ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಆಷಾಡಮಾಸದ ಏಕಾದಶಿಯ ಪ್ರಯುಕ್ತ ನಗರದವಿವಿಧ ಮಠಗಳಲ್ಲಿ ಬೆಳಗ್ಗೆಯಿಂದಲೇತಪ್ತಾ ಮುದ್ರಾಧಾರಣೆ ಕಾರ್ಯಕ್ರಮನಡೆಯಿತು.ಬೆಳಗ್ಗೆಯಿಂದಮಾಧ್ವ ಸಂಪ್ರದಾಯದ ಮಠಗಳಲ್ಲಿವಿಶೇಷ ಪೂಜೆ ನೆರವೇರಿತು.ನಂತರ ಸರತಿಸಾಲಿನಲ್ಲಿ ನಿಂತಿದ್ದ ಮಹಿಳೆಯರು,ಮಕ್ಕಳು,ವೃದ್ಧರು ಹಾಗೂಭಕ್ತರಿಗೆ ಗುರುಗಳು ಮುದ್ರೆಹಾಕಿದರು.
ಜಯನಗರದಲ್ಲಿರುವಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿಶ್ರೀರಾಘವೇಂದ್ರ ಸ್ವಾಮಿಗಳಬೃಂದಾವನಕ್ಕೆ ಪೂಜೆ ಸಲ್ಲಿಸಿನಮತರ ಭಕ್ತರಿಗೆ ಮುದ್ರಾಧಾರಣೆಮಾಡಿದರು.
ಬಸವನಗುಡಿಯಲ್ಲಿರುವಉತ್ತರಾದಿ ಮಠದಲ್ಲಿ ಶ್ರೀಸತ್ಯಾತ್ಮತೀರ್ಥಸ್ವಾಮೀಜಿ ಮೂಲದೇವರಿಗೆ ವಿಶೇಷಪೂಜೆ ಸಲ್ಲಿಸಿ ನಂತರ ಅಪಾರಸಂಖ್ಯೆಯಲ್ಲಿ ನೆರೆದಿದ ಭಕ್ತರಿದೆಮುದ್ರಾ ಧಾರಣೆ ಮಾಡಿದರು.
ಇನ್ನುಳಿದಂತೆವಿದ್ಯಾಪೀಠದಲ್ಲಿರುವ ಪೇಜಾವರಮಠ, ಬಸವನಗುಡಿಯಲ್ಲಿರುವಪುತ್ತಿಗೆ ಮಠ,ಮಲ್ಲೇಶ್ವರದಲ್ಲಿರುವಲಿಮಾರು ಮಠ,ಬಸವನಗುಡಿಯಲ್ಲಿರುವಸುಬ್ರಮಣ್ಯ ಮಠ,ವ್ಯಾಸರಾಜ ಮಠಮತ್ತಿತರ ಕಡೆಗಳಲ್ಲಿಯೂ ಬೆಳಗ್ಗೆಯಿಂದಲೇಭಕ್ತರಿಗೆ ಮುದ್ರಾಧಾರಣೆ ಮಾಡಲಾಯಿತು.
ಆಷಾಡಮಾಸದ ಏಕಾದಶಿಯಿಂದ ವಿಷ್ಣುಯೋಗನಿದ್ರೆಗೆ ಜಾರುತ್ತಾನೆಂಬನಂಬಿಕೆ ಇದೇ ದಿನದಂದು ವೈಷ್ಣವಮತಾವಲಂಬಿ ಸನ್ಯಾಸಿಗಳು ತಮ್ಮಚಾತುರ್ಮಾಸ್ಯ ವ್ರತವನ್ನುಆರಂಭಿಸುತ್ತಾರೆ.ಇಂತಹ ಸಂದರ್ಭದಲ್ಲಿಗುರುಗಳ ಸೇವೆ ಮಾಡುವುದು ಹಾಗೂಭಗವಂತ ಯೋಗ ನಿದ್ರೆಯಲ್ಲಿರುವಸಮಯದಲ್ಲಿ ಎಚ್ಚರದಿಂದಿರುವಸಂಕೇತವಾಗಿ ಬಿಸಿಯಾದ ಲೋಹದ ಮುದ್ರೆಗುರುತನ್ನು ಮೈಮೇಲೆ ಹಾಕಿಸಿಕೊಳ್ಳಲಾಗುತ್ತದೆ.ಶಂಖ ಮುದ್ರೆ,ಸುದರ್ಶನ ಮುದ್ರೆಇತ್ಯಾದಿ ಆಯಾ ಮಠಗಳ ಪದ್ಧತಿಯಂತೆಮುದ್ರೆಗಳನ್ನು ಹಾಕಲಾಗುತ್ತದೆ. ವೈಜ್ಞಾನಿಕವಾಗಿಯೂಈ ಮುದ್ರಾಧಾರಣೆಯಿಂದ ವಿವಿಧರೋಗ-ರುಜಿನಗಳುನಿವಾರಣೆಯಾಗುತ್ತವೆ ಎಂಬ ನಂಬಿಕೆಇದೆ.