ಹೂವಿನಹಿಪ್ಪರಗಿ ಸಮೀಪದ ದಿಂಡವಾರ ಗ್ರಾಮದ ಯಲ್ಲಮ್ಮ ದೇವಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ್-ಜಿ ಕಾರ್ಯಗಾರದಲ್ಲಿ ಎಒ ವೆಂಕಟೇಶ ವಂದಾಲ ಮಾತನಾಡಿದರು. ಪಿಡಿಒ ಎಸ್.ಎಸ್. ಶಿವಣಗಿ ಇದ್ದರು. 
ರಾಜ್ಯ

ಸರ್ಕಾರಿ ಯೋಜನೆ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ವೆಂಕಟೇಶ ವಂದಾಲ ಹೇಳಿಕೆ
  • ಜನ ಜಾಗೃತಿ ಕಾರ್ಯಕ್ರಮ

ಹೂವಿನಹಿಪ್ಪರಗಿ: ಈ ವರ್ಷ ಮಳೆ ಕೊರತೆಯಿಂದ ಬರಗಾಲ ಇರುವುದರಿಂದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರ ವಿಬಿ-ಜಿ ರಾಮ್-ಜಿ ಯೋಜನೆ ಅಡಿಯಲ್ಲಿ ಕೂಲಿ ಕಾರ್ಮಿಕರಿಗೆ 125 ಮಾನವ ದಿನಗಳನ್ನು ನೀಡಿ ಆರ್ಥಿಕವಾಗಿ ಸಹಾಯ ಮಾಡಲಿದೆ ಎಂದು ಬಸವನ ಬಾಗೇವಾಡಿ ತಾಪಂ ಇಒ ವೆಂಕಟೇಶ ವಂದಾಲ ಹೇಳಿದರು.

ಸಮೀಪದ ದಿಂಡವಾರ ಗ್ರಾಮದ ಯಲ್ಲಮ್ಮ ದೇವಿ ದೇವಾಲಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ ಇಲಾಖೆ, ಜಿಲ್ಲಾ ಪಂಚಾಯತ್ ವಿಜಯಪುರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಬಿ-ಜಿ ರಾಮ್-ಜಿ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ ವರ್ಷ ಯೋಜನೆ ಜಾರಿಯಾಗಿದ್ದು, ಗ್ರಾಮೀಣ ಭಾರತವು ಸಶಕ್ತ ಮತ್ತು ಸಮರ್ಥವಾಗಲಿದೆ. ನರೇಗಾ ಯೋಜನೆಯಲ್ಲಿದ್ದ ನಿಯಮ ಸಡಿಲಿಕೆ ಮಾಡಿ ಸಾರ್ವಜನಿಕರಿಗೆ ಅನುಕೂಲವನ್ನು ಮಾಡಿದೆ. ಸಂಬಳವನ್ನು ನೇರವಾಗಿ ಕೂಲಿ ಕಾರ್ಮಿಕರಿಗೆ ಯಾವುದೇ ಸಬೂಬು ಇಲ್ಲದೇ ಪಂಚಾಯಿತಿ ಸಿಬ್ಬಂದಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ಪಿಡಿಒ ಎಸ್.ಎಸ್. ಶಿವಣಗಿ ಮಾತನಾಡಿ, ವಿಬಿ-ಜಿ ರಾಮ್-ಜಿ ಯೋಜನೆ ಹೆಸರು ಮಾತ್ರ ಬದಲಾವಣೆ ಆಗಿಲ್ಲ, ಇದರಲ್ಲಿ ಇರುವ ಹಲವಾರು ತೊಡಕುಗಳನ್ನು ನವೀಕರಿಸಲಾಗಿದೆ ಇದರಿಂದ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಆ 
ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕುಟುಂಬದಲ್ಲಿದ್ದ ಹಾಗೂ ನಿಮ್ಮ ಬೇಕಾದ ವ್ಯಕ್ತಿಗಳನ್ನು ಕರೆ ತನ್ನಿ ಎಲ್ಲರಿಗೂ ಕೆಲಸದ ಭದ್ರತೆ ನೀಡಲಾಗುವುದು ಎಂದು ಹೇಳಿದರು.
ಆರ್.ಎಂ. ಕೋಲಕಾರ, ಮಲ್ಲಯ್ಯ ಗಣಿಮಠ, ವಿಕಾಶ ಜೋಗಿ, ಸಿದ್ದು ಮಟ್ಟಿ, ಚಂದ್ರಶೇಖರ ಇತರರಿದ್ದರು.