲೆಯ 2006-07ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ಮರುಳಸಿದ್ಧ ಸ್ವಾಮೀಜಿ, ಶಿವಶಂಕರ ಹಂಜಿ, ಪ್ರಕಾಶ ಮಹಾಜನ, ವಿಜಯಕುಮಾರ ಬುರ್ಲಿ ಇತರರಿದ್ದರು. 
ರಾಜ್ಯ

ವಿದ್ಯಾರ್ಥಿಗಳ ಬಾಳಿಗೆ ಗುರು ಬೆಳಕು

ವಿಜಯವಾಣಿ ಸುದ್ದಿಜಾಲ ಅಥಣಿ
ಗುರು-ಶಿಷ್ಯರ ಸಂಬಂಧ ಶಾಶ್ವತವಾದದ್ದು. ತಮ್ಮಲ್ಲಿರುವ ಜ್ಞಾನದ ಸುಧೆಯನ್ನು ಶಿಷ್ಯರಿಗೆ ಧಾರೆ ಎರೆದು ಅವರ ಬಾಳಿಗೆ ಗುರು ಬೆಳಕಾಗಿ, ಬದುಕಿನುದ್ದಕ್ಕೂ ದಾರಿದೀಪವಾಗಿರುತ್ತಾರೆ ಎಂದು ಸ್ಥಳೀಯ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಹೇಳಿದರು.
ನಗರದ ವಿದ್ಯಾವರ್ಧಕ ಸಂಸ್ಥೆಯಲ್ಲಿ ಬುಧವಾರ 2006-07ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರು ಎಂದರೆ ಬೆಳಕು, ಜ್ಞಾನ, ತೇಜಸ್ಸು ಅದಕ್ಕೆ ಗುರುಗಳನ್ನು ಜ್ಞಾನ ಸೂರ್ಯ ಎನ್ನುತ್ತಾರೆ. ಕಲಿತ ಶಾಲೆಯನ್ನು ಮತ್ತು ಗುರುವನ್ನು ಸ್ಮರಿಸುವುದು ಗೌರವಿಸುವುದು ಪೂಜ್ಯನೀಯ ಕಾರ್ಯವಾಗಿದೆ ಎಂದರು.
ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿ, ಶಿಕ್ಷಕರು ತೋರಿದ ಸನ್ಮಾರ್ಗದಲ್ಲಿ ನಡೆದು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಮುಖ್ಯಶಿಕ್ಷಕ ಮಲನಗೌಡ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಸ್.ಬಿ.ಜೋರಾಪುರ,ಬಂಡು ಕೋಳಿ, ಸಿದ್ದು ಹುಲ್ಲೇನ್ನವರ, ಕೆ.ಎಂ.ಖೋದಾನಪುರ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ಉಪಾಧ್ಯಕ್ಷ ಪ್ರಕಾಶ ಮಹಾಜನ, ಸದಸ್ಯರಾದ ಶ್ರೀಶೈಲ ಸಂಕ, ಸುನೀಲ ಶಿವಣಗಿ, ವಿಜಯಕುಮಾರ ಬುರ್ಲಿ, ಅಶೋಕ ಬುರ್ಲಿ, ಶಿಕ್ಷಕರಾದ ಪ್ರಕಾಶ ಚನಗೌಡರ, ಮಹಾಂತೇಶ ಬುಲಿ, ನರಸಗೌಡ ಗಸ್ತಿ, ಕುಮಾರ ಹುಲ್ಲೆನ್ನವರ, ಮಹಾದೇವ ಪಾಟೀಲ ಇತರರಿದ್ದರು. ಗೀತಾ ಮುಧೋಳ ನಿರೂಪಿಸಿ, ಮತ್ಯುಂಜಯ ಬುರ್ಲಿ ಸ್ವಾಗತಿಸಿ, ಸಂತೋಷ ನಾಯಿಕ ವಂದಿಸಿದರು.