Bengaluru Traffic Diversion
- ಎಫ್‌ಟಿಐ ಜಂಕ್ಷನ್‌ನಲ್ಲಿ ನಿರ್ಮಾಣ ಕಾಮಗಾರಿ ಹಿನ್ನೆಲೆ ಸಂಚಾರ ಡೈವರ್ಷನ್
- ರಾಜಾಜಿನಗರ ಸಂಚಾರಿ ಪೊಲೀಸರಿಂದ ಹೊಸ ಮಾರ್ಗಸೂಚಿ ಪ್ರಕಟ
- ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗ ಬಳಸಿ ಎಂದು ಪೊಲೀಸರಿಂದ ಮನವಿ
ಬೆಂಗಳೂರು: ಹೊರವರ್ತುಲ ರಸ್ತೆಯ ಎಫ್‌ಟಿಐ ಜಂಕ್ಷನ್‌ನಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಾರಣ ಸಂಚಾರ ಮಾರ್ಗದಲ್ಲಿ ಬದಲಾವಣೆಗಳನ್ನು ರಾಜಾಜಿನಗರ ಸಂಚಾರಿ ಪೊಲೀಸರು ತಂದಿದ್ದು, ಪರ್ಯಾಯ ಮಾರ್ಗ ಬಳಸುವ ಬಗ್ಗೆ ಸೂಚನೆ ಹೊರಡಿಸಿದ್ದಾರೆ.
ಪೀಕ್ ಅವರ್ನಲ್ಲಿ ಪ್ರಯಾಣಿಕರಿಗೆ ಸಂಚಾರ ದಟ್ಟಣೆಯಿಂದಾಗಿ, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ತಡೆಯಲು ಹಾಗೂ ಆವರ ದೈನಂದಿನ ಕೆಲಸಕ್ಕೆ ತೊಡಕು ಉಂಟಾಗದರಲಿ ಎಂದು ಪರ್ಯಾಯ ಮಾರ್ಗವನ್ನು ರೂಪಿಸಿದ್ದಾರೆ. ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಪರ್ಯಾಗ ಮಾರ್ಗ ಯಾವುದು?
ಭಾರಿ ವಾಹನಗಳು ಬಳಸ ಬೇಕಾದ ದಾರಿ
ಸುರಾನಾ ಕಾಲೇಜ್ ಜಂಕ್ಷನ್‌ನಿಂದ ಕೃಷ್ಣಾನಂದನಗರ ಅಥವಾ ಮಹಾಲಕ್ಷ್ಮಿ ಲೇಔಟ್ ಕಡೆಗೆ ಹೋಗುವ ಭಾರಿ ವಾಹನಗಳು ಸುರಾನಾ ಕಾಲೇಜಿನಲ್ಲಿ ಎಡಕ್ಕೆ ತಿರುಗಿ, ಎಸ್‌ಆರ್‌ಎಸ್ ಜಂಕ್ಷನ್‌ನಲ್ಲಿ ಯು-ಟರ್ನ್ ಪಡೆಯಬೇಕು. ನಂತರ ಸಿಎಂಟಿಐ (CMTI) ಸಿಗ್ನಲ್‌ನಲ್ಲಿ ಬಲಕ್ಕೆ ತಿರುಗಿ, ಲಾರಿ ಟರ್ಮಿನಲ್ ಕ್ರಾಸ್‌ನಲ್ಲಿ ಎಡಕ್ಕೆ ತಿರುಗಬೇಕು.
ಬಿಎಂಟಿಸಿ ಬಸ್ಗಳು ಸಂಚರಿಸಬೇಕಾದ ರಸ್ತೆ
ಸಿಎಂಟಿಐ ಜಂಕ್ಷನ್‌ನಿಂದ ಸುಮನಹಳ್ಳಿ ಅಥವಾ ನಾಯಂಡಹಳ್ಳಿ ಕಡೆಗೆ ಚಲಿಸುವ ಬಸ್ಸುಗಳು ಎಫ್‌ಟಿಐ ಸೇತುವೆಯ ಕೆಳಗಿನ ರಸ್ತೆಯನ್ನು ಬಳಸುವಂತಿಲ್ಲ. ಬದಲಾಗಿ, ಮೇಲ್ಸೇತುವೆಯ ಮೂಲಕ ಡಾ. ರಾಜ್‌ಕುಮಾರ್ ಸಮಾಧಿ ಮಾರ್ಗವಾಗಿ ಸಂಚರಿಸಬೇಕು.
ಕಾರು, ದ್ವಿಚಕ್ರ ವಾಹನಕ್ಕೆ ಪರ್ಯಾಯ ಮಾರ್ಗ ಯಾವುದು?
ಸುರಾನಾ ಕಾಲೇಜಿನ ಕಡೆಯಿಂದ ಮಹಾಲಕ್ಷ್ಮಿ ಲೇಔಟ್‌ಗೆ ತೆರಳುವ ಸವಾರರು ಎಫ್‌ಟಿಐ ಸೇತುವೆಯ ಬಳಿ ಎಡಕ್ಕೆ ತಿರುಗಿ, ಸಿಎಂಟಿಐ ಸಿಗ್ನಲ್‌ನಲ್ಲಿ ಯು-ಟರ್ನ್ ಪಡೆದು ಲಾರಿ ಟರ್ಮಿನಲ್ ಕ್ರಾಸ್ ಬಳಿ ಎಡಕ್ಕೆ ತಿರುಗಿ ಸಾಗಬೇಕು.
ಸಂಚಾರ ಪೊಲೀಸರು ಏನಂದ್ರು?
ಪೀಕ್ ಅವರ್ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಸಲುವಾಗಿ ಸಾರ್ವಜನಿಕರು ಈ ತಾತ್ಕಾಲಿಕ ಕ್ರಮಗಳಿಗೆ ಸಹಕರಿಸಬೇಕು ಎಂದು ಸಂಚಾರಿ ಪೊಲೀಸರು ವಿನಂತಿಸಿಕೊಂಡಿದ್ದಾರೆ, (ಏಜೆನ್ಸೀಸ್)