ಚಿತ್ತಾಪುರದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಬಡ್ತಿ ಪಡೆದ ಮುಖ್ಯಗುರುಗಳ ಅಭಿನಂದನಾ ಸಮಾರಂಭವನ್ನು ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಉದ್ಘಾಟಿಸಿದರು. ಶ್ರೀ ಸೋಮಶೇಖರ ಶಿವಾಚಾರ್ಯ, ಶಶಿಧರ ಬಿರಾದಾರ, ಚಂದ್ರಶೇಖರ ನುಗ್ಗಲಿ, ಶಿವಾನಂದ ನಾಲವಾರ, ಬಸವರಾಜ ಬಳೂಂಡಗಿ ಇತರರಿದ್ದರು.  
ರಾಜ್ಯ

ಸಂಘ ಬಲಿಷ್ಠಗೊಳ್ಳಲು ಶಿಕ್ಷಕರ ಸಹಕಾರ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಚಂದ್ರಶೇಖರ ನುಗ್ಗಲಿ ಅಭಿಮತ
  • ಚಿತ್ತಾಪುರದಲ್ಲಿ ಪದಗ್ರಹಣ, ಅಭಿನಂಧನಾ ಸಮಾರಂಭ
ಚಿತ್ತಾಪುರ: ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವುದರ ಜತೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಿ ದೇಶವನ್ನು ಸದೃಢಗೊಳಿಸಬೇಕಾಗಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಹೇಳಿದರು.
ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಪದಗ್ರಹಣ ಮತ್ತು ಬಡ್ತಿ ಪಡೆದ ಮುಖ್ಯ ಗುರುಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, 4,000ಕ್ಕೂ ಹೆಚ್ಚು ಶಿಕ್ಷಕರಿಗೆ ಬಡ್ತಿ ಜತೆ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್​ ಸೌಲಭ್ಯ ಕಲ್ಪಿಸಿಕೊಡಲಾಗಿದೆ. ಸಂಘ ಬಲಿಷ್ಠಗೊಳ್ಳಲು ಶಿಕ್ಷಕರ ಸಹಕಾರ ಬೇಕು ಎಂದು ಮನವಿ ಮಾಡಿದರು.
ತಾಲೂಕು ಶಿಕ್ಷಕರ ಸಂದ ಅಧ್ಯಕ್ಷ ಶಿವಾನಂದ ನಾಲವಾರ ಮಾತನಾಡಿ, ಬೋಧಕರ ವಿವಿಧ ಸಮಸ್ಯೆಗಳಿಗೆ ಸಂಘ ನಿರಂತರ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸಾನ್ನಿಧ್ಯದಲ್ಲಿ ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ್​ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗು, ಬಿಇಒ ಶಶಿಧರ ಬಿರಾದಾರ, ಪ್ರಮುಖರಾದ ಬಸವರಾಜ ಬಳೂಂಡಗಿ, ಮಹೇಶ ಹೂಗಾರ, ರಾಜೇಶ್​ ನೀಲಹಳ್ಳಿ, ದೇವಿಂದ್ರರೆಡ್ಡಿ ದುಗನೂರ, ಸಿದ್ರಾಮ ವಾಲಿ, ಶರಣಪ್ಪ ಐಕೂರ, ಅದಪ್ಪ ಬಗಲಿ, ಸ್ವರ್ಣಲತಾ ದುಗನೂರ, ಬೇಬಿ ಬಿರಾದಾರ, ನಿರ್ಮಲಾ ಕೋಲಕುಂದ, ಸೊಂದಪ್ಪ ಬಬಲಾದ, ಲಕ್ಷ್ಮಣ ಕೊಣಾಪುರ, ಶಬಾನಾ ಬೇಗಂ, ಸುನೀಲ್​ ಧರಣಿ, ರಘು, ಕರಣಪ್ಪ, ವೆಂಕಟೇಶ ದೇಸಾಯಿ, ರೇವಣಸಿದ್ದಪ್ಪ ರೋಣದ, ನಟರಾಜ, ಕಾವೇರಿ, ಅನ್ನಪೂರ್ಣ ಇತರರಿದ್ದರು. ಮಹಾಂತೇಶ ಪ್ರಸನ್ನ ನಿರೂಪಣೆ ಮಾಡಿದರು. ಶಿವಲೀಲಾ ಕಲಗುರ್ಕಿ ಸ್ವಾಗತಿಸಿದರು. ಕರಣಪ್ಪ ವಂದಿಸಿದರು.