ದೊಡವಾಡ ಎಸ್​ವಿಜಿ ಪ್ರೌಢಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಪಿಎಸ್​ಐ ಸುಮಾ ಗೋರಾಬಾಳ ಮಾತನಾಡಿದರು. ಮುಖ್ಯ ಶಿಕಿ ಬಿ.ಆರ್​.ಹುತಮಲ್ಲನವರ, ಕೆ.ಬಿ.ಕಡೆಮನಿ, ಎಂ.ಸಿ.ಸಂಗೊಳ್ಳಿ ಇತರರಿದ್ದರು. 
ರಾಜ್ಯ

ಶಿಕ್ಷಕರು ಮಕ್ಕಳಲ್ಲಿ ಕಾನೂನು ಅರಿವು ಮೂಡಿಸಿ

ಬೈಲಹೊಂಗಲ: ಸಣ್ಣ ವಯಸ್ಸಿನಲ್ಲೇ ಮಾದಕ ದ್ರವ್ಯ ವ್ಯಸನಕ್ಕೆ ದಾಸರಾಗುವುದು ಮತ್ತು ಅಪರಾಧ ಚಟುವಟಿಕೆಗಳಿಂದಾಗುವ ದುಷ್ಪರಿಣಾಮ ಬಗ್ಗೆ ಮಕ್ಕಳಿಗೆ ಶಿಕರು ಅರಿವು ಮೂಡಿಸಬೇಕೆಂದು ದೊಡವಾಡ ಠಾಣೆ ಪಿಎಸ್​ಐ ಸುಮಾ ಗೋರಾಬಾಳ ಹೇಳಿದರು.
ತಾಲೂಕಿನ ದೊಡವಾಡ ಗ್ರಾಮದ ಶ್ರೀ ವೀರಭದ್ರೇಶ್ವರ ಗುರುಕುಲ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಕಾನೂನು ಪಾಲನೆ ಮಹತ್ವ, ಪೋಕ್ಸೋ ಕಾಯಿದೆ, ರಸ್ತೆ ಸುರತೆ, ಸಂಚಾರ ನಿಯಮ ಪಾಲನೆ, ಬಾಲ ಕಾರ್ಮಿಕ ಪದ್ಧತಿ, ಶಾಲಾ ಕಾಲೇಜುಗಳಲ್ಲಿ ಮತ್ತು ಸಮಾಜದಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕಿ ಬಿ.ಆರ್​.ಹುತಮಲ್ಲನವರ, ಶಿಕರಾದ ಕೆ.ಬಿ.ಕಡೆಮನಿ, ಎಂ.ಸಿ.ಸಂಗೊಳ್ಳಿ, ಯು.ಎಸ್​.ಹೂಗಾರ, ಆರ್​.ವೈ.ಜೇಡರ, ಪಿ.ಎನ್​.ಗಸ್ತಿ, ಸಿ.ಎಸ್​.ಸೊಬರದ, ಆರ್​.ಎಸ್​.ನದಾಫ್​, ಎಚ್​.ಕೆ.ರಾವೇಂದ್ರ, ಎಸ್​.ಎನ್​.ಆಕ್ಲೇಟ್​, ಎಚ್​.ವೈ.ಯಕ್ಕುಂಡಿ, ಎ.ಎನ್​.ದಾಸನಕೊಪ್ಪ, ಎಲ್​.ಬಿ.ಮುರಡಿಮಠ, ಎನ್​.ಎಸ್​.ಸಯ್ಯದ್​, ಎಂ.ಎಂ.ಅಂದಾನಶೆಟ್ಟಿ ಇತರರಿದ್ದರು.