ವಿಜಯಪುರದ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರಾಧಮ್ಮ, ಸದಸ್ಯರಾದ ಮಮತಾ, ಸಂಪದಾ, ಮಾಲಾ, ಶಿಕ್ಷಕರು ಇದ್ದರು.  
ರಾಜ್ಯ

ಅಕ್ಷರದೊಂದಿಗೆ ಸಂಸ್ಕಾರ ಕಲಿಸಿ / VIJAYAPUR

ವಿಜಯಪುರ : ಅಕ್ಷರ ಎಂದರೆ ಕೇವಲ ಅ, ಆ ಅಲ್ಲ. ಅದು ಸಾಮಾನ್ಯ ವ್ಯಕ್ತಿಯನ್ನು, ಮನುಷ್ಯನನ್ನಾಗಿ ಮಾಡುವ ಶಕ್ತಿ. ಅಕ್ಷರ ಜ್ಞಾನದ ಬಾಗಿಲು. ಓದು-ಬರಹ ಬಾರದವನಿಗೆ ಜಗತ್ತು ಕತ್ತಲೆ. ಪುಸ್ತಕ, ಪತ್ರಿಕೆ, ಬೋರ್ಡ್​ನಲ್ಲಿರುವ ಮಾಹಿತಿ ಅವನಿಗೆ ಧಕ್ಕುವುದಿಲ್ಲ. ಅಕ್ಷರ ಬಲ್ಲವನಿಗೆ ಇಡೀ ಜಗತ್ತಿನ ಜ್ಞಾನಭಂಡಾರವೇ ತೆರೆದ ಪುಸ್ತಕದಂತೆ ಎಂದು ಮುಖ್ಯಶಿಕ್ಷಕ ಮನೋಹರ್​ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಎಲ್​ಕೆಜಿ, ಯುಕೆಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಕ್ಷರ ಕಲಿಕೆಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಪಾಲಕರೂ ಮಕ್ಕಳಿಗೆ ಅಕ್ಷರದ ಜತೆಗೆ ಉತ್ತಮ ಸಂಸ್ಕಾರ ಕಲಿಸಿ ಅವರನ್ನು ಉತ್ತಮ ಪೌರರನ್ನಾಗಿ ಮಾಡಬೇಕಿದೆ. ವೇದ, ಪುರಾಣ, ಕೀರ್ತನೆ, ವಚನಗಳು ಎಲ್ಲವೂ ಅಕ್ಷರ ರೂಪದಲ್ಲಿ ಉಳಿದಿವೆ. ಹಿರಿಯರು ಬರೆದಿಟ್ಟ ಅನುಭವ, ನೀತಿಪಾಠ ಮುಂದಿನ ಪೀಳಿಗೆಗೆ ಸಿಗುವುದು ಅಕ್ಷರದಿಂದಲೇ. ಅಕ್ಷರ ಇಲ್ಲದಿದ್ದರೆ ಸಂಸತಿ ನಶಿಸಿಹೋಗುತ್ತದೆ ಎಂದರು.
ಪಾಲಕರು, ಅಕ್ಕಿ, ಬೆಲ್ಲ, ಬಾಳೆಹಣ್ಣು ತಂದು, ಶಾಲಾ ಆವರಣದಲ್ಲಿ ಪೂಜೆ ಸಲ್ಲಿಸಿ ನಂತರ ತಮ್ಮ ಮಕ್ಕಳಿಗೆ ಅಕ್ಕಿಯ ಮೇಲೆ ಓಂಕಾರ ಬರೆಯಿಸುವ ಮೂಲಕ ಅಕ್ಷರಾಭ್ಯಾಸ ಮಾಡಿಸಿದರು. ಶಿಕ್ಷಕರಾದ ಎಂ.ಸಿ.ನಿರ್ಮಲಾ, ಕೆ.ನಾಗಮಣಿ, ಟಿ.ದ್ರಾಕ್ಷಾಯಣಿ, ಜೆ.ಎ.ಸರಸ್ವತಿ, ಎಂ.ರಾಜೇಶ್ವರಿ, ಐ.ಸೀಮಾ, ಎನ್​.ಮಮತಾ, ಕೆ.ರೋಹಿಣಿ, ವಿ.ಶೋಭಾ, ಎ.ಎನ್​.ಮಾಧವಿ, ಎಚ್​.ಎಸ್​.ನೇತ್ರಾವತಿ, ಎಚ್​.ವಿ.ರಾಜೇಶ್ವರಿ, ಅನ್ನಪೂರ್ಣೇಶ್ವರಿ ಇತರರು ಇದ್ದರು.