ಎಫ್‌ಕೆಸಿಸಿಐ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಉದ್ಯಮಿಗಳೊಂದಿಗಿನ ಸಂವಾದದಲ್ಲಿ ಕೆಐಎಡಿಬಿ ಸಿಇಓ ಗೋವಿಂದ ರೆಡ್ಡಿ ಪಾಲ್ಗೊಂಡಿದ್ದರು. ಎಫ್​ಕೆಸಿಸಿಐ ಅಧ್ಯಕ್ಷ ಉಮಾ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.  
ರಾಜ್ಯ

ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ತೆರಿಗೆ ಹಣ ಬಳಕೆ; ಕೆಐಎಡಿಬಿ ಸಿಇಓ ಗೋವಿಂದ ರೆಡ್ಡಿ ಭರವಸೆ

ಪ್ರಮುಖ ಮುಖ್ಯಾಂಶಗಳು

  • ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ತೆರಿಗೆ ಹಣ ಬಳಕೆ
  • ಕೆಐಎಡಿಬಿ ಸಿಇಓ ಗೋವಿಂದ ರೆಡ್ಡಿ ಭರವಸೆ
  • ಎಫ್‌ಕೆಸಿಸಿಐ ಸಭಾಂಗಣದಲ್ಲಿಜಿಲ್ಲಾಮಟ್ಟದ ಉದ್ಯಮಿಗಳೊಂದಿಗೆ ಸಂವಾದ

ಬೆಂಗಳೂರು:ಕೈಗಾರಿಕೋದ್ಯಮಿಗಳಿಂದಸಂಗ್ರಹಿಸುವ ಆಸ್ತಿ ತೆರಿಗೆಹಣವನ್ನು ಅದೇ ಕೈಗಾರಿಕಾ ಪ್ರದೇಶದರಸ್ತೆ, ಚರಂಡಿ,ಬೀದಿ ದೀಪ ಸೇರಿದಂತೆಇತರ ಮೂಲಸೌಕರ್ಯ ಕಾಮಗಾರಿಗಳಿಗೆವಿನಿಯೋಗಿಸಲಾಗುವುದು.ಜೊತೆಗೆ ಕಾಮಗಾರಿಗಳಆದ್ಯತೆಯನ್ನು ಆಯಾ ಸ್ಥಳೀಯಕೈಗಾರಿಕಾ ಸಂಘಗಳ ಜೊತೆ ಚರ್ಚಿಸಿನಿರ್ಧರಿಸಲಾಗುವುದು ಎಂದು ಕರ್ನಾಟಕಕೈಗಾರಿಕಾ ಪ್ರದೇಶ ಅಭಿವೃದ್ಧಿಮಂಡಳಿ(ಕೆಐಎಡಿಬಿ)ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಹೇಳಿದರು.

ಎಫ್‌ಕೆಸಿಸಿಐಸಭಾಂಗಣದಲ್ಲಿ ಶುಕ್ರವಾರ ಸಮಸ್ಯೆ,ಕುಂದುಕೊರತೆಹಾಗೂ ಪರಿಹಾರಗಳ ಕುರಿತು ಜಿಲ್ಲಾಮಟ್ಟದಉದ್ಯಮಿಗಳೊಂದಿಗೆ ಆಯೋಜಿಸಿದ್ದಸಂವಾದ ಸಭೆಯಲ್ಲಿ ಪಾಲ್ಗೊಂಡುಮಾತನಾಡಿದರು.

ಕೈಗಾರಿಕಾಉದ್ಯಮಿಗಳು ಇ-ಖಾತಾ,ಭೂಸ್ವಾಧೀನಪ್ರಕ್ರಿಯೆ ಕಾನೂನು ತೊಡಕು,ಪರಿಸರ ಮಂಡಳಿಮಾರ್ಗಸೂಚಿಗಳ ಪಾಲನೆ,ಮೂಲಸೌಕರ್ಯಕೊರತೆ ಸೇರಿದಂತೆ ಹಲವು ಭೌತಿಕಹಾಗೂ ತಾಂತ್ರಿಕ ಸವಾಲುಗಳನ್ನುಎದುರಿಸುತ್ತಿದ್ದಾರೆ.ಉದ್ಯಮಿಗಳ ಪ್ರತಿಸಮಸ್ಯೆ ಆಲಿಸಿ,ಕಾನೂನು ಚೌಕಟ್ಟಿನಲ್ಲಿಹಂತ ಹಂತವಾಗಿ ಪರಿಹರಿಸಲು ಮಂಡಳಿಬದ್ಧವಾಗಿದೆ ಎಂದು ಸಿಇಓ ತಿಳಿಸಿದರು.

ಜಮೀನುಖರೀದಿ ಆರಂಭದ ತಾತ್ಕಾಲಿಕ ದರದಲ್ಲಿಹಂಚಿಕೆ ಮಾಡಿದ ನಂತರ ಅಂತಿಮಕ್ರಯಪತ್ರ ನೀಡುವ ವೇಳೆಗೆ ದರದಲ್ಲಿತೀವ್ರ ಹೆಚ್ಚಳವಾಗುತ್ತಿರುವಬಗ್ಗೆ ಉದ್ಯಮಿಗಳು ಸಿಇಒ ಗಮನಕ್ಕೆತಂದರು. -ಖಾತಾಮತ್ತಿತರ ಸಮಸ್ಯೆಗಳ ನಿವಾರಣೆ,ಜಿಎಸ್‌ಐ ಮ್ಯಾಪಿಂಗ್ಮೂಲಕ ಪ್ಲಾಟ್‌ಗಳ ಡಿಜಿಟಲೀಕರಣ,ಆನ್‌ಲೈನ್ ಮೂಲಕಕಟ್ಟಡ ನಕ್ಷೆ ಅನುಮೋದನೆ ಸೇರಿದಂತೆವಿವಿಧ ಸಮಸ್ಯೆಗಳ ಪರಿಹಾರವಾಗಲಿವೆಎಂದು ಸಿಇಓ ಭರವಸೆ ನೀಡಿದರು.

ಸಭೆಯಲ್ಲಿಎಫ್‌ಕೆಸಿಸಿಐ ಉಪಾಧ್ಯಕ್ಷ ಸಾಯಿರಾಮ್ ಪ್ರಸಾದ್,ಬಿ.ಪಿ.ಶ್ರೀಧರ್,ಜಿಲ್ಲಾ ಸಮನ್ವಯಸಮಿತಿ ಛೇರ್ಮನ್ ಸುಜ್ಞಾನ ಹಿರೇಮಠ್ಮತ್ತಿತರರಿದ್ದರು.

ರಾಜ್ಯದಲ್ಲಿ ಸುಮಾರು 6 ಲಕ್ಷ ವಿವಿಧ ಉದ್ಯಮಗಳಿವೆ. ಸರ್ಕಾರವು ಹೊಸ ಪೋರ್ಟಲ್ ಆರಂಭಿಸಿದ್ದು ಎಲ್ಲಾ ಉದ್ಯಮಿಗಳು ಇಲ್ಲಿ ನೊಂದಾಯಿಸಿಕೊಳ್ಳಬೇಕು. ಈ ಮೂಲಕ ತಮಗೆ ಬೇಕಾದ ಶಿಕ್ಷಣ, ಕೌಶಲ ಮತ್ತು ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಪಡೆದುಕೊಳ್ಳಬಹುದು.

— ಉಮಾರೆಡ್ಡಿ, ಎಫ್‌ಕೆಸಿಸಿಐ ಅಧ್ಯಕ್ಷೆ