ವಿಶೇಷ ಸಮಗ್ರ ಪರಿಷ್ಕರಣೆ 
ರಾಜ್ಯ

ಎಸ್‌ಐಆರ್, ಚುನಾವಣೆ, ಜನಗಣತಿಯಲ್ಲೇ ತೊಡಗಿದ ಶಿಕ್ಷಕರು: ಸರ್ಕಾರಿ ಶಾಲೆಗಳಲ್ಲಿ ಪಾಠವೇ ನಡೀತಿಲ್ಲ

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಕಾರಣ ಶಾಲಾ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರು ಬೂತ್ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ತೊಡಗಿಸಿಕೊಂಡಿದ್ದಾರೆ.
  • ಶಾಲೆಯಲ್ಲಿ ಒಬ್ಬರೋ ಇಬ್ಬರೋ ಅತಿಥಿ ಶಿಕ್ಷಕರು ನಿರ್ವಹಣೆ ಮಾಡುತ್ತಿದ್ದಾರೆ. ಅವರು ಕೂಡ ಬಿಸಿಯೂಟ, ಹಾಲು, ಮೊಟ್ಟೆ/ಬಾಳೇಹಣ್ಣು ವಿತರಣೆ ಸೇರಿ ಇತರ ಸೌಲಭ್ಯಗಳನ್ನು ವಿತರಿಸುವಲ್ಲಿಯೇ ನಿರತ
  • ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶಗಳ ನೆನೆದರೆ ಭಯವಾಗಲಿದೆ ಎಂದು ತಮ್ಮ ಮಕ್ಕಳು ಭವಿಷ್ಯದ ಕುರಿತು ಆತಂಕ
ಎನ್.ಎಲ್. ಶಿವಮಾದು
ಬೆಂಗಳೂರು:

ರಾಜ್ಯದಲ್ಲಿ 2026-27ನೇ ಶೈಕ್ಷಣಿಕ ವರ್ಷ ಆರಂಭವಾಗಿ ಎರಡು ತಿಂಗಳು ಕಳೆದಿವೆ. ಇಲ್ಲಿಯವರೆಗೂ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಪಾಠಗಳನ್ನೇ ಮಾಡುತ್ತಿಲ್ಲ. ನಮ್ಮ ಮಕ್ಕಳ ಭವಿಷ್ಯವನ್ನು ಕುರಿತು ಯಾರಿಗೆ ಕೇಳಬೇಕು?....

- ಹೀಗೆಂದು ಪಾಲಕರು ರಾಜ್ಯದ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ.
ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವ ಕಾರಣ ಶಾಲಾ ಶಿಕ್ಷಕರು ಹಾಗೂ ಪಿಯು ಉಪನ್ಯಾಸಕರು ಬೂತ್ ಮಟ್ಟದ ಅಧಿಕಾರಿಗಳಾಗಿ (ಬಿಎಲ್‌ಒ) ತೊಡಗಿಸಿಕೊಂಡಿದ್ದಾರೆ. ಶಾಲೆಯಲ್ಲಿ ಒಬ್ಬರೋ ಇಬ್ಬರೋ ಅತಿಥಿ ಶಿಕ್ಷಕರು ನಿರ್ವಹಣೆ ಮಾಡುತ್ತಿದ್ದಾರೆ. ಅವರು ಕೂಡ ಬಿಸಿಯೂಟ, ಹಾಲು, ಮೊಟ್ಟೆ/ಬಾಳೇಹಣ್ಣು ವಿತರಣೆ ಸೇರಿ ಇತರ ಸೌಲಭ್ಯಗಳನ್ನು ವಿತರಿಸುವಲ್ಲಿಯೇ ನಿರತರಾಗಿದ್ದಾರೆ.
ಶಾಲೆಗಳಲ್ಲಿ ಹೋಗಿ ಪಾಠ ಪ್ರವಚನದ ಕುರಿತು ಪ್ರಶ್ನಿಸಿದರೂ ಶಿಕ್ಷಕರು ಕೂಡ ತಮ್ಮ ಅಸಹಾಯಕತೆ ತೋರ್ಪಡಿಸುತ್ತಿದ್ದಾರೆ. ಹಾಗಾದರೆ, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಕತೆ ಏನು?, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶಗಳ ನೆನೆದರೆ ಭಯವಾಗಲಿದೆ ಎಂದು ತಮ್ಮ ಮಕ್ಕಳು ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಎಸ್‌ಐಆರ್ ಕೆಲಸವು ಸದ್ಯಕ್ಕೆ ಆ.9ರವರೆಗೆ ವಿಸ್ತರಿಸಲಾಗಿದೆ. ಒಂದು ವೇಳೆ ಪೂರ್ಣಗೊಳ್ಳದಿದ್ದರೆ, ಮತ್ತೆ ಸಮಯ ವಿಸ್ತರಿಸುತ್ತಾರೆ. ಶಾಲಾ ಆರಂಭವಾದ ಕನಿಷ್ಠ ಎರಡೂವರೆ ತಿಂಗಳು ಮುಗಿಯಲಿದೆ. ಈ ನಡುವೆ ಹಬ್ಬ ಹರಿದಿನ, ಸರ್ಕಾರಿ ರಜೆಗಳು, ದಸರಾ ರಜೆ ಬರಲಿವೆ. ಇನ್ನೆಲ್ಲಿ ಪಾಠ ಪ್ರವಚನಗಳು ನಡೆಯಲಿವೆ ಎಂದು ಪ್ರಶ್ನಿಸಿದ್ದಾರೆ.

ಮುಂದಿವೆ ಜನಗಣತಿ, ಚುನಾವಣೆ:

ಈ ವರ್ಷದ ಶೈಕ್ಷಣಿಕ ವರ್ಷ ಕೇವಲ ಎಸ್‌ಐಆರ್ ಕೆಲಸಕ್ಕೇ ಮುಗಿಯುವುದಿಲ್ಲ. ಮುಂದಿನ ದಿನಗಳಲ್ಲಿ ಜಿಬಿಎ, ಜಿಪಂ ಸೇರಿ ಸ್ಥಳೀಯ ಚುನಾವಣೆ ೋಷಿಸುವ ಸಾಧ್ಯತೆಗಳಿವೆ. ಮುಂದಿನ ವರ್ಷದ ೆಬ್ರವರಿ ವೇಳೆಗೆ ಕೇಂದ್ರ ಸರ್ಕಾರವು ಜನಗಣತಿ ಆರಂಭಿಸುವ ಸಾಧ್ಯತೆಗಳಿವೆ. ಒಟ್ಟಾರೆ ಈ ಶೈಕ್ಷಣಿಕ ವರ್ಷ ಶಿಕ್ಷಕರನ್ನು ಬೇರೆ ಕೆಲಸಕ್ಕೆ ನಿಯೋಜಿಸುವುದೇ ಆಗಿದೆ. ಸರ್ಕಾರಿ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವವರ ಪರಿಸ್ಥಿತಿ ಏನು ಪೋಷಕ ರವಿಕುಮಾರ್ ಪ್ರಶ್ನಿಸಿದರು.

ಶಿಕ್ಷಕರಿಗೆ ಉಭಯ ಸಂಕಟ:

ಇತ್ತ ಎಸ್‌ಐಆರ್ ಕೆಲಸವನ್ನೂ ಮಾಡಬೇಕು. ಅತ್ತ ಪಾಠ ಪ್ರವಚನಗಳನ್ನು ಸಹ ನೋಡಬೇಕು. ಶಾಲೆಯಲ್ಲಿನ ಸೌಲಭ್ಯ ವಿತರಣೆಗಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇಡೀ ದಿನ ಕೆಲಸವಾಗಿದ್ದು, ಬೋಧನೆಗೆ ಸಮಯವೇ ಸಿಗುತ್ತಿಲ್ಲ. ಪಾಠಗಳನ್ನು ಯಾವಾಗ ಪೂರ್ಣಗೊಳಿಸುವುದು ಎಂಬ ಪ್ರಶ್ನೆ ಎದುರಾಗಿದೆ. ಈ ಪರಿಸ್ಥಿತಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ, ಎಸ್‌ಐಆರ್ ಮುಗಿಸುವಂತೆ ಇಲಾಖೆ ಅಧಿಕಾರಿಗಳೇ ಹೇಳುತ್ತಿರುವುದರಿಂದ ಅನಿವಾರ್ಯವಾಗಿ ಭಾಗವಹಿಸಬೇಕಿದೆ ಎಂದು ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ನಗರ ಪ್ರದೇಶದ ಎಸ್‌ಐಆರ್ ನರಕ

ಗ್ರಾಮೀಣ ಭಾಗದಲ್ಲಿ ಕರೆ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಾರೆ. ಆದರೆ, ನಗರ ಪ್ರದೇಶದಲ್ಲಿ ಎಸ್‌ಐಆರ್ ಕೆಲಸವು ನರಕಯಾತನೆಯಾಗಿದೆ. 2002ರ ದಾಖಲೆಗಳಿರುವುದಿಲ್ಲ, ಸರಿಯಾದ ದಾಖಲೆಗಳನ್ನು ಒದಗಿಸುವುದಿಲ್ಲ. ಮನೆಗಳ ಬಳಿ ಹೋದರೆ, ಕೆಲಸಕ್ಕೆ ಹೋಗಿರುತ್ತಾರೆ. ಕರೆ ಮಾಡಿದರೆ, ರಾತ್ರಿ ಬನ್ನಿ, ಬೆಳಗ್ಗೆ ಬನ್ನಿ ಎಂಬ ಸಬೂಬು ಹೇಳುತ್ತಾರೆ. ಎಷ್ಟು ಬೇಗ ಮುಗಿಯುತ್ತೋ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿಕ್ಷಕರೊಬ್ಬರು ವಾಸ್ತವಾಂಶಗಳನ್ನು ವಿವರಿಸಿದರು.

ಫಲಿತಾಂಶದ ಬಗ್ಗೆ ಮಕ್ಕಳಿಗಿಂತ ಶಿಕ್ಷಕರಿಗೇ ಭಯ

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಲಿತಾಂಶದ ಬಗ್ಗೆ ವಿದ್ಯಾರ್ಥಿಗಳಿಗಿಂತ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರಿಗೇ ಭಯವಾಗಿದೆ. ಈ ಬಾರಿ ಉತ್ತಮ ಲಿತಾಂಶ ಪ್ರಕಟವಾಗಿದೆ. ಒಂದು ವೇಳೆ, ಮುಂದಿನ ವರ್ಷ ಲಿತಾಂಶ ಕುಸಿತವಾದಲ್ಲಿ ಏನು ಗತಿ ಎಂದು ಶಿಕ್ಷಕರಿಗೇ ಭಯವಾಗುತ್ತಿದೆ. ಲಿತಾಂಶ ನೀಡದಿದ್ದರೆ, ಮತ್ತೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮೇಲಿಂದ ಮೇಲೆ ಪ್ರಶ್ನಿಸುತ್ತಾರೆ ಎಂದು ಸರ್ಕಾರಿ ಶಿಕ್ಷಕರೊಬ್ಬರು ಮಾಹಿತಿ ಹಂಚಿಕೊಂಡರು.
"

ತರಗತಿಗಳಲ್ಲಿ ಬೋಧನೆ ಮತ್ತು ಎಸ್‌ಐಆರ್‌ಗೆ ಸಮಾನವಾಗಿ ನಿಯೋಜನೆ ಮಾಡಲು ಜಿಲ್ಲಾ ಹಂತದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದನ್ನು ಶಾಲಾ ಮುಖ್ಯ ಶಿಕ್ಷಕರು ನಿರ್ವಹಣೆ ಮಾಡಬೇಕಿದೆ.

— - ವಿಕಾಸ್ ಕಿಶೋರ್ ಸುರಳ್ಕರ್, ಶಾಲಾ ಶಿಕ್ಷಣ ಆಯುಕ್ತ