ಅಕ್ಕಲಕೋಟ ತಾಲೂಕು ತೋಳನೂರು ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿವೃತ್ತ ಹಿರಿಯ ಶಿಕ ಅನೀಲ ರಾಠೋಡ್ ದಂಪತಿಯನ್ನು ಸನ್ಮಾನಿಸಲಾಯಿತು. ವೀರಭದ್ರ ಯಾದವಾಡ, ಶಾಂತಮಲ್ಲಯ್ಯ ಸ್ವಾಮಿ, ಬಸವರಾಜ ಖಿಲಾರಿ, ಅಣ್ಣಪ್ಪ ಶಿವಮೂರ್ತಿ ಇತರರಿದ್ದರು.
- ವೀರಭದ್ರ ಯಾದವಾಡ ಅನಿಸಿಕೆ
- ತಾಳನೂರದಲ್ಲಿ ನಿವೃತ್ತ ಬೋಧಕ ರಾಠೋಡ್ಗೆ ಸನ್ಮಾನ
ಅಕ್ಕಲಕೋಟ: ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಶಿಕ್ಷಕರಿಗೆ ಸಮಾಜದಲ್ಲಿ ಸದಾ ಗೌರವದ ಸ್ಥಾನವಿದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂದ ಮಾಜಿ ಜಿಲ್ಲಾಧ್ಯಕ್ಷ ವೀರಭದ್ರ ಯಾದವಾಡ ಹೇಳಿದರು.
ತೋಳನೂರು ಗ್ರಾಮದ ಜಿಲ್ಲಾ ಪರಿಷತ್ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಸೇವಾ ನಿವೃತ್ತ ಹಿರಿಯ ಶಿಕ್ಷಕ ಅನೀಲ ರಾಠೋಡ್ ದಂಪತಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ರಾಠೋಡ್ ಅವರ ನಿವೃತ್ತಿ ಜೀವನ ನೆಮ್ಮದಿ ಮತ್ತು ಸುಖಕರವಾಗಿರಲಿ ಎಂದು ಹಾರೈಸಿದರು.
ಶಾಲಾ ವ್ಯವಸ್ಥಾಪನಾ ಸಮಿತಿ ಅಧ್ಯ ಅಣ್ಣಪ್ಪ ಶಿವಮೂರ್ತಿ ಅಧ್ಯತೆ ವಹಿಸಿದ್ದರು. ಕೇಂದ್ರ ಪ್ರಮುಖ ಶಾಂತಮಲ್ಲಯ್ಯ ಸ್ವಾಮಿ, ಶಿಕರ ಸಂದ ತಾಲೂಕು ಅಧ್ಯ ಬಸವರಾಜ ಖಿಲಾರಿ, ಗ್ರಾಮ ಪಂಚಾಯಿತಿ ಸರಪಂಚ ಶ್ರೀದೇವಿ ಮನಗೂಳಿ, ಉಪ ಸರಪಂಚ ಸಂಜಯಕುಮಾರ ಹೊರಕೇರಿ, ರಮೇಶ ಉಪ್ಪಿನ, ಶರಣಪ್ಪ ಫುಲಾರಿ, ಜ್ಯೋತಿ ಫುಲಾರಿ, ರಾಜಶೇಖರ ಪಾಟೀಲ, ವಿಶ್ವನಾಥ ರಾಠೋಡ್, ಗುಂಡಪ್ಪ ಪೋತದಾರ ಇತರರಿದ್ದರು.
ರಾಜೇಂದ್ರ ಪವಾರ್ ನಿರೂಪಣೆ ಮಾಡಿದರು. ಚೌಧರಿ ಸರ್ ವಂದಿಸಿದರು. ಮಕ್ಕಳು ಸ್ವಾಗತ ಗೀತೆ ಹಾಡಿದ ಬಳಿಕ ಸಾವಿತ್ರಿಬಾಯಿ ಫುಲೆ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.