Cm Vijay Silver Sword Offering to Kollur Mookambika Temple 
ರಾಜ್ಯ

ಕೊಲ್ಲೂರು ಮೂಕಾಂಬಿಕೆಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ಸಿಎಂ ವಿಜಯ್​; ಸಂಖ್ಯಾ ಶಾಸ್ತ್ರದ ಹಿಂದಿರುವ ರಹಸ್ಯವೇನು?.. Kollur Mookambika

ಪ್ರಮುಖ ಮುಖ್ಯಾಂಶಗಳು

  • ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿಯ ಖಡ್ಗ ಅರ್ಪಿಸಿದ ಸಿಎಂ ವಿಜಯ್
  • ಯಾವುದೇ ವಿಶೇಷ ಸಂಕಲ್ಪ ಮಾಡದೆ ದೇವಿಗೆ ಕೈ ಮುಗಿದು ತೆರಳಿದ ವಿಜಯ್
  • 1 ಕೆಜಿ 600 ಗ್ರಾಂ ಅರ್ಪಿಸಿದ ವಿಜಯ್​, ಸಂಖ್ಯಾಶಾಸ್ತ್ರದ ಹಿಂದಿರುವ ವಿಶೇಷತೆ ಏನು?
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ, ದೇವಿಯ ದರ್ಶನ ಪಡೆದ ನಂತರ, ತಮಿಳುನಾಡಿನ ಸಿಎಂ ಜೋಸೆಫ್​ ವಿಜಯ್​ ಅವರು ಮೂಕಾಂಬಿಕೆಗೆ 1 ಕೆಜಿ 600 ಗ್ರಾಂ  ತೂಕದ ಬೆಳ್ಳಿಯ ಖಡ್ಗ ಅರ್ಪಿಸಿದ್ದಾರೆ. ಈ ಹಿಂದೆ  ಮಾಜಿ ಸಿಎಂ ಎಂಜಿಆರ್​ ಚಿನ್ನದ ಖಡ್ಗ ನೀಡಿದ್ದರು.
ಸರಿ ಸುಮಾರು ಮಧ್ಯಾಹ್ನ 3ಕ್ಕೆ ಬೈಂದೂರಿನಲ್ಲಿನ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ( Kollur Mookambika) ಭೇಟಿ ಕೊಟ್ಟ ತಮಿಳುನಾಡು ಸಿಎಂ ವಿಜಯ್ ಅವರು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ, 30 ನಿಮಿಷಗಳ ಕಾಲ  ದೇಗುಲದಲ್ಲೇ  ಇದ್ದು ದೇವಿಯ ದರ್ಶನ ಪಡೆದುಕೊಂಡರು. ಆದರೆ, ಅವರು  ಯಾವುದೇ ರೀತಿಯ ಸಂಕಲ್ಪ ಮಾಡಿಕೊಂಡಿಲ್ಲ. ಬಳಿಕ ಹೊರಡುವ ಕೆಲ ನಿಮಿಷಕ್ಕೂ ಮುನ್ನ ಋಣ ವಿಮೋಚನೆಗಾಗಿ  1 ಕೆಜಿ 600 ಗ್ರಾಂ ತೂಕವುಳ್ಳ  ಬೆಳ್ಳಿ ಖಡ್ಗ , ರೇಷ್ಮೇ ಸೀರೆ, ಫಲ ತಾಂಬೂಲ ಅರ್ಪಿಸಿದ್ದಾರೆ ಎನ್ನಲಾಗಿದೆ. 
1 ಕೆಜಿ 600 ಗ್ರಾಂ ಖಡ್ಗ ಸಲ್ಲಿಕೆ ಹಿಂದಿರುವ ಸತ್ಯವೇನು?
ವಿಜಯ್​ ಅವರು ಮೂಕಾಂಬಿಕೆಗೆ ಅರ್ಪಿಸಿದ 1 ಕೆಜಿ 600 ಗ್ರಾಂ ಖಡ್ಗದ ಹಿಂದೆ ಸಂಖ್ಯಾಶಾಸ್ತ್ರದ ಮಹತ್ವವಿದೆ ಎನ್ನಲಾಗಿದೆ. 1+600=  ಕೂಡಿಸಿದರೆ 7 ಬರುತ್ತದೆ, ಏಳು ಅಂದ್ರೆ ಸಪ್ತಮ ಸ್ಥಾನ. ಏಳು ಎಂದರೆ ಜಾತಕದ ಸಪ್ತಮದ ಸ್ಥಾನವನ್ನು ಸೂಚಿಸುತ್ತದೆ, ಪತಿ, ಪತ್ನಿ ಸ್ಥಾನ. ದಾಂಪತ್ಯದ ಸುಖ ಜೀವನ ಒಂದಾದರೆ. ಮತ್ತೊಂದು ಔದ್ಯೋಗಿಕ ಜೀವನ ಗಟ್ಟಿಗೊಳಿಸಿಕೊಳ್ಳಲು ಈ ಏಳರ ಸಂಖ್ಯೆ ಅತ್ಯಂತ ಸಹಕಾರಿ. ಹೀಗಾಗಿಯೇ ನಿಖರವಾಗಿ 1.6 ಕೆಜಿ ತೂಕದ ಖಡ್ಗ ಸಿದ್ಧಪಡಿಸಿ ದೇವಿಗೆ ಅರ್ಪಿಸಿದ್ದಾರೆ ಎಂದು ದೇಗುಲದ ಅರ್ಚಕರು ಮಾಧ್ಯಮಗಳಿಗೆ ಮಾಹಿತಿ ಕೊಟ್ಟರು.

ಬೆಳ್ಳಿ ಖಡ್ಗ ಅರ್ಪಿಸಿದ ವಿಶೇಷತೆ ಏನು ಗೊತ್ತಾ?

ಹರಕೆಯ ಋಣ ತೀರಿಸಲು, ಋಣ ವಿಮೋಚನಗಾಗಿ ಬೆಳ್ಳಿ ಖಡ್ಗ ಅರ್ಪಿಸಲಾಗುತ್ತದೆ. ಜೊತೆಗೆ ರಾಜಕೀಯದಲ್ಲಿ  ಹಾಗೂ ಯಾವದೇ ಕ್ಷೇತ್ರದಲ್ಲಾಗಲಿ ಅಜ್ಞಾತ ಶತ್ರುಗಳ' ನಾಶಕ್ಕಾಗಿ ಹಾಗೂ ಅವರ ಕೆಟ್ಟ ದೃಷ್ಟಿಯಿಂದ ಪಾರಾಗಲು ಈ ಖಡ್ಗವನ್ನು ದೇವಿಗೆ ಅರ್ಪಿಸುವ ಧಾರ್ಮಿಕ ಹಿನ್ನೆಲೆಯಿದೆ.

ಕೊಲ್ಲೂರು ಸಪ್ತ ದೇವತೆಗಳ ಕ್ಷೇತ್ರ

 ಕೊಲ್ಲೂರು ಮೂಕಾಂಬಿಕಾ ಕ್ಷೇತ್ರವು ಸಪ್ತ (7) ದೇವತೆಗಳ ಶಕ್ತಿ ಸಂಗಮವಿರುವ ಪವಿತ್ರ ಸ್ಥಾನವಾಗಿದೆ. ಬ್ರಹ್ಮ, ವಿಷ್ಣು, ಮಹೇಶ್ವರ ತ್ರಿ ಮೂರ್ತಿಗಳು ಹಾಗೂ ಕಾಳಿ, ಲಕ್ಷ್ಮೀ, ಸರಸ್ವತಿ- ತ್ರಿ ಶಕ್ತು ದೇವತೆಗಳು ಜೊತೆಗೆ ಆದಿ ಶಂಕರಾಚಾರ್ಯರು ಸೇರಿ 7 ದೇವತೆಗಳ ಸ್ಥಾನ ಇಲ್ಲೇ ಇರುವ ಕಾರಣ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ್ದಾರೆ ಎನ್ನಲಾಗಿದೆ.

ಎಂಜಿಆರ್ ನೀಡಿದ್ದರು ಚಿನ್ನದ ಖಡ್ಗ

ವಿಜಯ್​  ಮಾತ್ರವಲ್ಲ ಈ ಹಿಂದೆ  ಎಂಜಿಆರ್ ಅವರು ದೇಗುಲ ಬೇಟಿಯ ವೇಳೆ ಚಿನ್ನದ ಖಡ್ಗ ನೀಡಿದ್ದರು.  ಸಿಎಂ ವಿಜಯ್​ ಅವರು ವೀಕ್ಷಿಸಿದರು, (ಏಜೆನ್ಸೀಸ್).