Take action to prevent leopard infestation 
ರಾಜ್ಯ

ಚಿರತೆ ಹಾವಳಿ ತಡೆಗಟ್ಟಲು ಕ್ರಮ ಕೈಗೊಳ್ಳಿ

ತುಮಕೂರು ಡೆಸ್ಕ್
ತುರುವೇಕೆರೆ: ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿ ತಾಲೂಕಿನಲ್ಲಿನ ಚಿರತೆ ಹಾವಳಿಯನ್ನು ತಡೆಗಟ್ಟಬೇಕು ಎಂದು ಮಾಜಿ ಶಾಸಕ ಮಸಾಲ ಜಯರಾಮ್​ ತಿಳಿಸಿದರು.
ತಾಲೂಕಿನ ಅರೇಮಲ್ಲೇನಹಳ್ಳಿಯಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದ ರೈತ ಮಹಿಳೆ ಸುಜಾತಾ ಕುಟುಂಬಕ್ಕೆ 50 ಸಾವಿರ ನೆರವು ನೀಡಿ, ಸಾಂತ್ವನ ಹೇಳಿ ಮಾತನಾಡಿದ ಅವರು, ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ರೈತರು ತಮ್ಮ ತೋಟದ ಕೃಷಿ ಕೆಲಸಗಳು ಮಾಡಲು, ಜಾನುವಾರುಗಳನ್ನು ಮೇಯಿಸಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಚಿರತೆ ಹಿಡಿಯಲು ತುರ್ತು ಕ್ರಮ ಕೈಗೊಳ್ಳಬೇಕು. ಮಹಿಳೆ ಮೇಲೆ ದಾಳಿ ಮಾಡಿದ ಸ್ಥಳದ ಅಸು ಪಾಸಿನಲ್ಲಿ ಅರಣ್ಯ ಇಲಾಖೆ 2 ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಈ ರೀತಿಯ ಟನೆ ತಾಲೂಕಿನಲ್ಲಿ ಮರುಕಳಿಸಬಾರದು ಎಂದು ಎಚ್ಚರಿಸಿದರು.