ಕಲಬುರಗಿಯ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್​ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಅನೇಕ ರಂಗ ಕರ್ಮಿಗಳಿಗೆ ವಿಶ್ವರಂಗ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. ಪೂಜ್ಯ ಡಾ.ರೇವಣಸಿದ್ದ ಶಿವಾಚಾರ್ಯರು, ಸೋಮಶೇಖರ ಗೋನಾಯಕ, ಡಾ.ನಾಗೇಂದ್ರ ಮಸೂತಿ, ಶರಣಗೌಡ ಪಾಟೀಲ್​ ಪಾಳಾ, ಡಾ.ಕೆ.ಗಿರಿಮಲ್ಲ ಇತರರಿದ್ದರು. 
ರಾಜ್ಯ

ಕಲಾರಸಿಕರ ಮನರಂಜನೆಗೆ ಪ್ರತಿಭೆ ಜರೂರಿ

ಪ್ರಮುಖ ಮುಖ್ಯಾಂಶಗಳು

  • ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ದ ಶಿವಾಚಾರ್ಯರ ಹೇಳಿಕೆ
  • ವಿಶ್ವ ರಂಗಭೂಮಿ ದಿನಾಚರಣೆ
ಕಲಬುರಗಿ: ರಂಗಭೂಮಿಯ ಮೇಲೆ ಅಭಿನಯಿಸುವುದು ಅತ್ಯಂತ ಕಷ್ಟದ ಕೆಲಸ. ನವರಸಗಳೊಂದಿಗೆ ಪಾತ್ರಕ್ಕೆ ಜೀವತುಂಬಿ ಪರಕಾಯ ಪ್ರವೇಶ ಮಾಡುವ ಕಲಾವಿದನು ಜನರ ಮನ ಗೆಲ್ಲುವ ನಿಜಾರ್ಥದ ರಂಗಕರ್ಮಿ ಮತ್ತು ಆ ಮೂಲಕ ಮನೋರಂಜನೆ ಸಾಧ್ಯ ಎಂದು ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ದ ಶಿವಾಚಾರ್ಯರು ಹೇಳಿದರು.
ಕಲಬುರಗಿಯ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಸುಭಾಶ್ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್​ ಸಹಯೋಗದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಅವರು, ಕಲಾವಿದನು ತನ್ನ ಅಭಿನಯದ ಮೂಲಕ ಸಂತೋಷ, ದು@ಖ, ಕೋಪ, ಭಯ ಸೇರಿ ನವರಸಗಳನ್ನು ಜೀವಂತವಾಗಿ ಮೂಡಿಸಿದಾಗ ಮಾತ್ರ ಪ್ರೇಕರ ಮನಸ್ಸನ್ನು ಗೆಲ್ಲಲು ಸಾಧ್ಯ. ರಂಗಭೂಮಿಯ ಸೇವೆ ಮಾಡುವವರು ತಾಳ್ಮೆ, ಶ್ರಮ ಮತ್ತು ಸಮರ್ಪಣಾ ಮನೋಭಾವ ಹೊಂದಿರಬೇಕು ಎಂದು ಹೇಳಿದರು.
ಕಲಬುರಗಿ, ಯಾದಗಿರಿ ಡಿಸಿಸಿ ಬ್ಯಾಂಕ್​ ನಿರ್ದೇಶಕ ಸೋಮಶೇಖರ ಗೋನಾಯಕ ಮಾತನಾಡಿ, ರಂಗಭೂಮಿ ಜಾತಿ ಮತ ಪಂಥ ಮೀರಿ ಜನರ ಬಳಿಗೆ ಮುಟ್ಟುವ ಅತ್ಯಂತ ವಿಶಿಷ್ಟ ವೇದಿಕೆಯಾಗಿದ್ದು ಜನರಿಗೆ ಸಂಸ್ಕಾರ, ಸಂಸತಿ ನೀಡುತ್ತದೆ ಎಂದರು.
ಸಾಹಿತಿ ಡಾ.ನಾಗೇಂದ್ರ ಮಸೂತಿ ಮಾತನಾಡಿದರು. ಶಾಸಕ ಅಲ್ಲಮಪ್ರಭು ಪಾಟೀಲ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಧ್ಯಾಪಕ ಬಸವರಾಜ ಭಾಗಾ ಉಪನ್ಯಾಸ ನೀಡಿ, ರಂಗಭೂಮಿ ನಡೆದು ಬಂದ ಬಗೆ ಕುರಿತು ವಿವರಿಸಿದರು. ಸಾಹಿತಿ ಡಾ.ಕೆ ಗಿರಿಮಲ್ಲ ಪ್ರಾಸ್ತಾವಿಕ ಮಾತನಾಡಿ ವಿಶ್ವ ರಂಗಭೂಮಿ ದಿನಾಚರಣೆ ಸೇರಿ ಸಮಾಜಮುಖಿಯಾಗಿ ಕೆಲಸ ಮಾಡುವ ಪಾಳಾ ಟ್ರಸ್ಟ್​ ಕಾರ್ಯವೈಖರಿ ಶ್ಲಾಸಿದರು.
ಉದ್ಯಮಿ ವಿನೋದಕುಮಾರ ಪಾಟೀಲ ಸರಡಗಿ, ಶಿವಕುಮಾರ ಹಿರೇಗೌಡ, ಉಮೇಶ ಸಿದ್ದಣಗೋಳ ಕಡಣಿ ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್​ ಅಧ್ಯ ಶರಣಗೌಡ ಪಾಟೀಲ ಪಾಳಾ ಅಧ್ಯತೆ ವಹಿಸಿದ್ದರು. ರಂಗ ಕಲಾವಿದರಾದ ವೀರಣ್ಣಗೌಡ ಪಾಟೀಲ ಶರಣಗೌಡ ನಂದೂರ, ನಾಗಣ್ಣ ಕುರಕೋಟಿ, ಜಗದೇವಪ್ಪ ಹತ್ತರಕಿ, ಷಣ್ಮುಖ ಹುಗ್ಗಿ, ಶಂಕರ ವೇಷೆಗಾರ, ಶ್ಯಾಮರಾವ ಕೊರವಿ, ಸುನೀಲ ರ್ನಿಣಿ, ಮಲ್ಲಿಕಾರ್ಜುನ ಭಜಂತ್ರಿ, ಸಿದ್ದಪ್ಪ ಹೂಗಾರ, ನಾನಾ ಸಾಹೇಬ್​ ಶಹಾಬಾದ್​, ಗಣಪತ್​ರಾವ್​ ಕಾಳಗಿ, ಭಾಗ್ಯಶ್ರೀ ಪಾಳಾ, ರಾಜಕುಮಾರ ಉದನೂರ, ರವಿ ಹಡಲಗಿ ಮಾಶ್ಯಾಳ, ಹರಿಶ್ಚಂದ್ರ ರಾಠೋಡ, ರಾಜಕುಮಾರ ಸೇರಿ 18 ಜನ ರಂಗಕರ್ಮಿಗಳಿಗೆ ವಿಶ್ವರಂಗ ಗೌರವ ಪುರಸ್ಕಾರ ನೀಡಿ ಸತ್ಕಸಿಲಾಯಿತು. ಚಾಮರಾಜ ದೊಡ್ಡಮನಿ ನಿರೂಪಿಸಿದರು
ಗೌತಮಿ ಏಕಪಾತ್ರಾಭಿನಯ, ಅವ್ಯಕ್ತ ನಾಟಕ ಪ್ರದರ್ಶನಗೊಂಡಿತು. ಸನಾದಿ ಅಪ್ಪಣ್ಣ ಕಲಾವಿದರ ಸಂದವರು ರಂಗಗೀತೆ ಹಾಡಿದರು, ನಾಗರಾಜ ಕಲ್ಲಾ ಸ್ವಾಗತಿಸಿದರು, ಸಿದ್ದಣಗೌಡ ಕಡಣಿ ವಂದಿಸಿದರು. ಸಾಹಿತಿ ಸ್ವಾಮಿರಾವ ಕುಲಕರ್ಣಿ, ಪತ್ರಕರ್ತ ಪ್ರಭಾಕರ ಜೋಶಿ, ಡಾ. ಸದಾನಂದ ಪೆರ್ಲ, ಸಿ.ಎಸ್​.ಮಾಲಿಪಾಟೀಲ, ವೀರಶೆಟ್ಟಿ ಗಾರಂಪಳ್ಳಿ, ಡಾ.ಆನಂದ ಸಿದ್ದಾಮಣಿ, ಸಿದ್ದಪ್ಪ ತಳ್ಳಳ್ಳಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಉಮಾಪತಿ ಪಾಟೀಲ, ಅಂಬಾರಾಯ ಕೋಣೆ, ಸಿದ್ದಾರಾಮ ರಾಜಮಾನೆ, ಶ್ರೀಶೈಲ ಬಿರಾದಾರ ಇತರರಿದ್ದರು.

ರಂಗಭೂಮಿ ಜೀವನಕ್ಕೆ ಕೈಗನ್ನಡಿಯಾಗಿ ಅತ್ಯಂತ ಅದ್ಭುತವಾಗಿ ಪ್ರಸ್ತುತಗೊಳ್ಳುವುದರಿಂದ ಅನಾದಿ ಕಾಲದಿಂದಲೂ ರಂಗಭೂಮಿ ಜನಮನಕ್ಕೆ ವಿವಿಧ ರೂಪಗಳಲ್ಲಿ ತಲುಪುತ್ತಿದೆ. ಇಂತಹ ಕಲೆಯನ್ನು ಮೂಲ ಸ್ವರೂಪದಲ್ಲಿ ಕಾಯ್ದಿಟ್ಟು ಮನೋವಾಗಿ ಪ್ರಸ್ತುತಪಡಿಸಿದರೆ ಕಲಾ ರಸಿಕರ ಮನದಲ್ಲಿ ಉಳಿಯುತ್ತದೆ.

ಡಾ.ನಾಗೇಂದ್ರ ಮಸೂತಿ,

ಸಾಹಿತಿ, ಕಲಬುರಗಿ.