ಅಫಜಲಪುರ ತಾಲೂಕಿನ ಬಳ್ಳುಂಡಗಿ ಜಾಕವೆಲ್ಗೆ ಕೆಎನ್ನೆನ್ನೆಲ್ ಸಿಇ ವಿನಾಯಕ ಸುಗೂರ ಭೇಟಿ ನೀಡಿ ಪರಿಶೀಲಿಸಿದರು. ಇಇ ಶಿವಕುಮಾರ ಸ್ವಾಮಿ, ಎಇಇಗಳಾದ ಸಂತೋಷ ಸಜ್ಜನ್, ಸಂತೋಷ ಪಾಟೀಲ್ ಇದ್ದರು.
ಅಫಜಲಪುರ: ಭೀಮಾ ಏತ ನೀರಾವರಿ ಬಳ್ಳುಂಡಗಿ, ಅಳ್ಳಗಿ (ಬಿ) ಜಾಕವೆಲ್ಗಳಿಂದ ಕಾಲುವೆಗಳ ಮೂಲಕ ಸರಾಗವಾಗಿ ನೀರು ಹರಿಯುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಕೆಎನ್ಎನ್ಎಲ್ ಮುಖ್ಯ ಇಂಜಿನಿಯರ್ ವಿನಾಯಕ ಸುಗೂರು ಸೂಚನೆ ನೀಡಿದರು. ಬಳ್ಳುಂಡಗಿ, ಅಳ್ಳಗಿ (ಬಿ), ಅಫಜಲಪುರ ಜಾಕವೆಲ್ಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಸದ್ಯ ಬರಗಾಲ ಇರುವುದರಿಂದ ರೈತರು ತೊಂದರೆಯಲ್ಲಿದ್ದು, ನೀರು ಪೋಲಾಗದಂತೆ ನಿರಂತರ ನಿಗಾವಹಿಸಬೇಕು. ಜಾಕವೆಲ್ಗಳಿಗೆ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ಹಾಗೂ ಕಾಲಕಾಲಕ್ಕೆ ಮೋಟಾರ್ ಕಾರ್ಯಮತೆ ಪರಿಶೀಲಿಸಬೇಕು. ಮುಖ್ಯ ಕಾಲುವೆಯಿಂದ ಉಪ ಕಾಲುವೆಗಳಿಗೆ ನೀರು ಸರಬರಾಜು ಆಗಬೇಕು ಎಂದು ಹೇಳಿದರು. ಇಇ ಶಿವಕುಮಾರ ಸ್ವಾಮಿ, ಎಇಇಗಳಾದ ಸಂತೋಷ ಸಜ್ಜನ್, ಸಂತೋಷ ಪಾಟೀಲ್, ಪ್ರಮುಖರಾದ ಸುಧೀರ ಸಂಗಾಣಿ, ಶ್ರೀಮಂತ ಬಿರಾದಾರ, ಸಿದ್ದು ದೇವರನಾವದಗಿ, ಅಬ್ಬಾಸ್ಅಲಿ ನದಾಫ್, ನಾಮದೇವ ಕಡಕೋಳ, ಅಶೋಕ ಬಗಲಿ, ಶಿವು ಪದಕಿ, ರಾಜಶೇಖರ ಪಾಟೀಲ್, ಕಾಸೀಂಸಾಬ್, ರವಿ ಜೆ. ಇತರರಿದ್ದರು.