Take advantage of AI technology 
ರಾಜ್ಯ

ಎಐ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳಿ

ತುಮಕೂರು ಡೆಸ್ಕ್
ತಿಪಟೂರು: ಅಗಾಧ ಪ್ರಮಾಣದ ಡಾಟಾ ಹೊಂದಿರುವ ಎಐ ತಂತ್ರಜ್ಞಾನ ಬಳಸಿಕೊಳ್ಳುವುದು ನಮ್ಮ ಕೈಯಲ್ಲಿದೆ ಎಂದು ಸಿಸ್ಕೋ ನೆಟ್​ವರ್ಕ್​ ಅಕಾಡೆಮಿಯ ಭಾರತ ಮತ್ತು ಸಾರ್ಕ್​ ಮುಖ್ಯಸ್ಥ ಇಶ್ವಿಂದರ್​ ಸಿಂಗ್​ ಹೇಳಿದರು.
ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಪ್ರಾರಂಭವಾದ ಸಿಸ್ಕೋ ಸೆಂಟರ್​ ಆಫ್​ ಎಕ್ಸಲೆನ್ಸ್​ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರದ್ಧೆಯಿಂದ ಓದುವವರಿಗೆ ಇಲ್ಲಿ ಪೂರಕ ಸೌಲಭ್ಯ ಕಲ್ಪಿಸಲಾಗಿದೆ. ಸದರಿ ಕಾಲೇಜಿನ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ಮತ್ತು ಶ್ರದ್ಧೆ ಇತರೆ ಕಾಲೇಜು ವಿದ್ಯಾರ್ಥಿಗಳಿಗಿಂತ ಭಿನ್ನವಾಗಿದೆ. ಎಐನಿಂದ ಉದ್ಯೋಗಕ್ಕೆ ಕುತ್ತು ಸುಳ್ಳು ಎಂದರು.
ಎಪಿಜೆಸಿ ಮುಖ್ಯಸ್ಥೆ ಪ್ರಿಯಾಂಕ ಭಗತ್​ ಮಾತನಾಡಿ, ಸೈಬರ್​ ಸೆಕ್ಯೂರಿಟಿ ಬಗ್ಗೆ ಇನ್ನಿಲ್ಲದ ಅವಿಷ್ಕಾರ ಮಾಡುವ ಮೂಲಕ ಸೈಬರ್​ ಅಪರಾಧಗಳ ಸಂಖ್ಯೆ ಇಳಿಮುಖವಾಗಲು ಶ್ರಮಿಸುತ್ತಿದೆ. ಸಂಸ್ಥೆ ಕಲ್ಪತರು ವಿದ್ಯಾಸಂಸ್ಥೆಯ ಸಹಭಾಗಿತ್ವದಲ್ಲಿ ಇಲ್ಲಿ ಕೇಂದ್ರ ಪ್ರಾರಂಭಿಸುತ್ತಿದೆ ಎಂದರು.
ಸಿಸ್ಕೋ ನೆಟ್​ವರ್ಕಿಂಗ್​ ಅಕಾಡೆಮಿಯ ಸಹಾಯಕ ವ್ಯವಹಾರ ಅಭಿವೃದ್ಧಿ ಅಧಿಕಾರಿ ದಿನೇಶ್​ ಕುಮಾರ್​ ಪಾಣಿಗ್ರಾಹಿ, ಸಂಸ್ಥೆಯ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ, ಉಪಾಧ್ಯಕ್ಷ ಬಾಗೇಪಲ್ಲಿ ನಟರಾಜು, ಕಾರ್ಯದರ್ಶಿಗಳಾದ ಜಿ.ಎಸ್​.ಉಮಾಶಂಕರ್​, ಎಂ.ಆರ್​.ಸಂಗಮೇಶ್​. ಟಿ.ಯು.ಜಗದೀಶಮೂರ್ತಿ, ಖಜಾಂಚಿ ಟಿ.ಎಸ್​.ಶಿವಪ್ರಸಾದ್​. ಪ್ರಾಂಶುಪಾಲ ಡಾ.ಎಚ್​.ಎಸ್​.ಸತೀಶ್​ ಕುಮಾರ್​ ಇದ್ದರು.