ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುಚಿಗೊಳಿಸಿದ್ದನ್ನು ಖಂಡಿಸಿ ಶಹಾಬಾದ್ ತಾಲೂಕಿನ ಭಂಕೂರ ಕ್ರಾಸ್ನಲ್ಲಿ ಖರ್ಗೆ ಅಭಿಮಾನಿಗಳ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಸಲಾಯಿತು. ಚಂದು ಜಾಧವ್, ಸುರೇಶ ಮೆಂಗನ್, ನಾಮದೇವ ರಾಠೋಡ್ ಇತರರಿದ್ದರು
- ಭಂಕೂರ ಕ್ರಾಸ್ನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
- ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಕೆ
ಶಹಾಬಾದ್: ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆ ಶುದ್ಧೀಕರಣ ಮಾಡಿರುವುದನ್ನು ಖಂಡಿಸಿ ಭಂಕೂರ ಕ್ರಾಸ್ನಲ್ಲಿ ದಲಿತ ಸಂರ್ಷ ಸಮಿತಿ, ಗ್ರಾಮೀಣ ಬಂಜಾರ ಸಮಾಜ, ಖರ್ಗೆ ಅಭಿಮಾನಿ ಬಳಗ ಸೇರಿ ವಿವಿಧ ಸಂಘಟನೆಗಳಿಂದ ಭಂಕೂರ ಕ್ರಾಸ್ ಬಳಿ ಸಂಚಾರ ತಡೆದು ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 8 ದಶಕ ಕಳೆದರೂ ಇನ್ನೂ ಮನುವಾದಿ ಮನಸ್ಥಿತಿಯವರು ತಮ್ಮ ಕೃತ್ಯ ಮುಂದುವರಿಸುತ್ತಿದ್ದಾರೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ತೊಲಗುವವರೆಗೂ ಸಂವಿಧಾನದ ಮೂಲ ಆಶಯ ಈಡೇರುವುದಿಲ್ಲ. ಡಾ.ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುಚಿಗೊಳಿಸಿ, ಹೋಮ-ಹವನ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ನೀಲಪ್ರಭ ಬಬಲಾದ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ದಸಂಸ (ಪೊ.ಕೃಷ್ಣಪ್ಪ ಬಣ) ರಾಜ್ಯ ಸಂಘಟನಾ ಸಂಚಾಲಕ ಸುರೇಶ ಮೆಂಗನ್, ಬಂಜಾರ ಸಮಾಜದ ಮುಖಂಡರಾದ ಚಂದು ಜಾಧವ್, ನಾಮದೇವ ರಾಠೋಡ್, ಪ್ರಮುಖರಾದ ಜಗದೀಶ ಚವ್ಹಾಣ್, ಸಿದ್ದಮ್ಮ ದೇವನ, ಶರಣಬಸಪ್ಪ ದನ್ನ, ರಾಜು ಚವ್ಹಾಣ್, ಮುಜಾಹೀದ್ ಹುಸೇನ್, ರಾಜು ರಾಠೋಡ್, ಭೀಮಯ್ಯ ಗುತ್ತೇದಾರ್, ರಾಜೇಶ ಯನಗುಂಟಿ, ಭರತ ಧನ್ನಾ, ಶಂಕರ ಚವ್ಹಾಣ್, ದೇವರಾಜ ರಾಠೋಡ್, ಜಾಕೀರ್ ಹುಸೇನ್, ಗಂಗಾರಾಮ ರಾಠೋಡ್, ಮುನ್ನಾ ಪಟೇಲ್, ಭರತ ಜಾಧವ್, ರಾಜು ಪವಾರ್, ರಮೇಶ ಕಂಠಿ, ಸುಭಾಷ ಜಾಧವ್, ಭೀಮು ವಾಲಿಕಾರ, ಅಶೋಕ ಕಾಂಬಳೆ, ರಾಜು ಸಾಗರ ಇತರರಿದ್ದರು.