ಹುಣಸಗಿ ತಾಲೂಕಿನ ಜೋಗುಂಡಬಾವಿಯಲ್ಲಿ ವಿಬಿಜಿ ರಾಮ್ ಜಿ ಯೋಜನೆ ಕುರಿತು ಜಾಗೃತಿ ಮೂಡಿಸಲಾಯಿತು. ತಾಲೂಕು ಸಂಯೋಜಕ ಮಲ್ಲಿಕಾರ್ಜುನ, ಸುರೇಶ ದಳವಾಯಿ, ಅಂಬರೀಷ್, ಶ್ರೀದೇವಿ ಇತರರಿದ್ದರು.
- ತಾಲೂಕು ಸಂಯೋಜಕ ಮಲ್ಲಿಕಾರ್ಜುನ ಕರೆ
- ಜೋಗುಂಡಬಾವಿಯಲ್ಲಿ ಜಾಗೃತಿ ಕಾರ್ಯಕ್ರಮ
ಹುಣಸಗಿ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ವಿಬಿಜಿ ರಾಮ್ ಜಿಯ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಅಲ್ಲದೆ ಅರ್ಹ -Àಲಾನುಭವಿಗಳು ನೋಂದಣಿ ಮಾಡಿಕೊಳ್ಳಬೆಕು ಎಂದು ತಾಲೂಕು ಐಇಸಿ ಸಂಯೋಜಕ ಮಲ್ಲಿಕಾರ್ಜುನ ಹೇಳಿದರು.
ಜೋಗುಂಡಬಾವಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ವಿಬಿ ಜಿ ರಾಮï ಜಿ ಯೋಜನೆಯ ಕುರಿತು ಗ್ರಾಮಸ್ಥರಲ್ಲಿ ಜÁಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೂಲಿ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ವಿಬಿಜಿ ರಾಮï ಜಿ ಯೋಜನೆಯ ಅನುಷ್ಠಾನ ಮತ್ತು ಗ್ರಾಮೀಣ ಜನರಿಗೆ ಉದ್ಯೋಗ ಭದ್ರತೆ ಒದಗಿಸಿದ್ದು, ದಿನಗೂಲಿ ೩೭೦ರಿಂದ ೩೮೨ ರೂ.ಗೆ ಹೆಚ್ಚಿಸಲಾಗಿದೆ ಎಂದರು.
ವಾರ್ಷಿಕ ಮಾನವ ದಿನಗಳು ೧೦೦ರಿಂದ ೧೨೫ ದಿನಗಳಿಗೆ ಹೆಚ್ಚಳ, ವಾರ್ಷಿಕ ಒಂದು ಗ್ರಾಮೀಣ ರೋಜಗಾರ್ ಗ್ಯಾರಂಟಿ ಕಾರ್ಡ್ಗೆ ೪೭,೭೫೦ ರೂ.ಗಳಿಸಲು ಅವಕಾಶ ನೀಡಲಾಗಿದೆ. ೬೦ ದಿನಗಳ ಕೃಷಿ ಚಟುವಟಿಕೆಗೆ ಯೋಜನೆಯ ಕೂಲಿ ಕೆಲಸದಿಂದ ವಿರಾಮ, ಎನ್ ಎಂಎAಎಸ್ ಹಾಜರಾತಿ ಆನ್‌ಲೈನ್ ಹಾಜರಾತಿ ಕಡ್ಡಾಯವಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬ -Àಲಾನುಭವಿ ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಗ್ರಾಪಂ ಅಽಕಾರಿ ಸುರೇಶ ದಳವಾಯಿ, ಅಂಬರೀಷ್, ಶ್ರೀದೇವಿ ಹಾಗೂ ಪಂಚಾಯಿತಿ ಸಿಬ್ಬಂದಿ ಸಾರ್ವಜನಿಕರು ಭಾಗವಹಿಸಿದ್ದರು.