ಯಾದಗಿರಿಯಲ್ಲಿ ಮಂಗಳವಾರ ಕರೆದಿದ್ದ ಸಭೆಯಲ್ಲಿ ಜಿಪಂ ಸಿಇಒ ಲವೀಶ್ ಒರ್ಡಿಯಾ ಮಾತನಾಡಿದರು. ವಿಜಯಕುಮಾರ ಮಡ್ಡೆ, ಸಿ.ಬಿ.ದೇವರಮನಿ, ಮುಖ್ಯ ವೆಂಕಟೇಶ ಬಿ.ಚಟ್ನಳ್ಳಿ, ಕುಮಲಯ್ಯ ಇತರರಿದ್ದರು.
- ಜಿಪಂ ಸಿಇಒ ಲವೀಶ್ ಸೂಚನೆ
- ಯಾದಗಿರಿಯಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ
ಯಾದಗಿರಿ: ಬೇಸಿಗೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಲವೀಶ್ ಒರ್ಡಿಯಾ ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಪಂ ಆಡಳಿತಾಧಿಕಾರಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಇಲಾಖೆಯ ನಾನಾ ಅಭಿವೃದ್ಧಿಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಮತ್ತು ನಿರ್ವಹಣೆ ಕುರಿತು ವಿಡಿಯೋ ಸಂವಾದದ ಮೂಲಕ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾನಾಡಿದರು.
ಬಿಸಿಲಿನ ತಾಪದ ಪ್ರಖರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಸುರತ ಆರೋಗ್ಯದ ಹಿತದೃಷ್ಠಿಯಿಂದ ಬಿಸಿಲಿನಲ್ಲಿ ಹೆಚ್ಚು ಓಡಾಡದಂತೆ, ಹೆಚ್ಚು, ಹೆಚ್ಚು ತಣ್ಣನೆ ನೀರು ಸೇವಿಸುವುದು, ನೆರಳಲ್ಲಿ ವಿಶ್ರಾಂತಿ ಪಡೆಯುವಂತೆ ಜನರಿಗೆ ತಿಳಿಸಲು ಗ್ರಾಮಗಳಲ್ಲಿ ಡಂಗೂರ ಹಾಕಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಸಚಿವಾಲಯದಿಂದ ವಿವಿಧ ಅಭಿವೃದ್ಧಿ ಯೋಜನೆ ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಮತ್ತು ನಿರ್ವಹಣೆಗೆ ಸಂಬಂಧಿಸಿದಂತೆ ಸ್ವೀಕೃತವಾದ ವಿವಿಧ ಪತ್ರಗಳ ಕುರಿತು ಸಲ್ಲಿಸಿದ ಅನುಪಾಲನ ವರದಿಗಳ ಮೌಲ್ಯಮಾಪನ ಪರಿಶೀಲಿಸಿದರು. ಮನೆರೇಗಾ ಯೋಜನೆಯಡಿ 2026&27ನೇ ಸಾಲಿನ ಏಪ್ರಿಲ್ ತಿಂಗಳಗೆ ಮಾನವ ದಿನಗಳ ಗುರಿಯನ್ನು ಆಯುಕ್ತಾಲಯದಿಂದ ನೀಡಲಾಗಿದೆ ಎಂದರು.
ಇ&ಸಂಬಂಧಿಸಿದಂತೆ ಮನರೇಗಾ ಯೋಜನೆಯಡಿಯಲ್ಲಿ ನೊಂದಾಯಿತ ಸಕ್ರಿಯ ಕೂಲಿ ಕಾರ್ಮಿಕರಿಗೆ ಪ್ರತಿಶತ 100 ರಷ್ಟು ಪೂರ್ಣಗೊಳಸಲು ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಿಇಒ ತಿಳಿಸಿದರು. ಯೋಜನೆಯಡಿಯಲ್ಲಿ ಕಾಮಗಾರಿಗಳಿಗೆ ಕೂಲಿ ಮತ್ತು ಸಾಮುಗ್ರಿ ಮೊತ್ತವು ಬಾಕಿ ಇದ್ದಲ್ಲಿ ಅಂತಹ ಕಾಮಗಾರಿಗಳು ಅನುಷ್ಠಾನಗೊಳಸುವುದರ ಜತೆಗೆ ತಂತ್ರಾಶದಲ್ಲಿ ಅಳವಡಿಸಬೇಕು. ತಪ್ಪಿದಲ್ಲಿ ಮುಂದಿನ ಆಗು ಹೋಗಳಿಗೆ ನಿಮ್ಮನೇ ನೇರ ಹೊಣೆಗಾರ ಮಾಡಲಾಗವೆಂದು ಕಟ್ಟುನಿಟ್ಟಿನಾಗಿ ಎಚ್ಚರಿಕೆ ನೀಡಿದರು.
ಯೋಜನೆಯಡಿ ಅನುಷ್ಠಾನಗೊಳಿಸಿರುವ ಕಾಮಗಾರಿಗಳು ಭೌತಿಕವಾಗಿ ಹಾಗೂ ಆರ್ಥಿಕವಾಗಿ ಪೂರ್ಣಗೊಂಡಿದ್ದಲ್ಲಿ ಹಂತ ಹಂತವಾಗಿ ಕಾಮಗಾರಿಗಳುನ್ನು ತುರ್ತಾಗಿ ಪೂರ್ಣಗೊಳಸಲು ಸೂಚಿಸಿದರು. ಅಂಗನವಾಡಿ ಕಟ್ಟಡಗಳ ನಿರ್ಮಾಣ ಹಾಗೂ ನಿವೇಶನ ಗುರುತಿಸುವಿಕೆ, ಮಹಾತ್ಮಗಾಂಧಿ ನರೇಗಾ ಯೋಜನೆ, ಸ್ವಚ್ಛ ಭಾರತ ಮಿಷನ್, ವಸತಿಯೋಜನೆ, ಕುಡಿಯುವ ನೀರು ಪೂರೈಕೆ ಸೇರಿ ಇತರೆ ಅಭಿವೃದ್ಧಿ ವಿಷಯಗಳ ಪ್ರಗತಿ ಪರಿಶೀಲಿಸಿದರು. ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡೆ, ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ,ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಬಿ.ಚಟ್ನಳ್ಳಿ, ಮುಖ್ಯ ಯೋಜನಾಧಿಕಾರಿ ಕುಮಲಯ್ಯ ಇತರರಿದ್ದರು.