ಮಾಳಹಳ್ಳಿ ಮಾಳಿಂಗರಾಯ ದೇವಸ್ಥಾನದ ಪೂಜಾರಿ ಕೆಂಚರಾಯ ಮಹಾರಾಯ ಅವರ ಜನ್ಮದಿನ ನಿಮಿತ್ತ ಗುರುವಾರ ಕೆಂಭಾವಿಯಲ್ಲಿ ಹಮ್ಮಿಕೊಂಡ ಉಚಿತ ನೇತ್ರ ಚಿಕಿತ್ಸಾ ಶಿಬಿರಕ್ಕೆ ಚನ್ನಬಸವ ಶಿವಾಚಾರ್ಯರು ಚಾಲನೆ ನೀಡಿದರು. ಕೆಂಚರಾಯ ಪೂಜಾರಿ, ಶಿವರಾಜ ಪೂಜಾರಿ ನರಗಡ್ಡಿ, ಶ್ರೀನಿವಾಸರೆಡ್ಡಿ ಯಾಳಗಿ, ಡಾ.ಗಿರೀಶ್ ಕುಲಕರ್ಣಿ ಇದ್ದರು.
ಕೆಂಭಾವಿ: ಮಾಳಹಳ್ಳಿಯ ಮಾಳಿಂಗರಾಯ ದೇವಸ್ಥಾನದ ಪೂಜಾರಿ ಶ್ರೀ ಕೆಂಚರಾಯ ಮಹಾರಾಯ ಅವರ ಜನ್ಮದಿನ ನಿಮಿತ್ತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡ ಉಚಿತ ನೇತ್ರ ಚಿಕಿತ್ಸಾ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ಯುವ ಮುಖಂಡ ಮಲ್ಲು ದಂಡಿನ್ ಹೇಳಿದರು.
ಈ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿವರ್ಷ ಮಾಳಹಳ್ಳಿ ಪೂಜ್ಯರ ಜನ್ಮದಿನವನ್ನು ಭಕ್ತರು ಸೇರಿ ಆಚರಿಸಿಕೊಂಡು ಬುರತ್ತಿದ್ದಾರೆ. ಅಲ್ಲದೆ ಈ ವರ್ಷ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಂಡು ನೂರಾರು ಜನರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದರು. ಕಣ್ಣಿನ ಶಸಚಿಕಿತ್ಸೆಗಾಗಿ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಮಾಡಿಸಲಾಗುತ್ತದೆ. ರೋಗಿಗಳಿಗೆ ಹೋಗಿ ಬರಲು ಬಸ್ನ ವ್ಯವಸ್ಥೆ ಸಹ ಮಾಡಲಾಗುವುದು ಎಂದರು ಹೇಳಿದರು.
ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಶ್ರೀ ಕೆಂಚರಾಯ ಮಹಾರಾಯ, ಶಿವರಾಜ ಪೂಜಾರಿ ನರಗಡ್ಡಿ, ವೈದ್ಯಾಧಿಕಾರಿ ಡಾ.ಗಿರೀಶ್ ಕುಲಕರ್ಣಿ, ಶ್ರೀನಿವಾಸ ರೆಡ್ಡಿ ಯಾಳಗಿ, ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆ ಡಾ.ಅಮಿತ್, ಡಾ.ರಾಕೇಶ್, ಡಾ.ದೀಪಾ, ಡಾ.ಸುವರ್ಣ ಅಂಗಡಿ, ಕಾಳಪ್ಪ ಕವತಿ, ಮಹಿಪಾಲರೆಡ್ಡಿ ಡಿಗ್ಗಾವಿ, ಶರಣಪ್ಪ ಯಾಳಗಿ, ಸಂಗಣ್ಣ ತುಂಬಿಗಿ, ವಿಜಯಕುಮಾರ ಮಂಗ್ಯಾಳ, ಭೀಮನಗೌಡ ಪಾಟೀಲ್, ಕೆಂಜೋಡ್ಯಪ್ಪ ಹೊಂಬಳಕಲ್, ಮುತ್ತಪ್ಪ ಪೂಜಾರಿ, ಹಳ್ಳಪ್ಪ ಕವಲ್ದಾರ್, ಅಜಯ್ ಪಾಟೀಲ್ ಇತರರಿದ್ದರು. ಸುಮಾರು 350ಕ್ಕೂ ಹೆಚ್ಚು ಜನರನ್ನು ಪರೀಸಲಾಯಿತು. ಅದರಲ್ಲಿ 150ಕ್ಕೂ ಹೆಚ್ಚು ಜನರನ್ನು ನೇತ್ರ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಯಿತು.