ಬೀದರ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ರೈತರಿಗೆ ಸೋಮವಾರ ತರಕಾರಿ ಬೀಜದ ಕಿಟ್ಗಳನ್ನು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ವಿತರಿಸಿದರು. ಸಚಿನ್, ಸಂಗಮೇಶ ಘಾಳೆ, ಚಿರಂಜೀವಿ ರೆಡ್ಡಿ, ಕಾಶೀನಾಥ ಸ್ವಾಮಿ ಇತರರಿದ್ದರು.
- ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸಲಹೆ
- ರೈತರಿಗೆ ತರಕಾರಿ ಬೀಜದ ಕಿಟ್ ವಿತರಣೆ
ಬೀದರ್: ಕೃಷಿ ಕ್ಷೇತ್ರದ ಬಲವರ್ಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ದಣ ಕ್ಷೇತ್ರದ ರೈತರ ಆರ್ಥಿಕ ಅಭಿವೃದ್ಧಿ ಹಾಗೂ ತೋಟಗಾರಿಕೆ ಬೆಳೆಗಳ ಉತ್ತೇಜನ ನಿಟ್ಟಿನಲ್ಲಿ ನಿಮಿತ್ತ ನಗರದ ಶಾಸಕರ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ತೋಟಗಾರಿಕೆ ಇಲಾಖೆ ಯೋಜನೆಗಳಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ತರಕಾರಿ ಬೀಜದ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ತೋಟಗಾರಿಕೆ ಬೆಳೆಗಳು ಕಡಿಮೆ ಅವಧಿಯಲ್ಲಿ ಉತ್ತಮ ಆದಾಯ ತಂದುಕೊಡುವ ಸಾಮರ್ಥ್ಯ ಹೊಂದಿದ್ದರಿಂದ ರೈತರು ತರಕಾರಿ ಬೆಳೆಗಳತ್ತ ಚಿತ್ತ ಹರಿಸಬೇಕು ಎಂದು ಸಲಹೆ ನೀಡಿದರು.
ಗ್ರಾಮೀಣ ರೈತರ ಕೃಷಿ ಚಟುವಟಿಕೆಗೆ ನೆರವು ನೀಡುವ ನಿಟ್ಟಿನಲ್ಲಿ ಗುಣಮಟ್ಟದ ಬೀಜ, ರಸಗೊಬ್ಬರ, ನೀರಾವರಿ ಸೇರಿ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರಗಳು ಬದ್ಧವಾಗಿವೆ ಎಂದರು.
ತೋಟಗಾರಿಕೆ ಅಧಿಕಾರಿಗಳಾದ ಸಚಿನ್, ಸಂಗಮೇಶ ಘಾಳೆ, ಚಿರಂಜೀವಿ ರೆಡ್ಡಿ, ಕಾಶೀನಾಥ ಸ್ವಾಮಿ, ಪ್ರಮುಖರಾದ ಉದಯ ತೋರಣ, ಶಿವಕುಮಾರ ನಾಗಲಗಿದ್ದಿ, ಶಿವಕುಮಾರ ಸುಲ್ತಾನಪುರ, ಗಜಾನಂದ ತೋರಣ, ಸಾಯಿನಾಥ ಪಾಟೀಲ್, ವೀರೇಶ ಕಂಗನಕೋಟ, ಮಲ್ಲಯ್ಯ ಸ್ವಾಮಿ, ಅನೀಲ ಪಲ್ಕಾಪುರ, ಶ್ರೀನಿವಾಸ ಹೂಗಾರ, ಸಿದ್ದಾರೂಢ ಭಾಲ್ಕೆ, ಗೋಪಾಲರೆಡ್ಡಿ, ಬಸು ಹೇಡೆ, ಸುನೀಲ, ಶಿವಕುಮಾರ ಶಹಾಪುರ ಇತರರಿದ್ದರು.