ದೇವದುರ್ಗದ ಬಸ್ ಡಿಪೋದಲ್ಲಿ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾರಿಗೆ ಇಲಾಖೆ ಸಿಬ್ಬಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ವೈದ್ಯರಾದ ಆನಂದ, ತ್ಯಾಗರಾಜ್, ರವಿಶಂಕರ ಶುಕ್ಲ ಇತರರಿದ್ದರು.  
ರಾಜ್ಯ

ಆರೋಗ್ಯದತ್ತ ಇರಲಿ ಕಾಳಜಿ

ಪ್ರಮುಖ ಮುಖ್ಯಾಂಶಗಳು

  • ವೈದ್ಯಾಧಿಕಾರಿ ಡಾ.ಪ್ರವೀಣ್‌ಕುಮಾರ ಸಲಹೆ
ದೇವದುರ್ಗ: ಬಸ್ ಚಾಲಕರು, ನಿರ್ವಾಹಕರು ಕರ್ತವ್ಯದ ಜತೆಗೆ ಆರೋಗ್ಯದತ್ತ ಹೆಚ್ಚಿನ ಗಮನ ಕೊಡಬೇಕು. ಉತ್ತಮ ಆರೋಗ್ಯವಿದ್ದರೆ ಯಾವುದೇ ಅಡೆತಡೆ ಇಲ್ಲದೆ ಕೆಲಸ ಮಾಡಬಹುದು ಎಂದು ವೈದ್ಯಾಧಿಕಾರಿ ಡಾ.ಪ್ರವೀಣ್‌ಕುಮಾರ ಹೇಳಿದರು.
ಇಲ್ಲಿನ ಬಸ್ ಡಿಪೋದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು. ನೌಕರರು ಆರೋಗ್ಯ ತಪಾಸಣೆ, ಕ್ಷಯರೋಗಕ್ಕೆ ಸಂಬಂಧಪಟ್ಟಂತೆ ಕ್ಷ-ಕಿರಣ ಪರೀಕ್ಷೆ, ರಕ್ತದೊತ್ತಡ, ಮಧುಮೇಹ, ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. 
ಕ್ಷಯರೋಗ ಮೇಲ್ವಿಚಾರಕ ರವಿಶಂಕರ ಶುಕ್ಲ ಮಾತನಾಡಿ, ಕ್ಷಯರೋಗ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತ ವ್ಯಕ್ತಿ ಕೆಮ್ಮುವುದರಿಂದ, ಸೀನುವುದರಿಂದ ರೋಗ ಹರಡುತ್ತದೆ. ಪೌಷ್ಟಿಕ ಆಹಾರ ಸೇವನೆಯಿಂದ ಕ್ಷಯರೋಗದಿಂದ ದೂರವಿರಬಹುದು ಎಂದರು. 
ಘಟಕ ವ್ಯವಸ್ಥಾಪಕ ರಾಜಶೇಖರ್ ತಲಗಟ್ಟಿ, ಸಹಾಯಕ ಕಾರ್ಯ ಅಧೀಕ್ಷಕ ಬಾಬುರಾವ್, ಸಂಚಾರ ನಿಯಂತ್ರಕ ಚನ್ನಪ್ಪ, ಸಿಬ್ಬಂದಿ ಬಸವರಾಜ್, ಸಂಗಣ್ಣ, ಅಕ್ಷಯ, ಅನಿಲ್, ವೈದ್ಯೆ ಸಂಗಮ್ಮ, ಆರೋಗ್ಯ ಇಲಾಖೆ ಸಿಬ್ಬಂದಿ ಶಿವಪ್ಪ, ಸೋಮಪ್ಪ, ಚನ್ನಬಸಯ್ಯ ಹಿರೇಮಠ, ಗೀತಮ್ಮ, ವಿಶ್ವನಾಥ್, ಲಕ್ಷ್ಮಣ, ರಾಚಪ್ಪ, ಆಕಾಶ ಇತರರಿದ್ದರು.