ಬನಹಟ್ಟಿಯ ಗಣೇಶ ದೇವಸ್ಥಾನ ಹಾಗೂ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಬಿಜೆಪಿ ಯುವ ಮೋರ್ಚಾ ಬಾಗಲಕೋಟೆ ಜಿಲ್ಲಾ ಅಧ್ಯಕ್ಷ ವಿದ್ಯಾಧರ ಸವದಿ ಚಾಲನೆ ನೀಡಿದರು. ಶ್ರೀಶೈಲ ಬೀಳಗಿ, ಸುರೇಶ ಅಕ್ಕಿವಾಟ ಇತರರಿದ್ದರು.
- ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿದ್ಯಾಧರ ಸವದಿ ಅಭಿಮತ
- ವಿಶ್ವ ಪರಿಸರ ದಿನಾಚರಣೆ
ರಬಕವಿ/ಬನಹಟ್ಟಿ: ಪರಿಸರ ದಿನಾಚರಣೆ ಒಂದು ದಿನದ ಕಾರ್ಯಕ್ರಮವಾಗದೆ, ವರ್ಷವಿಡೀ ಆಚರಣೆ ಕಾರ್ಯವಾಗಬೇಕು. ಪರಿಸರ ರಕ್ಷಣೆ ಕರ್ತವ್ಯ ಮಹತ್ವವಾದದ್ದು, ನೆಟ್ಟ ಸಸಿಗಳನ್ನು ರಕ್ಷಣೆ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿದ್ಯಾಧರ ಸವದಿ ತಿಳಿಸಿದರು.
ನಗರದ ಗಣೇಶ ದೇವಸ್ಥಾನ ಹಾಗೂ ದತ್ತಾತ್ರೇಯ ದೇವಸ್ಥಾನದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ನಾಶದಿಂದಾಗಿ ಭೂಮಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.
ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಜವಾಬ್ದಾರಿ ವಹಿಸುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ, ಗ್ರಾಮೀಣ ಅಧ್ಯಕ್ಷ ಸುರೇಶ ಅಕ್ಕಿವಾಟ, ಆನಂದ ಕಂಪು, ಶ್ರೀಶೈಲ ಯಾದವಾಡ, ಭೀಮಸಿ ಪಾಟೀಲ, ಅಪ್ಪು ರಾವಳ, ಮಲ್ಲು ಬೀಳಗಿ, ವೈಷ್ಣವಿ ಬಾಗೇವಾಡಿ, ಸುವರ್ಣ ಕೊಪ್ಪದ, ಪವಿತ್ರಾ ತುಕ್ಕನ್ನವರ, ಮಹಾದೇವ ಆಲಕನೂರ, ವೆಂಕಣ್ಣ ಚಿಂಚಲಿ, ಶಿವಾನಂದ ದಿವಟಿಗಿ, ಶಿವಾನಂದ ತಂಗಡಗಿ, ಪ್ರವೀಣ ಧಬಾಡಿ ಇತರರಿದ್ದರು.