ಒಪ್ಪಂದ ಮೀರಿ ರೈತರ ಜಮೀನನ್ನು ಆಕ್ರಮಿಸಿಕೊಳ್ಳಲು ಮುಂದಾಗಿರುವ ಸೋಲಾರ್ ಕ್ರಾಫ್ಟ್ ಪವರ್ ಇಂಡಿಯಾ 7 ಪ್ರೆವೇಟ್ ಲಿಮಿಟೆಡ್ ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಆಳಂದನಲ್ಲಿ ರೈತ ಸಂ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ಮಹಾಂತೇಶ ಜಮಾದಾರ, ವಿಠ್ಠಲ ಮಾಕಗೌಡ್ರು, ಕಮಲಬಾಯಿ ಸಜ್ಜನ್ ಇತರರಿದ್ದರು.
- ಆಳಂದ ಚೆಕ್ಪೋಸ್ಟ್ ಬಳಿ ರೈತ ಸಂಘ, ಹಸಿರು ಸೇನೆಯಿಂದ ಪ್ರತಿಭಟನೆ
- ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಕೆ
ಆಳಂದ: ರೈತರ ಜಮೀನನ್ನು ಒಪ್ಪಂದ ಮೀರಿ ಆಕ್ರಮಿಸಿಕೊಂಡಿರುವ ಆರೋಪ ಹೊತ್ತಿರುವ ಸೋಲಾರ್ ಕ್ರಾಫ್ಟ್ ಪವರ್ ಇಂಡಿಯಾ 7ಪ್ರೆವೇಟ್ ಲಿಮಿಟೆಡ್ (ಬ್ಲೂಪಿನ್ ಎನರ್ಜಿ) ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಚೆಕ್ಪೋಸ್ಟ್ ಬಳಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ಜು.13ರಂದು ರೈತ ಸಂಘಟನೆಗಳಿಂದ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸೋಲಾರ್ ಕ್ರಾಫ್ಟ್ ಪವರ್ ಇಂಡಿಯಾ 7 ಪ್ರೆವೇಟ್ ಲಿಮಿಟೆಡ್ ಸಂಸ್ಥೆ ವಿಭಾಗೀಯ ಜವಾಬ್ದಾರಿ ಹೊತ್ತಿರುವ ಮದನ್ ಬಿದರಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಂಪನಿ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಒಪ್ಪಂದ ಮೀರಿ ಜಮೀನು ಆಕ್ರಮಿಸಿಕೊಂಡಿರುವುದಕ್ಕೆ ಈಗಿನ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಅಂದರೆ ಪ್ರತಿ ಎಕರೆಗೆ 22 ಲಕ್ಷ ರೂ. ಪರಿಹಾರ ನೀಡಬೇಕು. ಜಮೀನು ಕಳೆದುಕೊಂಡ ರೈತ ಕುಟುಂಬ ಸದಸ್ಯರಿಗೆ ಕಂಪನಿ ಉದ್ಯೋಗ ನೀಡಬೇಕು. ಲೀಸಿಂಗ್ (ಬಾಡಿಗೆ) ಆಧಾರದಲ್ಲಿ ಜಮೀನು ಪಡೆದಿರುವ ರೈತರಿಗೆ ಪ್ರತಿ ಎಕರೆಗೆ 50 ಸಾವಿರ ರೂ. ಬಾಡಿಗೆ ನೀಡಬೇಕು. ಸೋಲಾರ್ ಟಕದ ವ್ಯಾಪ್ತಿಯ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಾಗೂ ಆಳಂದ ಬಂದ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ರೈತ ಸಂ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಹಾಂತೇಶ ಜಮಾದಾರ, ಗೌರವ ಅಧ್ಯಕ್ಷ ವಿಠ್ಠಲ ಮಾಕಗೌಡ್ರು, ಪ್ರಮುಖರಾದ ಕಮಲಾಬಾಯಿ ಸಜ್ಜನ್, ಸಂಗನಬಸವ ಕಟಕೆ, ಸಂಜುಕುಮಾರ ಮಂಠಾಳೆ, ಮಲ್ಲಿನಾಥ ದುಗುಂಡ, ಸುರೇಂದ್ರ ಪಾಟೀಲ್, ರವಿಕಾಂತ ಸಕ್ಕರಗಿ, ಶಿವಯ್ಯ ಸ್ವಾಮಿ, ಮಲ್ಲು ಉದ್ದನಶೆಟ್ಟಿ, ಶ್ರೀಶೈಲ ಗೊಳೆ ಇತರರಿದ್ದರು.