ಕಲಬುರಗಿ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಪದವಿ ಕಾಲೇಜಿನ ಪ್ರಾಧ್ಯಾಪಕರಿಗೆ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಗೊಳ್ಳೆ ಶಿವಶರಣ ಅವರನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ ಸತ್ಕರಿಸಿದರು. ಡಾ.ಸುರೇಶಕುಮಾರ ನಂದಗಾಂವ, ಡಾ.ರಾಮಕೃಷ್ಣ ರೆಡ್ಡಿ, ಡಾ.ದಶರಥ ಮೇತ್ರೆ ಇತರರಿದ್ದರು. 
ರಾಜ್ಯ

ವಿದ್ಯಾರ್ಥಿಗಳ ಬೆಳವಣಿಗೆಗೆ ಶಿಕ್ಷಕರ ಶ್ರಮ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಜಂಟಿ ನಿರ್ದೇಶಕ ಗೊಳ್ಳೆ ಶಿವಶರಣ ಅನಿಸಿಕೆ
  • ಪದವಿ ಕಾಲೇಜು ಪ್ರಾಧ್ಯಾಪಕರಿಗೆ ಕಾರ್ಯಾಗಾರ
ಕಲಬುರಗಿ
ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರಾಧ್ಯಾಪಕರು ಶ್ರಮಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಗೊಳ್ಳೆ ಶಿವಶರಣ ಬಿ. ಹೇಳಿದರು.
ಕಲಬುರಗಿ ಶರಣಬಸವ ವಿವಿಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕರಿಗಾಗಿ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಕಚೇರಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್​ , ಶರಣಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಉದ್ಯೋಗ ಸ್ಥಳ ಮತ್ತು ತರಗತಿಗಳಲ್ಲಿ ವೈವಿಧ್ಯತೆ, ಸಾಮಾಜಿಕ ನೀತಿ ಸಮ್ಮಿಲನ ವಿಷಯ ಆಧರಿಸಿ ರುಸಾ ಮತ್ತು ಪಿ.ಎಂ.ಉಷಾ ಸ್ಕೀಮ್​ ಉಪಕ್ರಮಗಳ ಪ್ರಾದೇಶಿಕ ಮಟ್ಟದ ಸಾಮರ್ಥ್ಯ ನಿರ್ಮಾಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ೇತ್ರ ನಿತ್ಯ ಬದಲಾಗುತ್ತಿದೆ. ಹೊಸ ತಂತ್ರಜ್ಞಾನ, ಪಠ್ಯ ಕ್ರಮ, ಕಲಿಕಾ ವಿಧಾನಗಳು ಮುಂದುವರಿದಿವೆ. ವಿದ್ಯಾರ್ಥಿಗಳ ಸೂಕ್ತ ಬೆಳವಣಿಗೆಗೆ ಪ್ರಾಧ್ಯಾಪಕರು ಸದಾ ತಯಾರಾಗಿರಬೇಕು. ಹೊಸ ಪಠ್ಯ ಸಂಶೋಧನಾ ವಿಧಾನಗಳು ಮತ್ತು ಕಲಿಕೆಯ ತಂತ್ರ ಪರಿಚಯಿಸುವುದು. ಶಿಕ್ಷಕರ ನಡುವೆ ಅನುಭವ ವಿನಿಮಯ ಮತ್ತು ಉತ್ತಮ ಅಭ್ಯಾಸಗಳ ಹಂಚಿಕೆ. ವಿದ್ಯಾರ್ಥಿಗಳ ಮನೋವೈಜ್ಞಾನಿಕ ಬೆಳವಣಿಗೆಗೆ ತಕ್ಕ ಮಾರ್ಗದರ್ಶನ ಮಾಡಬೇಕು. ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ, ಡಿಜಿಟಲ್​ ಮೂಲಸೌಕರ್ಯ ಅಭಿವೃದ್ಧಿ, ಕೌಶಲ ಆಧಾರಿತ ಶಿಕ್ಷಣ ಹಾಗೂ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಈ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಮಂಜುಶ್ರೀ ಎನ್​, ಇಲಾಖೆ ನಿರ್ದೇಶಕಿ ಪ್ರೊ.ಶೋಭಾ ಜಿ. ಆನ್​ಲೈನ್​ ಮೂಲಕ ಉದ್ಘಾಟನೆ ನೆರವೇರಿಸಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ ಎಸ್​.ಶಿಂಧೆ, ಪತ್ರಾಂಕಿತ ವ್ಯವಸ್ಥಾಪಕ ಲಾಲ ಅಹ್ಮದ್​, ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ್​ ನಂದಗಾವ, ಶರಣಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ದಶರಥ ಮೇತ್ರೆ, ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಮಕೃಷ್ಣರೆಡ್ಡಿ, ಪೊ.ಬಿ.ಸರೋಜಾ, ಡಾ.ಸೂರ್ಯಕಾಂತ ಉಮಾಪುರೆ ಇದ್ದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರಾಧ್ಯಾಪಕ ಡಾ.ಉದಯಕುಮಾರ್​ ಕುಲಕರ್ಣಿ, ಪ್ರೊ.ಪಿ.ಜಿ.ತಡಸದ್​, ಕೇಂದ್ರಿಯ ವಿವಿಯ ಪ್ರಾಧ್ಯಾಪಕ ಡಾ.ರಾಜೀವ್​ ಜೋಶಿ ಸಂಪನ್ಮೂಲ ವ್ಯಕ್ತಿಗಳಾಗಿ ವಿಶೇಷ ಉಪನ್ಯಾಸ ನೀಡಿದರು.
ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುರೇಶಕುಮಾರ ನಂದಗಾಂವ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಅನಿತಾ ಭಕರೆ ನಿರೂಪಿಸಿದರೆ, ಡಾ.ಅನಿತಾ ಮೇತ್ರಿ ವಂದಿಸಿದರು. ಚನ್ನಬಸವ ಬೊಮ್ಮಣ್ಣಿ, ಕಲ್ಮೇಶ್​ ಹೂಗಾರ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪದವಿ ಕಾಲೇಜುಗಳ 300ಕ್ಕಿಂತ ಹೆಚ್ಚು ಪ್ರಾಧ್ಯಾಪಕರು ಭಾಗವಹಿಸಿದ್ದರು.
"

ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಶರಣಬಸವೇಶ್ವರ ಸಂಸ್ಥಾನ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದೆ. ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಬೆಳೆಯಲು ಪೂಜ್ಯ ಡಾ.ಅಪ್ಪ ಅವರ ಕೊಡುಗೆ ಅಪಾರ.

ಬಸವರಾಜ ದೇಶಮುಖ,

ಕಾರ್ಯದರ್ಶಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂ.