ಖ್ಯಾತ ತಬಲಾ ವಾದಕ ಪಂಡಿತ್ ಟಿ.ರಂಗ ಪೈ ಅವರು ತಬಲ ನಾದ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ 
ರಾಜ್ಯ

ನ.1ಕ್ಕೆ ತಬಲಾ ನಾದ ಸಾಧಕ ಪ್ರಶಸ್ತಿ ಪ್ರದಾನ

ಶ್ರೀ ಗುರು ಸಮರ್ಥ ಸಂಗೀತ ವಿದ್ಯಾಲಯದ ಸಂಗೀತೋತ್ಸವ

ಬೆಂಗಳೂರು : ಕುಮಾರಸ್ವಾಮಿ ಲೇಔಟ್‌ನ ಶ್ರೀಗುರು ಸಮರ್ಥ ಸಂಗೀತ ವಿದ್ಯಾಲಯದ 23ನೇ ವಾರ್ಷಿಕೋತ್ಸವದ ಅಂಗವಾಗಿ ನ.1 (ಭಾನುವಾರ) ರಂದು ಸಂಗೀತೋತ್ಸವ ಹಾಗೂ ತಬಲಾ ನಾದ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.

ಖ್ಯಾತ ತಬಲಾ ವಾದಕ ಪಂಡಿತ್ ಟಿ.ರಂಗ ಪೈ ಅವರಿಗೆ 2026ನೇ ಸಾಲಿನ ತಬಲಾ ನಾದ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಜಯನಗರದ ಶ್ರೀ ಜಯರಾಮ ಸೇವಾ ಮಂಡಳಿ ಮಧ್ಯಾಹ್ನ 3.30ರಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಸಂಗೀತ ಕ್ಷೇತ್ರದ ಸಾಧನೆ ಹಾಗೂ ಕಲಾ ಸೇವೆಯನ್ನು ಗುರುತಿಸಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಈ ಕಾರ್ಯಕ್ರಮದ ಮೂಲಕ ಸಂಗೀತ ಕಲಾವಿದರನ್ನು ಗೌರವಿಸುವುದರ ಜತೆಗೆ, ಶಾಸ್ತ್ರೀಯ ಸಂಗೀತ ಮತ್ತು ವಾದ್ಯ ಸಂಗೀತದ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತದೆ.

ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದ ವಿವಿಧ ಗಣ್ಯರು ಭಾಗವಹಿಸಲಿದ್ದು, ಗಾಯನ ಹಾಗೂ ತಬಲಾ ವಾದನ ಸೇರಿದಂತೆ ವಿವಿಧ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿದ್ಯಾಲಯದ ಅಧ್ಯಕ್ಷ ಪಂಡಿತ್ ಅಮೃತೇಶ್ ಕುಕಲಕರ್ಣಿ ತಿಳಿಸಿದ್ದಾರೆ.