ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಸಮವಸ ವಿತರಿಸಲಾಯಿತು. ಬಿ.ಕೆ.ಯತೀಶ್, ಚಂದ್ರಶೇಖರ್ ಅಡ್ಮನಿ, ಎಂ.ಪಿ.ಶಿವಕುಮಾರಿ, ಬಿ.ವಿ.ಸುಮಾ, ಯು.ಡಿ. ಮಂಜುನಾಥ್ ಮತ್ತಿತರರು ಇದ್ದರು. 
ರಾಜ್ಯ

ಸರ್ಕಾರದ ಸೌಲಭ್ಯ ಪಡೆದು ಭವಿಷ್ಯ ರೂಪಿಸಿಕೊಳ್ಳಿ

ಶನಿವಾರಸಂತೆ: ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕೊಡ್ಲಿಪೇಟೆ ವಿದ್ಯಾಸಂಸ್ಥೆ ನಿರ್ದೇಶಕ ಬಿ.ಕೆ.ಯತೀಶ್ ಹೇಳಿದರು.
ಕೊಡ್ಲಿಪೇಟೆ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ ವಿತರಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಬೇಕು. ವಿದ್ಯೆ ಉತ್ತಮ ಸಂಸ್ಕಾರ ಹಾಗೂ ಬದುಕನ್ನು ನೀಡುತ್ತದೆ. ಆದ್ದರಿಂದ ತಾವೆಲ್ಲರೂ ಚನ್ನಾಗಿ ಓದಿ ಸಮಾಜದ ಆಸ್ತಿಯಾಗಿ ಬಾಳಬೇಕು. ದಾನಿಗಳು ಮತ್ತು ಶಾಲೆಯ ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ಧನ ಸಹಾಯ ನೀಡಿದ್ದು, ಇದರಲ್ಲಿ ಸಮವಸ ವಿತರಿಸಲಾಗಿದೆ ಎಂದರು.
ಮುಖ್ಯ ಶಿಕ್ಷಕ ಚಂದ್ರಶೇಖರ್ ಅಡ್ಮನಿ ಮಾತನಾಡಿ, ಸರ್ಕಾರದಿಂದ ವಿದ್ಯಾರ್ಥಿ ವೇತನ, ಪಠ್ಯ ಪುಸ್ತಕ, ಬಸ್ ಪಾಸ್, ಮಧ್ಯಾಹ್ನದ ಬಿಸಿ ಯೂಟ, ಮೊಟ್ಟೆ ಸೇರಿ ಇನ್ನಿತರ ಸೌಲಭ್ಯಗಳನ್ನು ನೀಡುತ್ತಿದ್ದು, ಈ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭ ಶಾಲಾ ಶಿಕ್ಷಕರಾದ ಎಂ.ಪಿ.ಶಿವಕುಮಾರಿ, ಬಿ.ವಿ.ಸುಮಾ, ಯು.ಡಿ.ಮಂಜುನಾಥ್, ಎ.ಪಿ.ಸುನಿಲ್, ಕಿರಣ್ ಕುಮಾರ್, ಕಂಪ್ಯೂಟರ್ ಶಿಕ್ಷಕಿ ನಂದಿತಾ, ಗುಮಾಸ್ತರಾದ ಪವನ್ ಕುಮಾರ್, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.