ಶಿಕ್ಷಕರ ನೇಮಕಾತಿ ಅಧಿಸೂಚನೆ  
ರಾಜ್ಯ

ಶಿಕ್ಷಕರ ನೇಮಕಾತಿ: ಗೊಂದಲ ನಿವಾರಣೆಗೆ FAQ ಪ್ರಕಟ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಪ್ರಕಟಿಸಲಾಗಿದ್ದು, ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯಲ್ಲಿ ಒದಗಿಸಲಾಗಿದೆ.
  • ವಯೋಮಿತಿ ಸೇರಿ ವಿವಿಧ ವಿಷಯಗಳ ಕುರಿತು ಅನೇಕ ಅಭ್ಯರ್ಥಿಗಳಿಗೆ ಗೊಂದಲ ಇರುವುದನ್ನು ಗಮನಿಸಿ, ಅವರ ಅನುಕೂಲಕ್ಕಾಗಿ ಎಫ್ಎಕ್ಯೂ ಪ್ರಕಟ
  • ಯಾವುದೇ ಗೊಂದಲ ಅಥವಾ ಅನುಮಾನ ಬಗೆಹರಿಯದಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 080-22483145, 080-22483140 ಅಥವಾ ಮೊ- 9449588020 ಸಂಪರ್ಕಿಸಬಹುದು
ಬೆಂಗಳೂರು:

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಕುರಿತು ಉಂಟಾಗಿರುವ ಗೊಂದಲಗಳನ್ನು ನಿವಾರಿಸಲು ಎಫ್ಎಕ್ಯೂ (ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು) ಪ್ರಕಟಿಸಲಾಗಿದೆ ಎಂದು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ.

ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಪ್ರಕಟಿಸಲಾಗಿದ್ದು, ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅಧಿಸೂಚನೆಯಲ್ಲಿ ಒದಗಿಸಲಾಗಿದೆ. ಆದರೂ ಮೀಸಲಾತಿ, ವಿದ್ಯಾರ್ಹತೆ, ವಯೋಮಿತಿ ಸೇರಿ ವಿವಿಧ ವಿಷಯಗಳ ಕುರಿತು ಅನೇಕ ಅಭ್ಯರ್ಥಿಗಳಿಗೆ ಗೊಂದಲ ಇರುವುದನ್ನು ಗಮನಿಸಿ, ಅವರ ಅನುಕೂಲಕ್ಕಾಗಿ ಎಫ್ಎಕ್ಯೂ ಪ್ರಕಟಿಸಲಾಗಿದೆ. ಇದರಿಂದ ಬಹುತೇಕ ಅಭ್ಯರ್ಥಿಗಳ ಗೊಂದಲ ನಿವಾರಣೆಯಾಗಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಅಧಿಸೂಚನೆ ಹಾಗೂ ಎಫ್ಎಕ್ಯೂ ಓದಿದ ನಂತರವೂ ಯಾವುದೇ ಗೊಂದಲ ಅಥವಾ ಅನುಮಾನ ಬಗೆಹರಿಯದಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 080-22483145, 080-22483140 ಅಥವಾ ಮೊ- 9449588020 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.