ಬಾದಾಮಿ ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಕುರಿತು ತಾಲೂಕು ಮಟ್ಟದಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರವನ್ನು ಡಾ.ಎಂ.ಬಿ.ಪಾಟೀಲ ಉದ್ಘಾಟಿಸಿದರು. ಬಸವರಾಜ ಹೂಗಾರ, ಪಿ.ಎಚ್. ಮಹಾಲಿಂಗಪುರ ಇತರರಿದ್ದರು. 
ರಾಜ್ಯ

ಮಿದುಳು ಆರೋಗ್ಯದ ಕಾಳಜಿ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರ
ಬಾದಾಮಿ: ಮಿದುಳು ಆರೋಗ್ಯ ಕಾಪಾಡಿಕೊಂಡು ಉತ್ತಮ ಜೀವನ ನಿರ್ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಬಿ. ಪಾಟೀಲ ಹೇಳಿದರು.
ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಶುಕ್ರವಾರ ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮದ ಕುರಿತು ತಾಲೂಕು ಮಟ್ಟದಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಮಿದುಳು ಆರೋಗ್ಯ ಉಪಕ್ರಮದ ಜಿಲ್ಲಾ ಸಂಯೋಜಕ ಬಸವರಾಜ ಹೂಗಾರ ಮಾತನಾಡಿ, ಮಿದುಳು ಸಂಬಂಧಿ ರೋಗಗಳಾದ ಪಾರ್ಶ್ವವಾಯು, ತಲೆನೋವು, ಅಪಸ್ಮಾರ ಹಾಗೂ ಮರೆವಿನ ಕಾಯಿಲೆ ಲಕ್ಷಣಗಳು ಹಾಗೂ ತಡೆಗಟ್ಟುವಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಮುಂಜಾಗ್ರತಾ ಕ್ರಮಗಳಾದ ದೈಹಿಕ ಚಟುವಟಿಕೆ ಆರೋಗ್ಯಕರ ಹವ್ಯಾಸಗಳು, ಯೋಗ ಮತ್ತು ಧ್ಯಾನ, ಸಂಘ ಜೀವಿಯಾಗುವದು, ಸಾಕಷ್ಟು ನಿದ್ರೆಯಿಂದ ಮಿದುಳು ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ತಾಲೂಕು ಆಸ್ಪತ್ರೆ ದಂತ ತಜ್ಞ ವೈದ್ಯ ಡಾ. ಜಯಂತ ರಾಷ್ಟ್ರೀಯ ಬಾಯಿ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್. ಮಹಾಲಿಂಗಪುರ ಪ್ರಾಸ್ತಾವಿಕವಾಗಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಆಶಾ ಕಿರಣ, ಸ್ವಯಂ ಗಣತಿ ಬಗ್ಗೆ ಮಾತನಾಡಿದರು.
ಆಶಾ ಮೆಂಟರ್ ಲಕ್ಷ್ಮೀ ಡಬಗಲ್, ಎಲ್.ಎಚ್. ಗೋಪಾಲಗೌಡರ ಸೇರಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕು ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಆರ್.ಬಿ. ಅಂಬಿಗರ ಸ್ವಾಗತಿಸಿದರು. ಎಂ.ಎಸ್. ಅಂಗಡಿ ವಂದಿಸಿದರು.