ಮಮದಾಪುರ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮೆರವಣಿಗೆಗೆ ಗಣ್ಯರು ಚಾಲನೆ ನೀಡಿದರು. ಡಾ. ಸಿದ್ದಲಿಂಗ ದೇವರು, ಡಾ.ಮೋಹನ ಭಸ್ಮೆ, ಪರಶುರಾಮ ಸ್ತೆ ಇತರರಿದ್ದರು. 
ರಾಜ್ಯ

ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಿ

ವಿಜಯವಾಣಿ ಸುದ್ದಿಜಾಲ ಮಮದಾಪುರ
ಸ್ಪರ್ಧಾತ್ಮಕ ಯುಗದಲ್ಲಿ ಕಾನ್ವೆಂಟ್​ ಶಾಲೆ ಮಕ್ಕಳಿಗೆ ಸರ್ಕಾರಿ ಶಾಲೆಯ ಮಕ್ಕಳು ಪೆಪೋಟಿ ನೀಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲೂ ಸರ್ಕಾರ ಅತ್ಯಾಧುನಿಕ ಸೌಲಭ್ಯ ಕಲ್ಪಿಸುತ್ತಿದೆ. ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಬಿಆರ್​ಸಿ ಸಮನ್ವಯಾಧಿಕಾರಿ ಎಸ್​.ವಿ.ಕುಲಕರ್ಣಿ ತಿಳಿಸಿದರು.
ಸರ್ಕಾರಿ ಹಿರಿಯ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ಹಾಗೂ ಉನ್ನತಿಕರಿಸಿದ ಪ್ರೌಢಶಾಲೆಯಲ್ಲಿ ೇತ್ರ ಶಿಣ ಇಲಾಖೆ ಹಾಗೂ ಗ್ರಾಪಂ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪಾಲಕರ ಸಭೆಯಲ್ಲಿ ಮಾತನಾಡಿದರು.
ಶಾಸಕ ರಮೇಶ ಜಾರಕಿಹೊಳಿ ಪ್ರಯತ್ನದಿಂದ ಪ್ರಸಕ್ತ ವರ್ಷ ಗೋಕಾಕ ಶೆಣಿಕ ವಲಯಕ್ಕೆ 34 ದ್ವಿಬಾಷಾ ಹಾಗೂ 30 ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಗೊಂಡಿವೆ ಎಂದು ತಿಳಿಸಿದರು.
ತಹಸೀಲ್ದಾರ್​ ಡಾ.ಮೋಹನ ಭಸ್ಮೆಹಾಗೂ ತಾಪಂ ಇಒ ಪರಶುರಾಮ ಸ್ತೆ ಮಾತನಾಡಿ, ಮಮದಾಪುರ ಈ ಭಾಗದ ಶಿಣ ಕಾಶಿಯಾಗಿದೆ. ಈ ಪುಣ್ಯಭೂಮಿಯಲ್ಲಿ ಶಿಣ ಪಡೆದ ಬಹುತೇಕರು ಉನ್ನತ ಹುದ್ದೆ ಅಲಂಕರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಗಮನ ಸೆಳೆದ ಮೆರವಣಿಗೆ: ವಿವಿಧ ವಾದ್ಯ ಹಾಗೂ ಗೊಂಬೆಗಳೊಂದಿಗೆ ಶಾಲಾ ದಾಖಲಾತಿ ಹಾಗೂ ಮಕ್ಕಳನ್ನ ಹೊತ್ತ ಎತ್ತಿನ ಬಂಡಿ ಗ್ರಾಮದ ಪ್ರಮುಖ ಸಂಚರಿಸಿ ಶಾಲೆ ಅಂಗಳ ತಲುಪಿತು. ಸ್ಥಳಿಯ ಚರಮೂರ್ತೀಶ್ವರ ಮಹಾಮಠದ ಡಾ.ಸಿದ್ದಲಿಂಗ ದೇವರ ಸಾನ್ನಿಧ್ಯದಲ್ಲಿ ಗಣ್ಯರು ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು.
ಅರ ದಾಸೋಹ ಸಹಾಯಕ ನಿರ್ದೇಶಕ ಎ.ಬಿ.ಮಲಬನ್ನವರ, ಸುರೇಶ ಸನದಿ, ಕೆಂಪಣ್ಣ ಮೈಲನ್ನವರ, ಸಿಆರ್​ಪಿ
ಎಸ್​.ಎಸ್​.ದಂಡಾಪುರ, ಎಸ್​ಡಿಎಂಸಿ ಅಧ್ಯ ಅಶೋಕ ಗೋಪಾಳಿ, ಮಹೇಶ ಪಾಟೀಲ, ವೀರಭದ್ರ ಮೈಲನ್ನವರ, ಮುಖ್ಯಶಿಕರಾದ ಎಂ.ಬಿ.ಪಾಟೀಲ,
ಸಿ.ಎಂ.ಪಟಾತ್​, ಯು.ಎಸ್​.ಕಿಣಗಿ ಹಾಗೂ ಶಿಕ ಬಳಗ, ಅಡುಗೆ ಸಿಬ್ಬಂದಿ, ಪಾಲಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಸಿ.ಸಿ.ಶೀಗಿಹಳ್ಳಿ ನಿರೂಪಿಸಿದರು. ಎ.ಎಲ್​. ಬಾರಿಗಿಡದ ನಿರೂಪಿಸಿದರು.