ತುರುವೇಕೆರೆ ತಾಲೂಕು protest ಬಿ.ಸಿ.ಕಾವಲ್​ನಲ್ಲಿ ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕ್ರಮಕ್ಕಾಗಿ ವಿವಿಧ ಸಂಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀನಿವಾಸ್​ಗೌಡ, ಪಪಂ ಮಾಜಿ ಅಧ್ಯಕ್ಷ ಚಿದಾನಂದ್​, ಡಿಎಸ್​ಎಸ್​ ರಾಜ್ಯ ಮಹಿಳಾ ಘಟಕ ಸಂಘಟನಾ ಸಂಚಾಲಕಿ ಲಾವಣ್ಯ, ಜಿಲ್ಲಾ ಸಂಘಟನಾ ಸಂಚಾಲಕ ಕುಣಿಗಲ್​ ಶಿವಶಂಕರ್​ ಇದ್ದರು.  
ರಾಜ್ಯ

ನಕಲಿ ದಾಖಲೆ ಸೃಷ್ಟಿಸಿದವರ ಮೇಲೆ ಕ್ರಮವಹಿಸಿ protest

ತುಮಕೂರು ಡೆಸ್ಕ್
ತುರುವೇಕೆರೆ: ತಾಲೂಕಿನ ಬಿ.ಸಿ.ಕಾವಲ್​ ಸರ್ವೇ ನಂ.1ರಲ್ಲಿ ನಕಲಿ ದಾಖಲಾತಿ ಸೃಷ್ಟಿಸಿರುವ ಅಧಿಕಾರಿಗಳು protest ಹಾಗೂ ಭೂ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ಕರ್ನಾಟಕ ದಲಿತ ಸಂರ್ಷ ಸಮಿತಿ(ಬಿ.ಕೃಷ್ಣಪ್ಪಸ್ಥಾಪಿತ)ಯಿಂದ ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಅದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ಮೆರವಣಿಗೆಯಲ್ಲಿ ಬಂದು ಬಾಣಸಂದ್ರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು. ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ಕೈಗೊಂಡರು.
ಡಿಎಸ್​ಎಸ್​ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನ ಶಿವರಕುಮಾರ್​ ಮಾತನಾಡಿ, ದಂಡಿನಶಿವರ ಹೋಬಳಿ ಬಿ.ಸಿ. ಕಾವಲ್​ ಸರ್ವೇ ನಂ.1 ರಲ್ಲಿ ಹಲವು ದಶಕಗಳಿಂದ ಸ್ಥಳಿಯ ರೈತರು ಉಳುಮೆ ಮಾಡಿ ಜೀವನ ಸಾಗಿಸುತ್ತಿದ್ದಾರೆ ಹಾಗೂ ಸರ್ಕಾರದಿಂದ ಸಾಗುವಳಿ ಚೀಟಿ ಪಡೆದಿದ್ದಾರೆ. ಆದರೆ ಕೆಲವರು ಭೂ ಮಾಫೀಯಾದಾರರು ನಕಲಿ ದಾಖಲೆ ಸೃಷ್ಟಿಸಿ, ಕೆಲ ಸಂಘಟನೆಗಳ ಹೆಸರನ್ನು ದುರ್ಬಳಿಕೆ ಮಾಡಿಕೊಂಡು ಬಂದಿರುವ ದಲ್ಲಾಳಿಗಳು ಭೂ ಕಬಳಿಕೆಗೆ ಹುನ್ನಾರ ನೆಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬಗ್ಗೆ ಸ್ಥಳಿಯ ರೈತರು ಪ್ರಶ್ನಿಸಲು ಹೋದರೆ ಜಾತಿ ನಿಂದನೆ ಕೇಸ್​ ಹಾಕಸುವ ಬೆದರಿಕೆ ಹಾಕಿ ಕಳಿಸುತ್ತಿದ್ದಾರೆ. ಈ ವಿಚಾರವಾಗಿ ಪೊಲೀಸ್​, ಕಂದಾಯ ಇಲಾಖೆ ಅಧಿಕಾರಿಗಳಿಗೂ ದೂರು ನೀಡಿದರೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಆದ್ದರಿಂದ ರಸ್ತೆತಡೆ ನಡೆಸಿ ಹೋರಾಟ ಮಾಡಲಾಗುತ್ತಿದೆ. ಕೂಡಲೇ ಭೂ ಮಾಫೀಯ ದಲ್ಲಾಳಿಗಳ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ನಾಗರಾಜು, ದಯಾನಂದ್​ ಹಟ್ನ, ತಾಲೂಕು ಸಂಚಾಲಕ ಮಲ್ಲೂರು ತಿಮ್ಮೇಶ್​, ಮುಖಂಡರಾದ ಗೋವಿಂದರಾಜ್​, ಬಸವರಾಜು, ತಮ್ಮಯ್ಯ, ಶಿವಣ್ಣ, ವಿನಯ್​, ಸಂತೋಷ್​, ಕೆಂಪಣ್ಣ, ಅಬ್ಜಲ್​ ಇದ್ದರು.