ಎಂಎಲ್ಸಿ ಡಾ.ಬಿ.ಜಿ. ಪಾಟೀಲ್
- ಎಂಎಲ್ಸಿ ಡಾ.ಬಿ.ಜಿ.ಪಾಟೀಲ್ ಒತ್ತಾಯ
- ಪಕ್ಷದ್ರೋಹಿಗಳಿಗೆ ಚುನಾವಣೆ ಸ್ಪರ್ಧಿಸದಂತೆ ಮಾಡಿ
ಕಲಬುರಗಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮೂಲಕ ಬಿಜೆಪಿಗೆ ಮುಜುಗರ ಆಗುವಂತೆ ಮಾಡಿದವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಂಎಲ್ಸಿ ಡಾ.ಬಿ.ಜಿ. ಪಾಟೀಲ್ ಒತ್ತಾಯಿಸಿದ್ದಾರೆ.
ಪಕ್ಷದ ಟಿಕೆಟ್ ಪಡೆದು ಶಾಸಕರಾಗಿ ಎಂಎಲ್ಸಿ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದು ಸರಿಯಲ್ಲ. ಶಿಸ್ತಿನ ಪಕ್ಷ ಎಂದು ಹೆಸರು ಮಾಡಿರುವ ಬಿಜೆಪಿಗೆ ಈ ಟನೆ ಮುಜುಗರ ಉಂಟು ಮಾಡಿದೆ. ಇಂತಹ ಕೃತ್ಯ ನಡೆಸಿದವರು ಯಾರೇ ಆಗಿರಲಿ ಶಿಸ್ತು ಕ್ರಮ ಕೈಗೊಳ್ಳಲೇಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಹಾಕದೆ ಬೇರೆಯವರಿಗೆ ಮತದಾನ ಮಾಡಿದ್ದರ ಪತ್ತೆಗೆ ರಚಿಸಿದ ಸತ್ಯಶೋಧನಾ ಸಮಿತಿ ಆದಷ್ಟು ಬೇಗ ಅಡ್ಡದಾರಿ ಹಿಡಿದವರ ಪತ್ತೆ ಹಚ್ಚಬೇಕು. ಆಮಿಷಕ್ಕೆ ಒಳಗಾಗಿ ಪಕ್ಷಕ್ಕೆ ದ್ರೋಹ ಬಗೆದವರು ಮುಂದಿನ ದಿನಗಳಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ಮಾಡಬೇಕು. ಆ ತೆರನಾದ ಕಠಿಣ ಹೆಜ್ಜೆ ವರಿಷ್ಠರು ಇಟ್ಟರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಟನೆ ಮರುಕಳಿಸುವುದಿಲ್ಲ. ಅಲ್ಲದೆ ಉಳಿದವರಿಗೂ ಎಚ್ಚರಿಕೆ ಗಂಟೆಯಾಗಲಿದೆ ಎಂದು ತಿಳಿಸಿದ್ದಾರೆ.
"
ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನವಾಗಿರುವುದು ಕಳವಳಕಾರಿ ಸಂಗತಿ. ಪಕ್ಷಕ್ಕೆ ಮೋಸ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಕರೆಯಬೇಕು ಎಂಬ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಸರಿಯಾಗಿದೆ. ಧರ್ಮಕ್ಷೇತ್ರದಲ್ಲಿ ಸಭೆಯಾದರೆ ಸತ್ಯ ಬಯಲಿಗೆ ಬರುತ್ತದೆ.
— > ಡಾ.ಬಿ.ಜಿ.ಪಾಟೀಲ್ ವಿಧಾನ ಪರಿಷತ್ ಸದಸ್ಯ