ಆಳಂದನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಬಸವ ಜಯಂತಿ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಶ್ರೀ ಸಿದ್ಧೇಶ್ವರ ಶಿವಾಚಾರ್ಯ, ಆನಂದ ಪಾಟೀಲ್​, ಸೋಮಶೇಖರ ಮೂಲಗೆ, ನಾಗರಾಜ ಶೇಗಜಿ ಇತರರಿದ್ದರು. 
ರಾಜ್ಯ

ತಾಲೂಕು ಮಟ್ಟದ ಬಸವ ಜಯಂತಿ 24ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ಮಾಹಿತಿ
  • > ಆಳಂದನಲ್ಲಿ ಪೋಸ್ಟರ್​ ಬಿಡುಗಡೆ
ಆಳಂದ: ಸಮಾನತೆ ಹರಿಕಾರ, ಸಾಂಸತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ ನಿಮಿತ್ತ ಜೂ.24ರಂದು ತಾಲೂಕು ಮಟ್ಟದ ಬಸವಸಂಗಮ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಗೌರವಾಧ್ಯರಾದ ಶ್ರೀ ಸಿದ್ಧೇಶ್ವರ ಶಿವಾಚಾರ್ಯರು ತಿಳಿಸಿದರು. ಮಧ್ಯಾಹ್ನ 3ಕ್ಕೆ ಲಿಂಗಾಯತ ಭವನದಿಂದ ವಚನ ಪುಸ್ತಕ ಮೆರವಣಿಗೆ ಹಾಗೂ ಭವ್ಯ ಶೋಭಾಯಾತ್ರೆ ನಡೆಯಲಿದೆ. ಸಂಜೆ 6ಕ್ಕೆ ಶ್ರೀರಾಮ್​ ಮಾರ್ಕೆಟ್​ ಆವರಣದಲ್ಲಿ ಬಸವಸಂಗಮ ಬಹಿರಂಗ ಸಮಾವೇಶ ನಡೆಯಲಿದೆ. ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಪಾಲ್ಗೊಳ್ಳುವರು. ಅತ್ತಿವೇರಿ ಬಸವ ಧಾಮದ ಶ್ರೀ ಬಸವೇಶ್ವರಿ ಮಾತಾಜಿ ವಿಶೇಷ ಉಪನ್ಯಾಸ ನೀಡುವರು. ವಿವಿಧ ರಾಜಕೀಯ ಮುಖಂಡರು, ಸಾಧಕರು ಭಾಗಿಯಾಗಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಜಯಂತ್ಯುತ್ಸವ ಸಮಿತಿ ಅಧ್ಯ ಆನಂದ ಪಾಟೀಲ್​, ಪ್ರಮುಖರಾದ ಬಾಬಾ ಸಾಹೇಬ್​ ಪಾಟೀಲ್​, ನಾಗರಾಜ ಶೇಗಜಿ ಇತರರಿದ್ದರು.