ಆಳಂದನಲ್ಲಿ ಬಸ್​ ನಿಲ್ದಾಣ ಕಾಮಗಾರಿ ಮುಗಿಯುವವರೆಗೂ ಬೇರೆಡೆ ಬಸ್​ ನಿಲುಗಡೆಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ದಲಿತ ಸೇನೆ ಕಾರ್ಯಕರ್ತರು ಬಸ್​ ನಿಲ್ದಾಣ ಎದುರು ಪ್ರತಿಭಟನೆ ನಡೆಸಿದರು. ಬಾಬುರಾವ ಅರುಣೋದಯ, ಮಲ್ಲಿಕಾರ್ಜುನ ಬೋಳಣಿ, ಸದಾಶಿವ ಕುಮ್ಮ, ಲ್ಮಣ ಮೆಲ್ಕೇರಿ ಇತರರಿದ್ದರು. 
ರಾಜ್ಯ

ತಾತ್ಕಾಲಿಕ ಬೇರೆಡೆ ಬಸ್​ ನಿಲ್ಲಿಸಲು ಕ್ರಮಕೈಗೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಆಳಂದನಲ್ಲಿ ದಲಿತ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ
  • ಗ್ರೇಡ್​-2 ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಕೆ
ಆಳಂದ: ನೂತನ ಬಸ್​ ನಿಲ್ದಾಣ ಕಾಮಗಾರಿಗಾಗಿ ಎಲ್ಲೆಡೆ ತಗ್ಗು&ಗುಂಡಿಗಳು ತೋಡಿದ್ದು, ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಕಾಮಗಾರಿ ಮುಗಿಯುವವರೆಗೂ ಬೇರೆಡೆ ಬಸ್​ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ಕಾರ್ಯಕರ್ತರು ಒತ್ತಾಯಿಸಿದರು.
ಬಸ್​ ನಿಲ್ದಾಣದ ಎದುರು ಸೋಮವಾರ ದಲಿತ ಸಂರ್ಷ ಸಮಿತಿ ವಿಶೇಷಚೇತನರ ಟಕದಿಂದ ಪ್ರತಿಭಟನೆ ನಡೆಸಿ, ಹಳ್ಳಿಗಳಿಗೆ ಹೋಗಿ ಬರುವ ಬಸ್​ಗಳಿಗೆ ನಾಮಪಲಕ ಹಾಕಬೇಕು, ತುರ್ತಾಗಿ ಬಸ್​ ನಿಲ್ದಾಣ ಕಾಮಗಾರಿ ಮಾಡಬೇಕು. ಅಂಗವಿಕಲರಿಗೆ ನೀರು, ಶೌಚಗೃಹ, ಆಸನ ಸೇರಿ ಮೂಲ ಸೌಕರ್ಯ ಕಲ್ಪಿಸಬೇಕು. ಪ್ರಯಾಣಿಕರಿಗಾಗಿ ನೆರಳಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ರೇಡ್​ 2 ತಹಸೀಲ್ದಾರ್​ ಭೀಮಣ್ಣ ಕುದುರೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಇಲಾಖೆ ಎಇಇ ಶಾಂತರೆಡ್ಡಿ, ಟಕ ವ್ಯವಸ್ಥಾಪಕ ಯೋಗಿನಾಥ ಸರಸಂಬಿ ಜತೆಗಿದ್ದರು. ಪ್ರಮುಖರಾದ ಬಾಬುರಾವ ಅರುಣೋದಯ, ಮಲ್ಲಿಕಾರ್ಜುನ ಬೋಳಣಿ, ಸದಾಶಿವ ಕುಮ್ಮ, ಲ್ಮಣ ಮೆಲ್ಕೇರಿ, ಅಶೋಕ ಸಿಂಗೆ, ರಾಜು ಅಬ್ಬಾಡೆ, ರೇವಣಸಿದ್ದ ಮಂಡೆ, ಸುವರ್ಣಾ ಬಂಗರಗಿ, ಲ್ಮಬಾಯಿ, ಶ್ರೀಶೈಲ, ಶರಣು ಕೌಲಗಿ ಇತರರಿದ್ದರು.