ಬೆಂಗಳೂರಿನಲ್ಲಿ ಆಯೋಜಿಸಿದ್ದ ತಾಲ್ ಯಾತ್ರಾ ಸಂಗೀತ ನೃತ್ಯ ಸಂಗಮ ಕಾರ್ಯಕ್ರಮದಲ್ಲಿ ಪಂಡಿತ್ ಸುಧಾಂಶು ಕುಲಕರ್ಣಿ ಅವರ ಹಾಮೋರ್ನಿಯಂ ಸೋಲೋಗೆ ಪಂಡಿತ್ ಸತೀಶ ಹಂಪಿಹೊಳಿ ಅವರು ತಬಲಾ ಸಾಥ್ ನೀಡಿದರು.
- ಬೆಂಗಳೂರಿನಲ್ಲಿ ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ ಕಾರ್ಯಕ್ರಮ
ಬೆಂಗಳೂರು: ಸತೀಶ್ ಹಂಪಿಹೊಳಿ ಮ್ಯೂಸಿಕ್ ಫೌಂಡೇಷನ್ ಟ್ರಸ್ಟ್ನಿಂದ ನಗರದ ಕನಕಪುರ ರಸ್ತೆಯ ದೊಡ್ಡಕಲ್ಲಸಂದ್ರದಲ್ಲಿನ ಶಂಕರ ಫೌಂಡೇಷನ್ನ ಢಮರು ಆಡಿಟೋರಿಯಮ್ನಲ್ಲಿ ಶನಿವಾರ ಆಯೋಜಿಸಿದ್ದ "ತಾಲ್ ಯಾತ್ರಾ' ಸಂಗೀತ ನೃತ್ಯ ಸಂಗಮ ಕಾರ್ಯಕ್ರಮ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿತು.
ಹಿರಿಯ ಪತ್ರಕರ್ತ ರವೀಂದ್ರ ಭಟ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರು-ಶಿಷ್ಯ ಪರಂಪರೆಯಲ್ಲಿಯೇ ನಿಜವಾದ ವಿದ್ವಾಂಸರನ್ನು ಬೆಳೆಸಲು ಸಾಧ್ಯ. ಅದನ್ನು ಹಂಪಿಹೊಳಿ ಅವರ ಮ್ಯೂಸಿಕಲ್ ಟ್ರಸ್ಟ್ನಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ಕಲಾಶ್ರೀ ಮೃತ್ಯುಂಜಯ ಶೆಟ್ಟರ್ ಮಾತನಾಡಿ, ಗಾಯನ, ವಾದನ, ನರ್ತನ ಎಂಬ ಭೇದವಿಲ್ಲದೆ ಜಗತ್ತಿನ ಎಲ್ಲ ಕಲೆಗಳು ಬೆಳೆಯಬೇಕೆಂದು ಸತೀಶ್ ಹಂಪಿಹೊಳಿ ಅವರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ ತ ವೂಡೇ ಪಿ.ಕೃಷ್ಣ ಮಾತನಾಡಿದರು. ಸುಧಾಂಶು ಕುಲಕರ್ಣಿ ಅವರಿಗೆ ಪಂಡಿತ್ ಬಸವರಾಜ ಬೆಂಡಿಗೇರಿ ಅವರ ಸ್ಮರಣಾರ್ಥ ನೀಡುವ "ಗುರು ಗೌರವ ಪ್ರಶಸ್ತಿ' ನೀಡಿ ಗೌರವಿಸಲಾಯಿತು. ಟ್ರಸ್ಟ್ ಅಧ್ಯ ಸತೀಶ ಹಂಪಿಹೊಳಿ, ಕಾಂತಿ ಸ್ವೀಟ್ಸ್ ಮಾಲೀಕ ಶೈಲೇಂದ್ರ ಶರ್ಮಾ, ಮೃದಂಗ ವಾದಕ ಆನೂರು ಅನಂತಕೃಷ್ಣ ಶರ್ಮಾ ಮತ್ತು ಸಾಹಿತಿ ಅಶುತೋಷ ಶರ್ಮ ಇತರರಿದ್ದರು.