ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.  
ರಾಜ್ಯ

ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಶಿಕ್ಷಕರಿಗಿದೆ; ಸಿಎಂ ಸಿದ್ದರಾಮಯ್ಯ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಶಕ್ತಿ ಶಿಕ್ಷಕರಿಗಿದೆ
  • ಶೈಕ್ಷಣಿಕ ಸಮ್ಮೇಳನದಲ್ಲಿ ಸಿಎಂ ಸಿದ್ದರಾಮಯ್ಯ ಬಣ್ಣನೆ
  • ಸಮಾಜವನ್ನು ಉತ್ತಮಗೊಳಿಸುವ ಜವಾಬ್ದಾರಿ ಶಿಕ್ಷಕರದ್ದು

ಬೆಂಗಳೂರು: ಸಾಮಾನ್ಯರನ್ನುಅಸಾಮಾನ್ಯರನ್ನಾಗಿ ಪರಿವರ್ತಿಸಿವ್ಯಕ್ತಿಯ ಭವಿಷ್ಯವನ್ನೇ ಬದಲಿಸುವಶಕ್ತಿ ಶಿಕ್ಷಕರ ಕೈಯಲ್ಲಿರುತ್ತದೆ.ಸಮಾಜವನ್ನುಉತ್ತಮಗೊಳಿಸುವ ಜವಾಬ್ದಾರಿಶಿಕ್ಷಕರದ್ದು ಎಂದು ಸಿಎಂಸಿದ್ದರಾಮಯ್ಯ ಹೇಳಿದರು.

ಶನಿವಾರಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘ ವತಿಯಿಂದ ಬೆಂಗಳೂರಿನಅರಮನೆ ಮೈದಾನದ ತ್ರಿಪುರವಾಸಿನಿಸಭಾಂಗಣದಲ್ಲಿ ಆಯೋಜಿಸಲಾಗಿದ್ದರಾಜ್ಯ ಮಟ್ಟದ ಶೈಕ್ಷಣಿಕ ಮಹಾಸಮ್ಮೇಳನಹಾಗೂ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನುಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರುದೇಶದ ಭವಿಷ್ಯವನ್ನು ರೂಪಿಸುವವರು.ದೇಶಕ್ಕೆಸ್ವಾತಂತ್ರ್ಯ ಬಂದಾಗ 12ರಿಂದ 15ಪ್ರತಿಶತವಿದ್ದಶಿಕ್ಷಣದ ಪ್ರಮಾಣ ಪ್ರಸ್ತುತ 74 ಪ್ರತಿಶತವಾಗಿದೆ.ಜಾತಿ ವ್ಯವಸ್ಥೆಸಮಾಜದಲ್ಲಿ ಭದ್ರವಾಗಿನೆಲೆಯೂರಿರುವುದರಿಂದ ಶಿಕ್ಷಣದಲ್ಲಿನಿರೀಕ್ಷಿಸಿದಷ್ಟು ಬದಲಾವಣೆಮಾಡಲು ಸಾಧ್ಯವಾಗಿಲ್ಲ.ಸಂವಿಧಾನವುಒಬ್ಬ ವ್ಯಕ್ತಿ ಜವಾಬ್ದಾರಿಯುತವಾಗಿವಿಕಾಸವಾಗಲು ವೈಜ್ಞಾನಿಕ,ವೈಚಾರಿಕ ಶಿಕ್ಷಣದೊರೆಯಬೇಕೆಂದು ಸ್ಪಷ್ಟವಾಗಿಹೇಳುತ್ತದೆ. ಸಾಮಾಜಿಕವ್ಯವಸ್ಥೆಯಲ್ಲಿ ಜಾತಿ,ಮೌಢ್ಯ,ಕಂದಾಚಾರಗಳಿಂದಕೂಡಿರುವ ಸಮಾಜದಲ್ಲಿ ಇವುಗಳನ್ನುದೂರ ಮಾಡಲು ಇರುವ ಏಕೈಕ ಮಾರ್ಗಶಿಕ್ಷಣ. ಅಸಮಾನತೆಯಿಂದಕೂಡಿರುವ ಸಮಾಜದಲ್ಲಿ ಎಲ್ಲರೂಮುಖ್ಯವಾಹಿನಿಗೆ ಬರಬೇಕೆಂದರೆಸಮಾಜದಲ್ಲಿ ಬದಲಾವಣೆಯಾಗಬೇಕುಎಂದು ಸಿಎಂ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,ಸಚಿವ ಮಧುಬಂಗಾರಪ್ಪ,ಮೇಲ್ಮನೆ ಸದಸ್ಯರಾದ ಪುಟ್ಟಣ್ಣ,ರಾಮೋಜಿ ಗೌಡ,ಪ್ರೊ.ಬರಗೂರುರಾಮಚಂದ್ರಪ್ಪ, ಬಸವರಾಜ ಗುಳಿಕಾರ್,ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರನುಗ್ಗಲಿ ಮತ್ತಿತರರಿದ್ದರು.

ಬೇಡಿಕೆಗಳಈಡೇರಿಕೆಗೆ ಪ್ರಯತ್ನ:

ಶಿಕ್ಷಕರಹಲವಾರು ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು.ಆರು ಮತ್ತು 7ನೇ ವೇತನ ಆಯೋಗವನ್ನುಜಾರಿ ಮಾಡಿದ್ದು,ಬೇಡಿಕೆಗಳನ್ನುಈಡೇರಿಸುವ ಪ್ರಾಮಾಣಿಕ ಪ್ರಯತ್ನಮಾಡಲಾಗುವುದು.ಒಪಿಎಸ್ ಬಗ್ಗೆಸಚಿವ ಸಂಪುಟ ಸಭೆಯಲ್ಲಿ ಚರ್ಚೆಮಾಡಿ ತೀರ್ಮಾನಕ್ಕೆ ಬರುತ್ತೇವೆಎಂದು ಸಿಎಂ ಭರವಸೆ ನೀಡಿದರು.ವೇತನ ಬಡ್ತಿನೀಡಲು ಪ್ರಯತ್ನ ಮಾಡಲಾಗುವುದು.ಶಿಕ್ಷಕ ನಡವಳಿಕೆಉತ್ತಮವಾಗಿರಬೇಕು ಎಂದು ಸಿಎಂಇದೇ ವೇಳೆ ಕಿವಿಮಾತು ಹೇಳಿದರು.

ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ. ಕಳೆದ ಎರಡು ವರ್ಷಗಳಲ್ಲಿ ಸುಮಾರು 14,499 ಶಿಕ್ಷಕರ ನೇಮಕಾತಿ, ಉತ್ತರ ಕರ್ನಾಟಕ ಭಾಗದ ಶಿಕ್ಷಕರ ವರ್ಗಾವಣೆ ಸಮಸ್ಯೆ ನಿವಾರಣೆ, ಶಾಲಾ ಅಭಿವೃದ್ಧಿಯಲ್ಲಿ ಸಮುದಾಯದ ಸಹಭಾಗಿತ್ವ, ಮಕ್ಕಳಿಗೆ ಮೊಟ್ಟೆ, ಹಾಲು, ಶೂ-ಸಾಕ್ಸೃ್ ಮತ್ತು ಪೌಷ್ಟಿಕ ಆಹಾರ ವಿತರಣೆ ಹೀಗೆ ಹಲವು ಮಹತ್ವದ ಕ್ರಮ ಕೈಗೊಳ್ಳಲಾಗಿದೆ.