ಆನೆ ದಾಳಿಗೆ ಜಖಂಗೊಂಡಿರುವ ಶಿಕ್ಷಕರ ಬೈಕ್ 
ರಾಜ್ಯ

ಆನೆ ದಾಳಿಯಿಂದ ಶಿಕ್ಷಕರು ಪಾರು

ಬಾಲಮುರಳಿಕೃಷ್ಣ
ಚಾಮರಾಜನಗರ: ಚಾಮರಾಜನಗರದ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಮತ್ತು ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶದ ಮಾರ್ಗದಲ್ಲಿರುವ ತಾಲೂಕಿನ ಎರಡು ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಶಿಕ್ಷಕರು ಕಾಡಾನೆ ದಾಳಿಯಿಂದ ಅದೃಷ್ಟವಶಾತ್ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ.
ತಾಲೂಕಿನ ಕೋಳಿಪಾಳ್ಯ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಾಲು ಮತ್ತು ಮೂಕನಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಂಟೇನಾಯಕ ಕಾಡಾನೆ ದಾಳಿಯಿಂದ ಜೀವ ಉಳಿಸಿಕೊಂಡವರು.
ಮಂಗಳವಾರ ಬೆಳಗ್ಗೆ ಚಾಮರಾಜನಗರದಿಂದ ಶಾಲೆಗಳಿಗೆ ಒಟ್ಟಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ತಾಳವಾಡಿ ಬಳಿಯ ರಸ್ತೆಯಲ್ಲಿ ಕಾಡಾನೆ ಕಾಣಿಸಿದೆ. ದೂರದಲ್ಲೇ ಬೈಕ್ ನಿಲ್ಲಿಸಿ ಆನೆ ಕಾಡಿನೊಳಗೆ ಹೋಗುವುದನ್ನೇ ಕಾಯ್ದಿದ್ದಾರೆ. ಆನೆ ಕಾಡಿನೊಳಗೆ ಹೋಗಿದೆ. ಆದರೆ ಸ್ವಲ್ಪ ಸಮಯದ ನಂತರ ಶಿಕ್ಷಕರು ನಿಂತಿದ್ದ ಜಾಗಕ್ಕೆ ಬಂದು ದಾಳಿ ಮಾಡಿದೆ. ಬೈಕ್ ಬಿಟ್ಟು ಓಡಿ ಹೋಗಿ ಶಿಕ್ಷಕರು ಜೀವ ಉಳಿಸಿಕೊಂಡಿದ್ದಾರೆ. ಬೈಕ್ ಜಖಂಗೊಳಿಸಿದ ಆನೆ ನಂತರ ಸ್ಥಳದಿಂದ ತೆರಳಿದೆ.