ಪ್ರಚೋದನಕಾರಿ ಭಾಷಣ ಮಾಡಿರುವ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ರ್ಖಗೆ ಅವರ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸಿ ಸೇಡಂನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಆರಕ್ಷಕ ಪೊಲೀಸ್ ಉಪ ನಿರೀಕ್ಷಕರಿಗೆ ದೂರು ಸಲ್ಲಿಸಲಾಯಿತು. ವಿನೋದ ಸಾಹುಕಾರ, ರಾಮು ಕಣೇಕಲ್, ತಿರುಪತಿ ಶಹಬಾದಕರ್, ರಾವೇಂದ್ರ ಮೆಕಾನಿಕ್ ಇತರರಿದ್ದರು.
- ಸೇಡಂನಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಪೊಲೀಸರಿಗೆ ದೂರು
ಸೇಡಂ: ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜು ರ್ಖಗೆ ಅವರು ಅಸ್ಸಾಂ ಚುನಾವಣೆ ಪ್ರಚಾರ ಭಾಷಣದಲ್ಲಿ ಪ್ರಚೋದನಕಾರಿ ಮಾತುಗಳನ್ನಾಡಿ, ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರನ್ನು ಕೊಲ್ಲುವಂತೆ ಪ್ರೇರೇಪಣೆ ನೀಡಿದ್ದಾರೆ. ಕೂಡಲೇ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಬಿಜೆಪಿ ಯುವ ಮೋರ್ಚಾ ತಾಲೂಕು ಟಕ ಒತ್ತಾಯಿಸಿದೆ.
ಆರಕ್ಷಕ ಉಪ ನಿರೀಕ್ಷಕ ಉಪ್ಪೇಂದ್ರಕುಮಾರ ಅವರಿಗೆ ಸೋಮವಾರ ದೂರು ಸಲ್ಲಿಸಿದ ಪ್ರಮುಖರು, ನಮಾಜ್ ಮಾಡುವ ಸಂದರ್ಭದಲ್ಲಿ ವಿಷ ಸರ್ಪ ಬಂದರೆ ಕೊಲ್ಲಬೇಕು, ಇಲ್ಲವಾದಲ್ಲಿ ನೀವು ಬದುಕುವುದಿಲ್ಲ. ಹೀಗೆಂದು ಕುರಾನ್ ಹೇಳುತ್ತದೆ. ಅಂತಹದೇ ರೀತಿಯ ಬಿಜೆಪಿ, ಆರ್ಎಸ್ಎಸ್ ಅವರನ್ನು ಕೊಲ್ಲಬೇಕು ಎನ್ನುವ ಮಾತುಗಳನ್ನಾಡಿದ್ದಾರೆ. ಇದರಿಂದಾಗಿ ದೇಶದಲ್ಲಿನ ಪಕ್ಷ ಹಾಗೂ ಸಂದ ಕಾರ್ಯಕರ್ತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದೊಂದು ಸಂ ಪರಿವಾರದ ಮೇಲೆ ರ್ಖಗೆ ಅವರು ಮಾಡಿದ ದಾಳಿಯಾಗಿದೆ ಎಂದು ದೂರಿದ್ದಾರೆ.
ಭಾಷಣದಿಂದ ದಾಳಿಗಾಳಿಗಳು ಆಗಬಹುದು. ಧಾರ್ಮಿಕ ಮತ್ತು ಸಮುದಾದಯಗಳ ನಡುವಿನ ಸೌಹಾರ್ದತೆಗೆ ದಕ್ಕೆಯಾಗುತ್ತದೆ. ಹೀಗಾಗಿ ಕೂಡಲೇ ಸ್ವಯಂ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಕಾನೂನಿನ ಕ್ರಮಕ್ಕೆ ಮುಂದಾಗಬೇಕು ಎಂದು ಕೋರಿದ್ದಾರೆ.
ಯುವ ಮೋರ್ಚಾ ತಾಲೂಕು ಅಧ್ಯಕ್ಷ ವಿನೋದ ಸಾಹುಕಾರ ದುಗನೂರ, ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಮು ಕಣೇಕಲ್, ಪುರಸಭೆ ಮಾಜಿ ಸದಸ್ಯ ಶಿವಾನಂದ ಸ್ವಾಮಿ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ತಿರುಪತಿ ಶಹಬಾದಕರ್, ರಾವೇಂದ್ರ ಮೆಕಾನಿಕ್, ಪ್ರಮುಖರಾದ ನಾಗು ಸಾಹುಕಾರ ಕೋಡ್ಲಾ, ಸಿದ್ದುಗೌಡ ದೇವನೂರ, ಜೈಪ್ರಕಾಶ ರಾಠೋಡ್, ಮಹಾವೀರ ಅಳ್ಳೊಳ್ಳಿ, ವಿಷ್ಣು ಊಡಗಿ, ರಾಜು ಭೋವಿ, ಜಗದೀಶ ಸೇಡಂ, ನಾಗರಾಜ ಹಾಬಾಳ ಇತರರಿದ್ದರು.