ಇಂಟ್ರಾ ವಿ40’ವಾಣಿಜ್ಯ ವಾಹನ  
ರಾಜ್ಯ

ಟಾಟಾ ಮೋಟಾರ್ಸ್​​ನ ನೂತನ ಇಂಟ್ರಾ ವಿ40 ವಾಣಿಜ್ಯ ವಾಹನ ಮಾರುಕಟ್ಟೆಗೆ-TATA Motors

ಬೆಂಗಳೂರು: ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ನೂತನವಾಗಿ ಅಭಿವೃದ್ಧಿಪಡಿಸಿರುವ ‘ಇಂಟ್ರಾ ವಿ40’ವಾಣಿಜ್ಯ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಮೂಲಕ ಪರ್ಯಾಯ ಇಂಧನ ಚಲನಶೀಲತೆಯ ಪ್ರಗತಿ ವೇಗಗೊಳಿಸಿರುವ ಕಂಪನಿ, ಸಣ್ಣ ವಾಣಿಜ್ಯ ವಾಹನ ಮತ್ತು ಪಿಕಪ್ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಇನ್ನಷ್ಟು ಬಲಪಡಿಸಿಕೊಂಡಿದೆ. ಹೆಚ್ಚಿನ ಹೊರೆ, ದಕ್ಷತೆ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಇಂಟ್ರಾ ವಿ40, ವಾಹನದಲ್ಲಿ ಸಿಎನ್‌ಜಿ ಮತ್ತು ಪೆಟ್ರೋಲ್ ದ್ವಿ ಇಂಧನ ತಂತ್ರಜ್ಞಾನ ಇದೆ. 1,525 ಕೆಜಿ ಸಾಮರ್ಥ್ಯ ಸಾಗಿರುವ ಈ ವಾಹನವು, 9.7 ಅಡಿ ಉದ್ದದ ಲೋಡ್ ಬಾಡಿ ಹೊಂದಿದೆ.
ಇದು 1.2 ಲೀಟರ್ ಇಂಜಿನ್ ಹೊಂದಿದ್ದು, 58 ಬಿಎಚ್‌ಪಿ ಗರಿಷ್ಠ ಪವರ್ ಮತ್ತು 106 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕೊನೆಯ ಹಂತದ ಸರಕು ಸಾಗಣೆ ಅಗತ್ಯಗಳಿಗೆ ಅತ್ಯುತ್ತಮ ಇಂಧನ ದಕ್ಷತೆಯೊಂದಿಗೆ ಬಲಿಷ್ಠ ಕಾರ್ಯಕ್ಷಮತೆ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇದರ 110 ಲೀಟರ್ ಸಿಎನ್‌ಜಿ ಟ್ಯಾಂಕ್ ದೀರ್ಘ ಪ್ರಯಾಣದ ರೇಂಜ್ ಒದಗಿಸುತ್ತದೆ.
ಇಂಧನ ವಿಧಾನ ಆಯ್ಕೆ ಮಾಡಿಕೊಳ್ಳಬಹುದು. ಆಧುನಿಕ ಕ್ಯಾಬಿನ್, ಕಾರಿನಂತಹ ಡ್ರೈವಿಂಗ್ ಅನುಭವ, ದೀರ್ಘಾವಧಿ ಚಾಲನೆಯಲ್ಲಿ ಹೆಚ್ಚಿನ ಸುರಕ್ಷತೆ, ನಿಯಂತ್ರಣ ಹಾಗೂ ಚಾಲಕನ ಆರಾಮದಾಯಕತೆಗಾಗಿ ಮುಂಭಾಗದ ಡಿಸ್ಕ್ ಬ್ರೇಕ್ ಒಳಗೊಂಡಿದೆ. ವಾಹನಕ್ಕೆ ಹೈಡ್ರೋಫಾಮ್ಡ್ ಚಾಸಿಸ್ ನೀಡಲಾಗಿದ್ದು, ಇದು ಅತ್ಯುತ್ತಮ ಶಕ್ತಿ, ಸ್ಥಿರತೆ ಮತ್ತು ಸುಧಾರಿತ ಗುಣಮಟ ಒದಗಿಸುತ್ತದೆ.