ಸರ್ಕಾರದ ಆಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಟಾಟಾ ಪವರ್ ಖಾಸಗಿ ಕಂಪನಿಗೆ ಹಸ್ತಾಂತರ ಅಥವಾ ಮಾರಾಟ ಮಾಡಬಾರದು ಎಂದು ಒತ್ತಾಯಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಒಕ್ಕೂಟದ ಪದಾಧಿಕಾರಿಗಳು ಶಾಸಕ ಶರಣಗೌಡ ಕಂದಕೂರ ಅವರಿಗೆ ಸೋಮವಾರ ಮನವಿಪತ್ರ ಸಲ್ಲಿಸಿದರು. ಹಿರಿಯ ಅಧಿಕಾರಿ ರಾವೇಂದ್ರ ಡಿ., ಶಂಕರ ಗುತ್ತಿ, ಸುರೇಖಾ ಕಟ್ಟಿಮನಿ, ಮಾರ್ಕಡೇಶ್ವರ, ಸಂಜೀವಕುಮಾರ, ಎ.ಟಿ. ರಾಥೋಡ್, ಅಂಬರೀಶ್ ಇತರರಿದ್ದರು
ಯಾದಗಿರಿ: ಸರ್ಕಾರದ ಆಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವ ಕಾರಣಕ್ಕೂ ಟಾಟಾ ಪವರ್ ಕಂಪನಿಗೆ ಹಸ್ತಾಂತರ ಅಥವಾ ಮಾರಾಟ ಮಾಡಬಾರದು. ಸಾರ್ವಜನಿಕರ ಹಿತದೃಷ್ಟಿಯಿಂದ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ತಕ್ಷಣ ತಿರಸ್ಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಮತ್ತು ಒಕ್ಕೂಟ ಒತ್ತಾಯಿಸಿದೆ.
ಶಾಸಕ ಶರಣಗೌಡ ಕಂದಕೂರ ಅವರಿಗೆ ಮನವಿಪತ್ರ ಸಲ್ಲಿಸಿದ ಕಾರ್ಯನಿರ್ವಾಹಕ ಅಭಿಯಂತರ ರಾವೇಂದ್ರ ಡಿ., ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಟಾಟಾ ಪವರ್ಗೆ ಹಸ್ತಾಂತರ ಇಲ್ಲವೇ ಮಾರಾಟ ಮಾಡಿದರೆ ಕಲ್ಯಾಣ ಕರ್ನಾಟಕ ಜನರಿಗೆ ತುಂಬ ನಷ್ಟವಾಗಲಿದೆ. ವಿದ್ಯುತ್ ಪೂರೈಕೆ ಸರ್ಕಾರದ ಕರ್ತವ್ಯ. ಖಾಸಗಿ ಕಂಪನಿಗಳಿಗೆ ವಹಿಸಿದರೆ ರಾಜ್ಯದ ವಿದ್ಯುತ್ ವಿತರಣಾ ವ್ಯವಸ್ಥೆಯ ಮೂಲಭೂತ ರಚನೆಯಲ್ಲೇ ಮಹತ್ತರ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ. ಇದರ ಪರಿಣಾಮ ರಾಜ್ಯದ ಎಲ್ಲ ವರ್ಗದ ಗ್ರಾಹಕರ ಮೇಲೆ ಬೀರಲಿದೆ ಎಂದು ದೂರಿದ್ದಾರೆ. ಮನವಿ ಸ್ವೀಕರಿಸಿದ ಶಾಸಕ ಕಂದಕೂರ, ಬೇಡಿಕೆಯನ್ನು ಕೂಡಲೇ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.
ಇಇ ಶಂಕರ ಗುತ್ತಿ, ಎಇಇ ಸುರೇಖಾ ಕಟ್ಟಿಮನಿ, ಮಾರ್ಕಡೇಶ್ವರ, ಸಂಜೀವಕುಮಾರ, ಎ.ಟಿ. ರಾಥೋಡ್, ಅಂಬರೀಶ್, ಜರೀನಾ ಬೇಗಂ, ಬಸವರಾಜ, ಅಶೋಕ, ಚಂದಪ್ಪ, ದೇವಿಂದ್ರಪ್ಪ, ಮೋಹನ ರಾಥೋಡ್, ಯಮುನಪ್ಪ, ಅಶೋಕ ಚವ್ಹಾಣ, ದೇವಪ್ಪ, ಮೆಹೆಬೂಬ್, ಥಾಮಸ್, ಮೋಸಿನ್, ಯಲ್ಲಪ್ಪ, ಆನಂದಕುಮಾರ, ದೇವಪ್ಪ ಬಸವರಾಜ, ಶ್ವೇತಾ ದಾಸನ್, ಲಲಿತಾ ಇತರರಿದ್ದರು. ಜೆಸ್ಕಾಂ ಕಚೇರಿಯಿಂದ ಶಾಸಕರ ಜನಸಂಪರ್ಕ ಕಚೇರಿವರೆಗೆ ಕಾಲ್ನಡಿಗೆ ಮೂಲಕ ತೆರಳಿದರು.
"
ಜಿಲ್ಲೆ ರೈತರಿಗೆ ಅಗತ್ಯವಿದ್ದಾಗ ನಿರಂತರ ಏಳು ತಾಸು ಕರೆಂಟ್ ಜತೆ ಸಾರ್ವಜನಿಕರಿಗೂ ತೊಂದರೆ ಆಗದಂತೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದಾಗಿ ತಾವು ಭರವಸೆ ನೀಡಿದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಚಿವ ಮತ್ತು ಸಂಬಂಧಿತ ಸಂಸದರೊಂದಿಗೆ ಚರ್ಚೆ ಮಾಡಿ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ.
— > ಶರಣಗೌಡ ಕಂದಕೂರ ಗುರುಮಠಕಲ್ ಶಾಸಕ